Skip to main content

Blog number 1537. ಆನಂದಪುರಂ ಇತಿಹಾಸ ಭಾಗ 19

#ಆನಂದಪುರಂ_ಇತಿಹಾಸ_ಭಾಗ_19
 
#ವಿದ್ಯಾಮಂತ್ರಿ_ಬದರಿನಾರಾಯಣ್_ಅಯ್ಯಂಗಾರ್_ವ್ಯಾಸಂಗ_ಮಾಡಿದ_ಪ್ರಾಥಮಿಕ_ಶಾಲೆ

#ಈ_ಶಾಲೆಗೆ_ಭೂದಾನ_ಮಾಡಿದ_ಸ್ಕೂಲ್_ರಾಮಣ್ಣ

#ದೀರ್ಘಕಾಲ_ಶಿಕ್ಷಕ_ವೃತ್ತಿಮಾಡಿದ್ದ_ಲೋಬೋ_ಮಾಸ್ಟರ್_ಮತ್ತು_ಅವರ_ಪತ್ನಿ_ಲಿಲ್ಲಿಬಾಯಿ_ಟೀಚರ್

#ಇವರ_ಶಿಸ್ತಿನ_ಜೀವನ_ಆನಂದಪುರಂಗೆ_ಮಾದರಿ.

#ಆನಂದಪುರಂ_ಸ್ಟೇಟ್_ಬ್ಯಾಂಕ್_ಮೈಸೂರಿನ_ಉದ್ಘಾಟನೆಗೆ_ಮುಖ್ಯಮಂತ್ರಿ_ನಿಜಲಿಂಗಪ್ಪರಿಂದ .

#ಅವತ್ತೇ_ಹೊಸಗುಂದದಲ್ಲಿ_ಹೆಡತ್ರಿ_ನಾಗರಾಜಗೌಡರ_ತಂದೆ
#ಊರಿಗೆ_ನಿರ್ಮಿಸಿಕೊಟ್ಟಿದ್ದ_ಶಾಲೆ_ತೆರೆದಬಾವಿ_ಉದ್ಘಾಟಿಸಿದರು.


  ಈ ಶಾಲೆ ಆನಂದಪುರಂ ಜಾಮೀಯ ಮಸೀದಿ ಎದರು ಇದೆ , ಈ ಶಾಲೆಗೆ ಜಾಗ ಭೂದಾನ ನೀಡಿದವರು ರಾಮಣ್ಣ ಅಂತ.ಆಗಿನ ಊರಿನ ಮಕ್ಕಳಿಗೆ ವಿದ್ಯೆ ದೊರೆಯಲೆಂಬ ಸದುದ್ದೇಶದಿಂದ  ಶಾಲೆಯ ಜಾಗ ಮತ್ತು ಪೋಲಿಸ್ ವಸತಿ ಗೃಹ ನಿರ್ಮಿಸಿದ ಜಾಗ (ಈಗ ಇದು ಅತ್ಯಂತ ಬೆಲೆಯ ನಿವೇಶನ) ದಾನ ಮಾಡಿದ್ದರಿಂದ ಆ ಮನೆತನಕ್ಕೆ ಸ್ಕೂಲ್ ಮನೆತನ ಎಂತಲೇ ಹೆಸರು ತಲೆಮಾರಿಂದ ತಲೆಮಾರಿಗೆ ಮುಂದುವರಿದಿದೆ.ಆನಂದಪುರಂನ ಪತ್ರಕರ್ತ ಹಾಗೂ ಉತ್ಸಾಹಿ ಸಮಾಜ ಸೇವಕರಾದ ಬಿ.ಡಿ. ರವಿಯ ತಾಯಿಯಾದ ಲಕ್ಷ್ಮಮ್ಮನವರ ಅಜ್ಜ ರಾಮಣ್ಣನವರೆ ಈ ಶಾಲೆಗೆ ಭೂದಾನ ನೀಡಿದವರು.
  ಅವರು ನೀಡಿದ ದಾನದ ಜಾಗದಲ್ಲಿ ಬ್ರಿಟಿಶ್ ಸರ್ಕಾರ ಶಾಲೆ ನಿಮಿ೯ಸಿತು,ಅಲ್ಲಿ ಅನೇಕ ಜಗದ್ಪ್ರಸಿದ್ಧರು ಓದಿದರು. ಅದರಲ್ಲಿ ಇಲ್ಲಿ ಅಕ್ಷರ ಕಲಿತ ಜಮೀನ್ದಾರ್ ರಾಮಕೃಷ್ಣ ಆಯ್ಯಂಗಾರರ ಎರಡನೆ ಪುತ್ರ ಬದರಿನಾರಾಯಣ ಅಯ್ಯಂಗಾರ್ ರು ಮುಂದೆ ದೇವರಾಜ್ ಅರಸರ ಸಂಪುಟದಲ್ಲಿ ವಿದ್ಯಾ ಮಂತ್ರಿ ಆಗಿದ್ದು ಇತಿಹಾಸ, ಶಾಲೆಗೆ ಜಾಗ ನೀಡಿದ ರಾಮಣ್ಣ ಈಗಿಲ್ಲ ಆದರೆ ಆ ಕುಟುಂಬದವರಿಗೆ ಇದು ಒಂದು ಹೆಮ್ಮೆಯ ಸಾರ್ಥಕತೆ ನೀಡಿದ ವಿಚಾರ.
   ಇಲ್ಲಿ ದೀರ್ಘ ಕಾಲ ಶಿಕ್ಷಕ ವೃತ್ತಿ ಮಾಡಿದ ನಾಲ್ಕು ಜನರು ಆನಂದಪುರಂನ ಜನ ಮಾನಸದಲ್ಲಿ ಇನ್ನೂ ಉಳಿದಿದ್ದಾರೆ, ಇದರಲ್ಲಿ ಬೆಂಗಳೂರಿನ ಮೂಲದ ಲೋಬೋ ಮಾಸ್ಟರ್ ದಂಪತಿಗಳು ಕೂಡ ಒಬ್ಬರು.
   ತುಂಬಾ ಶಿಸ್ತಿನ ಜೀವನ ಅಳವಡಿಸಿಕೊಂಡಿದ್ದ ಲೋಬೋ ಮಾಸ್ಟರ್ ಸೇವಾದಳದಲ್ಲಿದ್ದವರು, ನಿತ್ಯ ಶೇವ್ ಮಾಡಿಯೇ ಶಾಲೆಗೆ ಬರುತ್ತಿದ್ದರು,ಅವರ ನಿತ್ಯ ಉಡುಪು ಕೂಡ ಬಿಳಿ ಶರ್ಟ್ ಇನ್ ಮಾಡಿದ ಕಪ್ಪು ಪ್ಯಾಂಟ್, ಲೆದರ್ ಬೆಲ್ಟ್ ಮತ್ತು ಶೂ ದರಿಸುತ್ತಿದ್ದರು.
  ಇವರ ಪತ್ನಿ ಲಿಲ್ಲಿ ಬಾಯಿ ಟೀಚರ್ ಕೂಡ ಅಷ್ಟೇ ಶಿಸ್ತಿನ ಶಿಕ್ಷಕಿ ಇವರಿಬ್ಬರು ಕನ್ನಡ ಅ ಆ ಇ ಈ ಅಕ್ಷರದಿಂದ ಪ್ರಾರಂಬಿಸಿ ಒತ್ತಕ್ಷರ, ಕಾಗುಣಿತ, ಅಕ್ಷರ ದುಂಡಾಗಲು ಕಾಫಿ ಪುಸ್ತಕ, ಪದ್ಯಗಳು ಹೀಗೆ ನಾಲ್ಕನೇ ತರಗತಿ ಮುಗಿಸುವಾಗಲೇ ಒಬ್ಬ ಆದರ್ಶ ವಿದ್ಯಾರ್ಥಿಯನ್ನಾಗಿ ತಯಾರಿಸಿ ಬಿಡುತ್ತಿದ್ದ ಆದರ್ಶ ಶಿಕ್ಷಕ ದಂಪತಿಗಳು ಇವರು.
   ಲೋಬೋ ಮಾಸ್ಟರ್ ಆರ್.ಎಂ.ಪಿ. ಡಾಕ್ಟರ್ ಕೂಡ ಶಾಲೆ ಅವದಿ ನಂತರ ಮನೆಗೆ ಬಂದವರಿಗೆ ಚಿಕಿತ್ಸೆಯೂ ನೀಡುತ್ತಿದ್ದರು. 
 ಆಗ ಅವರ ಮನೆ ಸಾಗರ ರಸ್ತೆಯ ಮಸೀದಿ ಎಡಬಾಗದಲ್ಲಿನ ಕೆರೆಹಿತ್ತಲಿನ ಕೆಂಜಿಗಪ್ಪ ಗೌಡರ ಜೋಡಿ ಮನೆ, ಈಗ ಇದು ಇವರ ಮಗ ಜ್ಯೋತಿಷಿ ಕಲ್ಮಕ್ಕಿ ಬೂದ್ಯಪ್ಪ ಗೌಡರ ಪಾಲಿಗೆ ಬಂದಿದೆ.
  ಲೋಬೋ ಮಾಸ್ಟರ್ ಮತ್ತು ಆನಂದಪುರಂನ ಪ್ರೌಡ ಶಾಲೆಯ ದೈಹಿಕ ಶಿಕ್ಷಕರಾಗಿದ್ದ ಜನಪ್ರಿಯ ಎಸ್.ಆರ್.ಕೃಷ್ಣಪ್ಪ ಇಬ್ಬರೂ ಸೇರಿ ಇಡೀ ಆನಂದಪುರಂನಲ್ಲಿ ರಾಷ್ಟ್ರೀಯ ಹಬ್ಬದಲ್ಲಿ ನಡೆಸುತ್ತಿದ್ದ ಪ್ರಬಾತ್ ಪೇರಿಗಳ ಅಚ್ಚುಕಟ್ಟುತನ ಈವರೆಗೂ ಸಾಧ್ಯವಾಗಲಿಲ್ಲ ಎಂದೇ ಆನಂದಪುರಂ ನಿವಾಸಿಗಳು ನೆನಪು ಮಾಡುತ್ತಾರೆ.
   ಆನಂದಪುರಂಗೆ ಬ್ಯಾಂಕ್ ತಂದ ಕಥೆಯೂ ರೋಚಕ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮಂಜೂರು ಮಾಡಿಸಿ ಈಗಿನ ಬಸ್ ಸ್ಟಾಂಡ್ ಇದ್ದ ಜಾಗದಲ್ಲಿ ನಿರ್ಮಿಸಿದ್ದ, ಇಡೀ ಆನಂದಪುರಂಗೆ ಮೊದಲ RCC ಕಟ್ಟಡದಲ್ಲಿ ಉದ್ಘಾಟನೆ ಮಾಡಲು ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪ ಅವರನ್ನು ಆಗಿನ  ಶಾಸಕರು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ನಿರ್ದೇಶಕರು ಆಗಿದ್ದ ಬದರಿನಾರಾಯಣ ಅಯ್ಯಂಗಾರರು ಕರೆ ತರುತ್ತಾರೆ, ಅವರಿಗೆ ಸೇವಾದಳವತಿಯಿಂದ ಆನಂದಪುರದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ನೀಡಿದ ಸ್ವಾಗತ ಅವತ್ತು ಮುಖ್ಯಮಂತ್ರಿಗಳಾಗಿದ್ದ ನಿಜಲಿಂಗಪ್ಪರಿಗೆ ಸಂತೋಷ ಉಂಟು ಮಾಡಿತ್ತಂತೆ.
  ಅವತ್ತೇ ನಿಜಲಿಂಗಪ್ಪನವರು ಹೊಸಗುಂದಕ್ಕೆ ಹೋಗಿ ಅಲ್ಲಿ ಹೆಡತ್ರಿ ನಾಗರಾಜಗೌಡರ ತಂದೆ ಮಲ್ಲಪ್ಪ ಗೌಡರು ಊರಿಗೆ ನಿರ್ಮಿಸಿ ಕೊಟ್ಟ ಪ್ರಾಥಮಿಕ ಶಾಲೆ, ಪರಿಶಿಷ್ಟ ಜಾತಿ ಕಾಲೋನಿಗೆ ನಿರ್ಮಿಸಿದ ತೆರೆದ ಬಾವಿ ಉದ್ಘಾಟಿಸಿ ಜೋಗದಲ್ಲಿ ತಂಗುತ್ತಾರೆ.
   ಲೋಬೊ ಮಾಸ್ಟರ್ ಮತ್ತು ಲಿಲ್ಲಿ ಬಾಯಿ ಟೀಚರ್ ಗೆ ಮೂವರು ಗಂಡು ಮಕ್ಕಳು ಮತ್ತು ಇಬ್ಬರು ಪುತ್ರಿಯರು, ದೊಡ್ಡ ಮಗ ಪ್ಯಾಟ್ರಿಕ್ ಸಿಂಡಿಕೇಟ್ ಬ್ಯಾಂಕ್ ಉದ್ಯೋಗ ತೊರೆದು ಕೆಲ ವರ್ಷ ಮಸ್ಕತ್ ನಲ್ಲಿ ಉದ್ಯೋಗ ಮಾಡಿ ಬೆಂಗಳೂರಲ್ಲಿ ನೆಲೆಸಿದ್ದಾರೆ, ಪುತ್ರಿಯರಾದ ಜಾನ್ಸಿ ಮತ್ತು ಸಲೀನ ಕೂಡ ಶಿಕ್ಷಕ ವೃತ್ತಿಯ ಜೊತೆ ಬೆ೦ಗಳೂರಲ್ಲಿ ತಮ್ಮ ಸಂಸಾರದ ಜೊತೆ ಇದ್ದಾರೆ.
  ಇನ್ನಿಬ್ಬರು ಗಂಡು ಮಕ್ಕಳು ಜಾನ್ ಮತ್ತು ಸ್ಟಾನಿ ಕೂಡ ಬೆಂಗಳೂರಲ್ಲಿ ನೆಲೆಸಿದ್ದಾರೆ.
   ನನಗೆ ಇವರಿಬ್ಬರೂ ಅಚ್ಚುಮೆಚ್ಚಿನ ಶಿಕ್ಷಕರೂ ಕೂಡ, ನಾನು ಲೋಬೋ ಮಾಸ್ಟರ್ ಮತ್ತು ಲಿಲ್ಲಿ ಬಾಯಿ ಟೀಚರ್ ರ ನೆಚ್ಚಿನ ವಿದ್ಯಾರ್ಥಿಯೂ ಆಗಿದ್ದೆ.ಅವರು ಕಲಿಸಿದ ಕನ್ನಡ ಭಾಷೆಯ ಶಿಕ್ಷಣ ನನಗೆ ಇಂತಹ ಲೇಖನ ಬರೆಯಲು ಸ್ಪೂರ್ತಿ ಆಯಿತು, ಇವರಿಬ್ಬರೂ ಇಹ ಲೋಕ ತ್ಯಜಿಸಿದ್ದಾರೆ ಆದರೆ ಆನಂದಪುರ೦ನಲ್ಲಿ ಇವರಿಂದ ವಿದ್ಯೆ ಕಲಿತ ಎಲ್ಲರ ಹೃದಯದಲ್ಲೂ ಇವರ ವ್ಯಕ್ತಿತ್ವ ಅಚ್ಚೊತ್ತಿದೆ.
  ಆನಂದಪುರಂ ವಾಸಿಗಳಿಗೆ ಮತ್ತು ಇವರ ವಿದ್ಯಾಥಿ೯ಗಳಾಗಿದ್ದವರಿಗೆ ಮರತೇ ಹೋಗಿದ್ದ ಈ ಅತ್ಯುತ್ತಮ ಶಿಕ್ಷಕ ದಂಪತಿಗಳಾದ ಲೋಬೊ ಮಾಸ್ಟರ್ ಮತ್ತು ಲಿಲ್ಲಿ ಬಾಯಿ ಟೀಚರ್ ರ ಪೋಸ್ಟ್ ಮಾಡಿದ ಈ ಫೋಟೋಗಳು ಎಲ್ಲರನ್ನೂ ಪುನಃ ಹಳೆಯ ಕಾಲಕ್ಕೆ ಖಂಡಿತಾ ಕರೆದೊಯ್ಯುತ್ತದೆ.
(ನಾಳೆ ಭಾಗ- 20)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...