Blog number 1526. ರಿಪ್ಪನ್ ಪೇಟೆ ಎಂಬ ಊರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೋಬಳಿ ಕೇಂದ್ರ ಈ ಹೆಸರು ನಾಮಕರಣಕ್ಕೆ ಕಾರಣ.
ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ#
ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.
ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.
ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪಾ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ ಅಂತ.
ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.
ಇದೇ ಸಂದಭ೯ದಲ್ಲಿ ರೈಲ್ವೆ ಅಧಿಕಾರಿಗಳು ಯೋಜಿತ ರೈಲು ಮಾಗ೯ ವೀಕ್ಷಣೆಗೆ ಬರುವ ಕಾಯ೯ಕ್ರಮ ನಿಗದಿ ಆಯಿತು. ಆಗ ಊರ ಪ್ರಮುಖರು ಅವರನ್ನು ಸ್ವಾಗತಿಸಿ ಅವರಿಗೆ 50 ವಷ೯ದ ಹಿಂದೆ ಲಾರ್ಡ್ ರಿಪ್ಪನ್ ಶಿಕಾರಿಗಾಗಿ ಈ ಊರಲ್ಲಿ ತಂಗಿದ್ದ ಸವಿ ನೆನಪಿಗಾಗಿ ಈ ಊರಿಗೆ ರಿಪ್ಪನ್ ಪೇಟೆ ಎಂದು ನಾಮಕರಣ ಮಾಡಿದ್ದಾಗಿ ವಿವರಿಸಿ ಯಾವುದೇ ಕಾರಣಕ್ಕೂ ರಿಪ್ಪನ್ ಪೇಟೆಗೆ ರೈಲು ಮಾರ್ಗ ನಿರ್ಮಾಣ ಮಾಡದಂತೆ ವಿನಂತಿಸುತ್ತಾರೆ, ಇದರಿಂದ ಸ೦ತೃಪ್ತರಾದ ಅಧಿಕಾರಿ ವರ್ಗ ಭಾರತಿಯರ ಮೂಡ ನಂಬಿಕೆ ಅರಿತಿದ್ದರಿಂದ ಅರಸಾಳಿನಿಂದ ಕೆಂಚನಾಳ ಮಾಗ೯ದ ಮುಖಾ೦ತರ ಆನಂದಪುರಂಗೆ ರೈಲು ಮಾಗ೯ ಬದಲಿಸಿದರು.
ಹೀಗಾಗಿ ರಿಪ್ಪನ್ ಪೇಟೆ ಹೆಸರು ಬಂತು, ಮೂಡ ನಂಬಿಕೆಯ ಆ ಕಾಲದಲ್ಲಿ ರೈಲು ಮಾಗ೯ ಬದಲಾಯಿತು,
Comments
Post a Comment