ಕೊರಾನಾ ಲಾಕ್ ಡೌನ್ ಡೈರಿ -2020
ಲೆಟರ್ ನಂಬರ್- 42.
ದಿನಾ೦ಕ: 30-ಮೇ -2020
#ಕೊರಾನಾ_ನಿಯ೦ತ್ರಣ_ಮತ್ತು_ಮುಖ್ಯಮ೦ತ್ರಿ_ಗಾದಿ.
ಜನವರಿ ತಿಂಗಳಲ್ಲೇ ಯಡೂರಪ್ಪರ ವಿರುದ್ದ ಬಂಡಾಯ ಅಂತಿಮ ಹಂತ ತಲುಪುವ ಕ್ಷಣಗಣನೆಯ ಹಂತ ತಲುಪಿತ್ತು, ಹೊಸ ಮುಖ್ಯಮ೦ತ್ರಿ ನೇಮಕ ಮತ್ತು ಹೊಸ ಮಂತ್ರಿ ಮಂಡಲದ ಸಂಬಾವಿತರ ಪಟ್ಟಿ ತಯಾರಾಗಿತ್ತು.
ಇದರ ನಡುವೆ ಕೊರಾನಾ ವೈರಸ್ ಸೃಷ್ಟಿ ಮಾಡಿದ ಸಂದಿಗ್ದದಿ೦ದ ಈ ಬಂಡಾಯ ಮೇ ತಿಂಗಳ ಕೊನೆಯವರೆಗೆ ಎಳೆದುಕೊಂಡು ಬಂದಿದೆ.
ದಿನೇ ದಿನೇ ಹೆಚ್ಚಾಗುತ್ತಿರುವ ವೈರಸ್ ಪೀಡಿತರ ಸಂಖ್ಯೆ, ಸಾವಿನ ಸಂಖ್ಯೆ ಮತ್ತು ಲಾಕ್ ಡೌನ್ ತೆರವು ಮಾಡಬೇಕಾದ ಅನಿವಾಯ೯ತೆಗಳು ಮುಖ್ಯಮOತ್ರಿ ಆದವರಿಗೆ ಸಹಜ ಸಂಕಷ್ಟ ತರುತ್ತಿದೆ ಆದರೂ ಕನಾ೯ಟಕದ ಮುಖ್ಯಮ೦ತ್ರಿ ಯಡೂರಪ್ಪರಿಗೆ ಮಾತ್ರ ಅವರ ಪಕ್ಷದ ಬಂಡಾಯ ಉoಟು ಮಾಡುತ್ತಿರುವ ಸಂಕಷ್ಟ ತುಂಬಾ ದೊಡ್ಡದಾಗಿದೆ.
ದೆಹಲಿಯಿ೦ದ ಸಂತೋಷ್ ಜೀ ಅಥವ ಶಿವಮೊಗ್ಗದ ದತ್ತಾತ್ರೇಯ ಹೊಸಬಾಳೆ ಹೆಸರು ಹರಿದು ಬಿಡಲಾಗಿದೆ.
ಯಡೂರಪ್ಪರಿಗೆ ಕೇ೦ದ್ರ ಮOತ್ರಿ ಮಂಡಲ ಸೇರಿಸಿ ಸಮಾಧಾನ ಮಾಡುವ ತಂತ್ರ ಕೂಡ ಇದೆ.
ಯಡೂರಪ್ಪನವರೆ ಬಂಡಾಯ ಹೂಡಿ ಕಾಂಗ್ರೇಸ್ ಬಂಡಾಯ ಶಾಸಕರು,ಜೆಡಿಎಸ್ ಪಕ್ಷದ ಜೊತೆ ಸಕಾ೯ರ ರಚಿಸುವ ಸಾಧ್ಯತೆ ಕೂಡ ಅಲ್ಲಗೆ ಳೆಯಲು ಸಾಧ್ಯವಿಲ್ಲ ಆದ್ದರಿಂದಲೇ ಯಡೂರಪ್ಪರ ಸ್ವಜಾತಿ ಬಾ೦ದವರನ್ನೆ ಯಡೂರಪ್ಪರ ವಿರುದ್ದ ಎತ್ತಿಕಟ್ಟಲಾಗಿದೆ.
ಮುಂದಿನ ತಿಂಗಳು ಕೊರಾನಾ ಮತ್ತು ಕನಾ೯ಟಕ ಮುಖ್ಯಮ೦ತ್ರಿ ಬದಲಾವಣೆ ರಾಜಕಾರಣ ಗಮನ ಸೆಳೆಯುವ ಪ್ರಮುಖ ಘಟನೆಗಳಾಗಲಿದೆ.
ಇದರಿಂದ ಯಡೂರಪ್ಪ ಹೇಗೆ ಯಶಸ್ವಿಯಾಗುತ್ತಾರೆ ಕಾದು ನೋಡಬೇಕು.
Comments
Post a Comment