#ಕೊರಾನಾ_ಮೊದಲ_ಅಲೆ_ಕಳೆದು_ಎರಡನೆ_ಅಲೆಯಲ್ಲಿ.
#ಕೊರಾನಾಕ್ಕೆ_ಹೆದರದ_ಪೋಲಿಸರಿಗೆ_ಹೆದರುವ_ಮತ್ತು_ಕೊರಾನಾ_ಎಲ್ಲಿ_ಎನ್ನುವ_ನನ್ನ_ಊರ_ಜನ.
ಕಳೆದ ವರ್ಷ ಮಾರ್ಚ ತಿಂಗಳಿಂದ ಕೊರಾನಾ ಮೊದಲ ಅಲೆಯಿಂದ ಇವತ್ತಿನವರೆಗೆ ಆಗುತ್ತಿರುವ ಸಾವು ನೋವುಗಳು, ಅವರ ಕುಟುಂಬದ ದುಃಖ ದುಮ್ಮಾನಗಳು ನಿತ್ಯ ನೋಡುತ್ತಾ ಕುಳಿತಂತೆ ಇವತ್ತಿನ ಬೆಳಿಗ್ಗೆ ಕೂಡ ಕುಳಿತಿದ್ದಾಗಲೆ ಬೆಂಗಳೂರಿನ ಸಂಬಂದಿಕ ಮಹಿಳೆ ಒಬ್ಬರು ಕೊರಾನಾದಿಂದ ಮೃತರಾದ ಸುದ್ದಿ ಬಂದಿತು ಅವರ ಮಗನಿಗೆ ಸಂಪ್ರದಾಯದಂತೆ ಸಂತಾಪ ಕಳಿಸಿದೆ.
ಆಗಲೇ ಮನೆಯ ಗೇಟಿನ ಎದರು ವಕ್೯ ಶಾಪ್ ಮಾಲಿಕರು ಕುತ್ತಿಗೆಗೆ ಮಾಸ್ಕ್ ಸಿಗಿಸಿಕೊಂಡು ಕಾರಿಂದ ಇಳಿದರು, ಗೇಟ್ ತೆರೆಯಲು ಪ್ರಯತ್ನಿಸಿ ಅದು ಬೀಗ ಹಾಕಿದ್ದು ನೋಡಿ, ಬೀಗ ತೆರೆಯಲು ಹೇಳಿದರು ನಾನು ಬೀಗ ತೆರೆಯಲಾರದ ಬಗ್ಗೆ ವಿವರಿಸಿ ಅವರ ಬಿಲ್ ನ್ನು ಗೇಟಿಗೆ ಅಳವಡಿಸಿರುವ ಅಂಚೆ, ವೃತ್ತಪತ್ರಿಕೆ ಇಡುವ ಪೈಪ್ ನಲ್ಲಿ ಇಡಲು ಹೇಳಿದೆ ಇದು ಅವರಿಗೆ ಪಥ್ಯ ಆಗಲಿಲ್ಲ ಆಗ ಅವರು ಕೊರಾನಾ ಪರಾನಾ ಎಲ್ಲಾ ಸುಳ್ಳು ಅಂದರು!?
ಸುಳ್ಳು ಹೇಗೆ ಮರಾಯರ ನಿಮ್ಮ ಕೇರಿಯಲ್ಲಿ ಮೊನ್ನೆ ಮಾಜಿ ಗ್ರಾ.ಪಂ.ಸದಸ್ಯೆ ಸತ್ತದ್ದಾದರು ಹೇಗೆ ಅಂದೆ, ಓ ಅದು ಬೇರೆ ಕಾಯಿಲೆ ಅಂದರು, ಆಕೆ ಪತಿ ಆಸ್ಪತ್ರೆಯಲ್ಲಿ ಈಗಲೂ ಇದ್ದಾರಲ್ಲ ಅಂದರೆ ಅದಕ್ಕೂ ಇನ್ನೆಂತದೋ ಕಾರಣ.
ಹೀಗೆ ನಮ್ಮ ಹಳ್ಳಿಗಳಲ್ಲಿ ಇಡೀ ದೇಶದಲ್ಲಿ ಜನ ಸಾಯುತ್ತಿದ್ದರೂ, ನಿತ್ಯ ಲೆಖ್ಖಕ್ಕೆ ಸಿಗದಷ್ಟು ಸಾರಿ ಸಾಗರದಿಂದ ಶಿವಮೊಗ್ಗಕ್ಕೆ ಸೈರನ್ ಬಾರಿಸುತ್ತಾ ಅಂಬ್ಯೂಲೆನ್ಸ್ ಗಳು ಸಾಗುತ್ತಿದ್ದರು ಕರೋನ ಸುಳ್ಳು ಅಂತಲೇ ವಾದಿಸುತ್ತಾರೆ.
ಮಾಸ್ಕ್ ಯಾಕೆ ಹಾಕುತ್ತೀರೆಂದರೆ "ಪೋಲಿಸರು ದಂಡ ಹಾಕುತ್ತಾರೆ" ಅನ್ನುತ್ತಾರೆ, "ಈ ವರ್ಷ ಪರವಾಗಿಲ್ಲ ಯಡೂರಪ್ಪ ಬ್ರಾಂಡಿ ಶಾಪ್ ಓಪನ್ ಕೊಟ್ಟಿದ್ದಾರೆ " ಅಂತಾರೆ.
ಇನ್ನೂ ಕೆಲ ಗೆಳೆಯರು ಮೋದಿ, ಅಮಿತ್ ಷಾ ಮತ್ತು ಯಡೂರಪ್ಪರ ಲೋಪ ಪಟ್ಟಿ ಮಾಡುತ್ತಾರೆ, ಕಳೆದ ವರ್ಷದಿಂದ ನನ್ನ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಿದ್ದಕ್ಕೆ ನಾನು ಅದರಂತೆ ಪಾಲಿಸಿದ್ದಕ್ಕೆ ಗೇಲಿ ಮಾಡಿದ ಗೆಳೆಯರೂ ಅನೇಕರು ಅದರಲ್ಲಿ ಕೆಲವರ ಮನ ಪರಿವರ್ತನೆ ಆಗಿ ಮಾಸ್ಕ್ ಧರಿಸುತ್ತಿದ್ದಾರೆ.
ಅದ್ಯಾರು ಅ0ತಾ ಸುದ್ದಿ ಹಬ್ಬಿಸಿದರೋ ಗೊತ್ತಿಲ್ಲ "ವ್ಯಾಕ್ಸಿನ್ ತಗೊಂಡರೆ ಆರು ತಿಂಗಳು ಮಧ್ಯ ಸೇವನೆ ಮಾಡುವಂತಿಲ್ಲ" ಎಂಬ ಘೋಷಣೆ ಇದರಿಂದ ಪ್ರಾರ೦ಭದ ದಿನದಲ್ಲಿ ವ್ಯಾಕ್ಸಿನ್ ಕೇಂದ್ರದವರು ಜನರಿಗೆ ಕಾಯಬೇಕಿತ್ತು ಈಗ ಜನ ಜಾಸ್ತಿ ಬರುತ್ತಾ ಇದಾರೆ ಆದರೆ ವ್ಯಾಕ್ಸಿನ್ ಗೆ ಕಾಯಬೇಕಾಗಿದೆ.
ಈಗಲೂ ತಿರುಗಾಟದ ಚಟದ ಮನೆ ಮಕ್ಕಳು ಊರೆಲ್ಲಾ ತಿರುಗಾಡಿ ಬಂದು ಮನೇಲಿರುವ ಹಿರಿಯರಿಗೆ ಸೊಂಕು ಹರಡುತ್ತಿದ್ದಾರೆ.
ಮನೆಯ ಬಾಗಿಲು ತೆರೆದಿಡುತ್ತಾರೆ ಪರಿಚಯಸ್ಥರು, ಸಂಬಂದಿಗಳನ್ನು ನಡು ಮನೆಗೆ ಕರೆದು ಅತಿಥಿ ಸತ್ಕಾರ ಮಾಡುತ್ತಿದ್ದಾರೆ, ಈ ಆಪತ್ಕಾಲದಲ್ಲಿ ಯಾರನ್ನೂ ಮನೆಗೆ ಕರೆಯಬೇಡಿ ನೀವೂ ಬೇರೆಯವರ ಮನೆಗೆ ಹೋಗಬೇಡಿ ಅಂದರೆ "ನಮ್ಮ ನೆಂಟರಿಗೆ ಬಿಟ್ಟು ಬೇರೆಯವರಿಗೆ ದೂರ ಇಟ್ಟಿದ್ದೇವೆ" ಅಂತಾರೆ, ಕೊರಾನಾ ನೆಂಟರಿಂದಲೂ ಬರುತ್ತದೆ೦ದರೆ ನಂಬುವುದಿಲ್ಲ.
ಹೋದ ವರ್ಷ 25 ಕಿ.ಮಿ. ಆಚೆ ಕೊರೊನಾ ಪಾಸಿಟಿವ್ ಅಂದರೆ ಹೆದರುತ್ತಿದ್ದವರೆಲ್ಲ ಈಗ ಊರಲ್ಲಿ ಸತ್ತರೂ ಭಯ ಇಲ್ಲದವರಾಗಿದ್ದಾರೆ, ಸರ್ಕಾರ ಬೆಂಗಳೂರಿನ ಕೊಳಗೇರಿ ವಾಸಿಗಳಿಗೆ ಮತ್ತು ರಾಜ್ಯದ ಗ್ರಾಮೀಣ ಪ್ರದೇಶದವರಿಗೆ ಹೊಂ ಕ್ವಾರೆಂಟೈನ್ ಮಾಡಲು ಅವಕಾಶ ಇಲ್ಲ ಅಂತ ಅದೇಶ ಜಾರಿ ಮಾಡಿದೆ, ಸರ್ಕಾರದ ಕ್ವಾರೆಂಟೈನ್ ಕೇಂದ್ರ ಸಾಗರದ ಬಂದಗದ್ದೆಯ ಮೊರಾರ್ಜಿ ದೇಸಾಯಿ ಶಾಲೆಗೆ ಇವತ್ತು ಸಾಗರದ ವಕೀಲೋರ್ವರು ಬೇಟಿ ನೀಡಿದಾಗ ಅಲ್ಲಿನ ಅವ್ಯವಸ್ಥೆ ಬಗ್ಗೆ ಸಚಿತ್ರ ವರದಿ ಮಾಡಿದ್ದಾರೆ.
ಕಣ್ಣಿಗೆ ಕಾಣದ ವೈರಸ್ ಹರಡದಂತೆ ಮುಂಜಾಗೃತೆ ವಹಿಸಿ ಜೀವ ಉಳಿಸಿಕೊಳ್ಳುವ ಅನಿವಾರ್ಯತೆ ಎಲ್ಲರಿಗೂ ಇದೆ ಆದರೂ #ಕೊರಾನಾ_ಎಲ್ಲಿ? ಎಂದು ಮುರ್ಖರಂತೆ ಪ್ರಶ್ನಿಸುವವರಿಗೆ ಬುದ್ದಿ ಹೇಳುವವರಾರು?
Comments
Post a Comment