# 51 ವಾರ ಕುತೂಹಲದಲ್ಲಿ ಕಾಡಿದ ವೀರಪ್ಪನ್ ಶಿಕಾರಿ ಕಾಲಂ
ಒಂದು ಕಾಲದಲ್ಲಿ ಪ್ರಜಾಮತ, ಸುಧಾ,ಮಯೂರ, ತರಂಗ, ಲಂಕೇಶ್ ಪತ್ರಿಕೆ ಮತ್ತು ಹಾಯ್ ಬೆಂಗಳೂರುಗಳಲ್ಲಿ ಬರುತ್ತಿದ್ದ ಸರಣಿ ಕಥೆ ಮತ್ತು ದಾರಾವಾಹಿಗಳಿಗೆ ಈ ರೀತಿ ಪತ್ರಿಕೆ ಬಿಡುಗಡೆಯ ದಿನಕ್ಕೆ ಕಾತರಿಸಿ ಕಾಯುತ್ತಿದ್ದೆವು, ಬಹಳ ವಷ೯ದ ನಂತರ ವಿಜಯ ಕನಾ೯ಟಕ ದಿನ ಪತ್ರಿಕೆಯಲ್ಲಿ ವಾರದ ಕಂತಿನOತೆ ಬರುತ್ತಿರುವ ವೀರಪ್ಪನ್ ಶಿಕಾರಿ 51 ವಾರ ನನ್ನನ್ನ ಕಾಡಿತ್ತು.
ಪ್ರತಿ ಭಾನುವಾರ ಪತ್ರಿಕೆ ಬರುವುದೇ ಕಾಯುತ್ತಿದ್ದು, ಬಂದ ತಕ್ಷಣ ಹಸಿವಾದಾಗ ಗಬಗಬ ಎಂದು ಅವಸರದಲ್ಲಿ ತಿಂದ ಹಾಗೆ ಓದಿ ನಂತರ ನಾಯಿ ಮೂಳೆಯೊಂದನ್ನ ಮುಚ್ಚಿಟ್ಟು ಚೀಪುವಂತೆ ಪತ್ರಿಕೆ ಹಾಗೆ ಇಟ್ಟುಕೊಂಡು ನಾಲ್ಕಾರು ಬಾರಿ ಓದುತ್ತಿದ್ದೆ.
ವೀರಪ್ಪನ್ ಹತ್ಯೆ ಮಾಡಿದ STF ನ ಕೆ.ವಿಜಯಕುಮಾರ್ ಬರೆದ ಈ ಸತ್ಯ ಕಥೆ ಕನ್ನಡಕ್ಕೆ ಸೊಗಸಾಗಿ ಅನುವಾದ ಮಾಡಿದವರು ಡಿ. ಗುರುಪ್ರಸಾದ್, ಕಳೆದ ಭಾನುವಾರಕ್ಕೆ 51ನೆ ಕಂತಿನಲ್ಲಿ ವೀರಪ್ಪನ್ ಹತ್ಯೆ ಆಗಿದೆ.
ವೀರಪ್ಪನ್ ಬಗ್ಗೆ ಅನೇಕ ಪುಸ್ತಕ ಬಂದಿದೆ ಆದರೆ ವೀರಪ್ಪನ್ ಅಂತಿಮಗೊಳಿಸಿದ ವಿಜಯಕುಮಾರರ ಈ ಪುಸ್ತಕದಲ್ಲಿ ವೀರಪ್ಪನ್ ಶಿಕಾರಿಗೆ ಮಾಡಿದ ನೂರಾರು ತಂತ್ರ ಮತ್ತು ಅದರಲ್ಲಿ ಯಶಸ್ವಿಯಾಗಿದ್ದು ತ್ರಿಲ್ಲಿ 0ಗ್ ಸ್ಟೋರಿ.
Comments
Post a Comment