#ಶಿವಮೊಗ್ಗ_ಜಿಲ್ಲೆಯ_ಚುನಾವಣಾ_ಪ್ರಚಾರಕ್ಕೆ_ಸಿದ್ದರಾಮಯ್ಯ_ಡಿಕೆ_ಬರಲಿಲ್ಲ
#ಅಯನೂರಿಗೆ_ಮೋದಿ_ತೀರ್ಥಹಳ್ಳಿಗೆ_ರಾಹುಲ್_ಗಾಂಧಿ_ಬಂದಿದ್ದರು.
#ಸಾಗರ_ಹೊಸನಗರ_ವಿಧಾನ_ಸಭಾ_ಕ್ಷೇತ್ರದಲ್ಲಿ_263_ಬೂತುಗಳಿದೆ_2_ಲಕ್ಷದ_2_ಸಾವಿರದ_750_ಮತದಾರಿದ್ದಾರೆ.
#ಕಳೆದ_2018ರ_ಚುನಾವಣೆಯಲ್ಲಿ_ಬಿಜಿಪಿ_140_ಬೂತಿನಲ್ಲಿ_ಕಾಂಗ್ರೇಸ್_123_ಬೂತಿನಲ್ಲಿ_ಲೀಡ್_ಪಡೆದು_ಬಿಜೆಪಿ_ಗೆದ್ದಿತ್ತು.
ಸಾಗರ - ಹೊಸನಗರ ವಿದಾನ ಸಭಾ ಕ್ಷೇತ್ರದಲ್ಲಿ ಪಕ್ಷೇತರಾಗಿ ತೀನಾ. ಶ್ರೀನಿವಾಸ್, ಹರಟೆ ಗಾಮಪ್ಪ, ಶಿವಕುಮಾರ್ ಸ್ಪರ್ದಿಸಿದ್ದಾರೆ.
ಕೆ. ಆರ್.ಎಸ್. ಪಾರ್ಟಿಯಿಂದ ಬಿ.ಇ. ಕಿರಣ್, ಪ್ರಜಾಕಿಯಾ ಪಾರ್ಟಿಯಿಂದ ಸೋಮರಾಜ್ ಸ್ಪರ್ದಿಸಿದ್ದಾರೆ.
ಪ್ರಾದೇಶಿಕ ಪಕ್ಷವಾದ ಜೆ.ಡಿ.ಎಸ್.ನಿಂದ ಜಾಕೀರ್ ಸ್ವದೇ ಮಾಡಿದ್ದಾರೆ.
ರಾಷ್ಟ್ರೀಯ ಪಕ್ಷಗಳಾದ ಆಮ್ ಆದ್ಮಿ ಪಾರ್ಟಿಯಿಂದ ದಿವಾಕರ್ ವಕೀಲರು, ಬಿಜೆಪಿಯಿಂದ ಹರತಾಳು ಹಾಲಪ್ಪ, ಕಾಂಗ್ರೇಸ್ ನಿಂದ ಗೋಪಾಲಕೃಷ್ಣ ಬೇಳೂರು ಸ್ಪರ್ದಿಸಿದ್ದಾರೆ.
ಕಾಂಗ್ರೇಸ್ ಮತ್ತು ಬಿಜೆಪಿ ನೇರವಾದ ಸ್ಪರ್ದೆಯಲ್ಲಿದೆ, 2018ರಲ್ಲಿ ಬಿಜೆಪಿ ಹರತಾಳು ಹಾಲಪ್ಪ 140 ಬೂತಿನಲ್ಲಿ ಲೀಡ್ ಪಡೆದು 123 ಬೂತಿನಲ್ಲಿ ಲೀಡ್ ಪಡೆದ ಕಾಂಗ್ರೇಸ್ ಕಾಗೋಡು ತಿಮ್ಮಪ್ಪರನ್ನು ಸೋಲಿಸಿದ್ದರು.
ರಾಜ್ಯದಲ್ಲಿ ಶೇಕಡಾ 72.13% ಮತ ಚಲಾವಣೆ ಆಗಿತ್ತು ಇದರಲ್ಲಿ 38,14% ಮತ ಗಳಿಸಿದ ಕಾ೦ಗ್ರೇಸ್ 80 ಶಾಸಕರ ಆಯ್ಕೆಗೆ ತೃಪ್ತಿ ಪಡೆದಿತ್ತು ಆದರೆ ಕಾಂಗ್ರೆಸ್ ಗಿಂತ 2 ಪರ್ಸೆಂಟ್ ಆ೦ದರೆ 36.35 % ಮತ ಪಡೆದ ಬಿಜೆಪಿ 104 ಶಾಸಕರ ಆಯ್ಕೆಗೆ ಕಾರಣ ಆಗಿತ್ತು, ಶೇಕಡಾ 18.3% ಮತ ಪಡೆದ ಜೆಡಿಎಸ್ 37 ಶಾಸಕರನ್ನು ಗಳಿಸಿತ್ತು.
224 ಶಾಸಕ ಸ್ಥಾನದ ನಮ್ಮ ಕರ್ನಾಟಕ ವಿಧಾನ ಸಭೆಯಲ್ಲಿ 113 ಶಾಸಕ ಸ್ಥಾನಗಳ ಮ್ಯಾಜಿಕ್ ನಂಬರ್ ಗಳಿಸುವ ಪಕ್ಷ ಸರ್ಕಾರ ನಡೆಸಲಿದೆ.
2023ರ ಚುನಾವಣೆಯಲ್ಲಿ 2018ರ ಚುನಾವಣೆಯಲ್ಲಿ ಇದ್ದ ಯಡ್ಯೂರಪ್ಪ ಮತ್ತು ಸಿದ್ದರಾಮಯ್ಯ ಎಂಬ ಜೋಷ್ ಇಲ್ಲವಾದ್ದರಿಂದ ಚುನಾವಣೆ ಸಪ್ಪೆ ಅನ್ನಿಸಿದೆ.
ಸ್ಥಳಿಯ ಲೀಡರ್ ಗಳಲ್ಲಿ ಅಂತಹ ಸದಾಭಿಪ್ರಾಯ ಕಾಣುತ್ತಿಲ್ಲ, ಮೋದಿ ಅಲೆ ಕೂಡ ಹಿಂದಿನ ಚುನಾವಣೆಯಲ್ಲಿ ಇದ್ದಷ್ಟು ಇಲ್ಲವಾಗಿದೆ.
ಆಡಳಿತ ವಿರೋದಿ ಅಲೆ ನಾಳೆ ಮತದಾನದ ಮೇಲೆ ಬೀರುವ ಪರಿಣಾಮಗಳು ಯಾವುದೇ ಪಕ್ಷ ಮ್ಯಾಜಿಕ್ ಸಂಖ್ಯೆ 113 ಗಳಿಸದಿದ್ದರೆ ಜೆಡಿಎಸ್ ಕುಮಾರ್ ಸ್ಟಾಮಿ ಮತ್ತೊಮ್ಮೆ ಕಿಂಗ್ ಮೇಕರ್ ಆಗಲಿದ್ದಾರೆ.
Comments
Post a Comment