#ಆನಂದಪುರಂನ_ಜನಪರ_ವಾಸು_ವಕೀಲರು.
#ಮಗನ_ವಿವಾಹ_ಆರತಕ್ಷತೆ_ನಮ್ಮ_ಕಲ್ಯಾಣ_ಮ೦ಟಪದಲ್ಲಿ_ನೆರವೇರಿತು.
#ವೃತ್ತಿ_ಜೀವನದಂತೆ_ನಿತ್ಯ_ಜೀವನದಲ್ಲೂ_ಶಿಸ್ತು_ಕಾಪಾಡಿದ್ದಾರೆ.
#ವಿನಯತೆಯಿಂದ_ಎಲ್ಲರ_ಜೊತೆ_ಗೌರವದಿಂದ_ನಡೆದುಕೊಳ್ಳುವ_ವಾಸುಲಾಯರ್_ನನಗೆ_ಇಷ್ಟವಾದರು.
ಆನಂದಪುರಂನ ವಾಸು ವಕೀಲರು ಅವರ ವೃತ್ತಿ ಜೀವನ ಪ್ರಾರಂಬಿಸಿ 25 ವರ್ಷ ಆಗಿರಬಹುದು ಅವತ್ತಿನಿಂದ ಇವತ್ತಿನವರೆಗೂ ಅವರ ನಡತೆಯಲ್ಲಿ ನಾನು ವ್ಯತ್ಯಾಸ ಕಂಡಿಲ್ಲ.
ಇವರ ಪತ್ನಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಇವರು ಸಾಗರದ ನ್ಯಾಯಾಲಯದಲ್ಲಿ ವಕೀಲರಾಗಿದ್ದಾರೆ, ಏಕೈಕ ಪುತ್ರನ ವಿವಾಹ ಕಳೆದ ಭಾನುವಾರ ಸಾಗರದಲ್ಲಿ ನಡೆಯಿತು. ನಿನ್ನೆ ಮ೦ಗಳವಾರ ಮಗನ ವಿವಾಹ ಆರತಕ್ಷತೆ ನಮ್ಮ ಶ್ರೀಕೃಷ್ಣ ಸರಸ ಕನ್ವೆನ್ಷನ್ ಹಾಲ್ ನಲ್ಲಿ ವಿಜೃಂಭಣೆಯಿಂದ ನಡೆಸಿದರು.
ಒಂದು ತಿಂಗಳ ಹಿಂದೆಯೇ ಕಲ್ಯಾಣ ಮಂಟಪ ನಿಗದಿ ಮಾಡಲು ಕಲಾವಿದ, ವಿಜಯ ಆರ್ಟ್ಸನ ವಿಜಯ ಜೊತೆ ಬಂದಿದ್ದರು.
ಅವತ್ತು ಅವರ ಆಶಯ ಅವರ ಹುಟ್ಟೂರಿನ ಸಂಬಂದಿಗಳು, ಗೆಳೆಯರು ಮತ್ತು ಅವರ ಕಕ್ಷಿದಾರರೆಲ್ಲರನ್ನು ಕರೆಯಬೇಕು ಅವರಿಗೆ ಔತಣ ಕೂಟ ನೀಡಬೇಕು ಎಂಬುದು.
ಆರತಕ್ಷತೆ ಹಿಂದಿನ ದಿನ ರಾತ್ರಿ ಅವರ ಜೊತೆ ಮಾತಾಡುವಾಗ ಕೇಳಿದ್ದೆ ಎಷ್ಟು ಜನರ ಕರೆದಿದ್ದೀರಿ ಮತ್ತು ನಿಮ್ಮ ನಿರೀಕ್ಷೆ ಎಷ್ಟು ಜನ ಅಂತ ಆಗ ಅವರು ಹೇಳಿದ್ದು 1200 ಜನ ಆಗಮಿಸುವ ನಿರೀಕ್ಷೆ ತಮ್ಮದು ಸುಮಾರು 1500 ಜನರಿಗಾಗಿ ವಿಶೇಷವಾಗಿ ಕುರಿ ಮತ್ತು ಕೋಳಿ ಮಾಂಸದ ಔತಣದ ವ್ಯವಸ್ಥೆ ಮಾಡಿದ್ದಾಗಿ ತಿಳಿಸಿದ್ದರು.
ಮಂಗಳವಾರ ಬೆಳಿಗ್ಗೆಯಿಂದ ಮಳೆ ಶುರುವಾದ್ದರಿಂದ ಇವರ ಪರಮಾಪ್ತ ಗೆಳೆಯ ವಿಜಯ ಆರ್ಟ್ಸ್ ವಿಜಯ ಆತಂಕದಲ್ಲಿದ್ದರು ಆದರೆ ವಾಸು ಲಾಯರ್ ಆಹ್ವಾನಿಸಿದವರೆಲ್ಲ ಬಂದಿದ್ದರು.
1000 ಜನರ ಊಟ ಆಗುವವರೆಗೆ ನಾನು ಸಿಸಿ ಟಿವಿಯಲ್ಲಿ ವೀಕ್ಷಿಸುತ್ತಿದ್ದೆ, ಸಂಜೆ ಹಣಕಾಸಿನ ವ್ಯವಹಾರದ ಪಾವತಿಗೆ ವಾಸು ಲಾಯರ್ ಮತ್ತು ಗೆಳೆಯ ವಿಜಯ ಬಂದಾಗ ಗೊತ್ತಾಗಿದ್ದು 1350 ಕ್ಕೂ ಹೆಚ್ಚು ಜನ ಇವರ ಅತಿಥ್ಯ ಸ್ವೀಕರಿಸಿದರು ಅಂತ.
ವಾಸು ಲಾಯರ್ ಅವರು ಆನಂದಪುರಂನಲ್ಲಿ ಅವರದ್ದೇ ಆದ ಗೆಳೆಯರ ತಂಡದೊಂದಿಗೆ ಸಾಮಾಜಿಕ ದಾರ್ಮಿಕ ಸೇವೆ ಮಾಡುತ್ತಾ ಬಂದಿದ್ದಾರೆ, ಎಲ್ಲರನ್ನೂ ಗೌರವಿಸುವ ದೊಡ್ಡ ಗುಣ ಇವರ ತಂಡದ್ದು, ಬಡತನ - ಶೋಷಣೆಗೆ ಒಳಗಾದವರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ ಯಾವುದೇ ಕಕ್ಷಿದಾರರಿಗೆ ತೊಂದರೆ ಆಗದಂತೆ ನೋಡುತ್ತಾರೆ, ಹಣದ ಹಪಾಹಪಿ ಇಲ್ಲ ಅಂತ ನಿನ್ನೆಯ ಅವರ ಕಾರ್ಯಕ್ರಮಕ್ಕೆ ಬಂದವರು ಹೇಳುತ್ತಿದ್ದರು.
ಅವರು ಫೋನಿನಲ್ಲಿ ಕಾರ್ಯಕ್ರಮದಲ್ಲಿ ಯಾರ್ಯಾರಿಗೆ ಹಣ ನೀಡಬೇಕು ಅವರಿಗೆಲ್ಲ ಇವತ್ತೇ ಪೂರ್ಣ ಪಾವತಿ ಮಾಡಬೇಕು ಅಂತ ಅವರ ಗೆಳೆಯರಿಗೆ ನಿರ್ದೇಶನ ನೀಡುತ್ತಿದ್ದರು ಈ ರೀತಿಯ ಶಿಸ್ತು ಈಗಿನ ಕಾಲದಲ್ಲಿ ಅಪರೂಪ.
ವಾಸು ವಕೀಲರ ಈ ಎಲ್ಲಾ ಗುಣ ನನಗೆ ತುಂಬಾ ಇಷ್ಟವಾಯಿತು ಹಣ ಗಳಿಸುವುದಕ್ಕಿಂತ ಜನರ ಪ್ರೀತಿ ವಿಶ್ವಾಸ ಗಳಿಸುವುದು ಕಷ್ಟ ಆದರೆ ವಾಸು ಲಾಯರ್ ಎರಡನ್ನೂ ಗಳಿಸಿದ ನಮ್ಮ ಊರಿನ ಸಹೃದಯಿ ವ್ಯಕ್ತಿ ಆಗಿದ್ದಾರೆ ಇಂತವರು ಅಪರೂಪದಲ್ಲಿ ಅಪರೂಪ.
Comments
Post a Comment