#ರೂಪಾ ರಾಜೀವ್ ಎಂಬ ಉತ್ಸಾಹಿ FB ಗೆಳೆಯರು ಬರೆದಿರುವ ಲೇಖನ ಓದಿ, ಇದು ಅತ್ಯುತ್ತಮ ಮಾಹಿತಿ ಒಬ್ಬ ಕೊರಾನಾ ವೈರಸ್ ಪೀಡಿತರಿಗೆ ಖಾಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಆಸ್ಪತ್ರೆ ಎಷ್ಟು ವೆಚ್ಚ ಮಾಡಬೇಕು ನೋಡಿ.
* * *
ಕೋವಿಡ್ ರೋಗಿಗಳನ್ನು ಕೋವಿಡ್ ರೋಗಿಗಳು ಅಂತಾ ಗೊತ್ತಾದ ಮೇಲೆ, ಬೇರೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮಾಡೋದು ಬಹಳ ಕಷ್ಟ ಅಂತಾ ನಿನ್ನೆ ಹೇಳಿದ್ದೆ. ಯಾಕೆ ಕಷ್ಟ ಅಂತಾ ಲೆಕ್ಕ ಕೊಡ್ತೀನಿ ನೋಡಿ. ಒಂದು ಪೇಷಂಟ್ ನಾ ದಿನದ ೨೪ ಗಂಟೆ ನೋಡಿಕೊಳ್ಳೋಕೆ ಆರು ಗಂಟೆಯ ಒಂದು ಶಿಫ್ಟ್ ಅಂದರೆ, ಒಟ್ಟು ನಾಲ್ಕು ಜನ ನರ್ಸ್ ಗಳು ಬೇಕು. ಜೊತೆಗೆ ಆ ರೋಗಿಯ ರೂಮ್ ಕ್ಲೀನ್ ಮಾಡೋಕೆ ನಾಲ್ಕು ಕ್ಲೀನಿಂಗ್ ಸ್ಟಾಫ್ ಬೇಕು. ನಾಲ್ಕು ಡಾಕ್ಟರ್ ಗಳು ಬೇಕು. ಒಂದು ಪಿಪಿಇ ಕಿಟ್ ಬೆಲೆ ಸುಮಾರು ೭೦೦ ರೂಗಳು. ಅಂದ್ರೆ ದಿನಕ್ಕೆ ಒಂದು ಪೇಷಂಟ್ ಗೆ ಖರ್ಚಾಗುವ ಪಿಪಿಇ ಕಿಟ್ ಗಳು ಸುಮಾರು ೧೨ ಕಿಟ್. ಬರೀ ಕಿಟ್ ಗಳಿಗೆ ಹತ್ತು ಸಾವಿರವಾಗುತ್ತದೆ. ಇನ್ನೂ ರೂಮ್ ಚಾರ್ಜ್, ಎಲೆಕ್ಟ್ರಿಸಿಟಿ ಚಾರ್ಜ್, ನೀರಿನ ಚಾರ್ಜ್, ಆ ಪೇಷಂಟ್ ನ ಊಟ ತಿಂಡಿಯ ಚಾರ್ಜ್, ಮೆಡಿಸಿನ್ ಚಾರ್ಜ್, etc., ಲೆಕ್ಕ ಹಾಕಿಕೊಳ್ಳಿ. ಆಮೇಲೆ ಇಷ್ಟೆಲ್ಲಾ ಕೆಲಸ ಮಾಡುವ ಸಿಬ್ಬಂದಿಗಳು ಒಂದು ವಾರ ಮಾತ್ರ ಕೆಲಸ ಮಾಡೋಕೆ ಆಗೋದು. ಆಮೇಲೆ ಅವರು ಕನಿಷ್ಠ ಎರಡು ವಾರಗಳ ಕಾಲ ಮನೆಗೂ ಹೋಗದೆ quarantine ನಲ್ಲಿರಬೇಕು. ಆ ಎರಡು ವಾರಗಳ ಕಾಲ ಅವರನ್ನು ಕೂಡ ಪೇಷಂಟ್ ನೋಡಿಕೊಳ್ಳುವ ತರಹಾನೇ ನೋಡಬೇಕು. ಅವರ ಊಟ ತಿಂಡಿಯ ಜವಾಬ್ದಾರಿ ಕೂಡ ಆ ಆಸ್ಪತ್ರೆಯದ್ದೇ ಆಗಿರುತ್ತದೆ. ಅದಕ್ಕೆಲ್ಲಾ ಎಷ್ಟು ಖರ್ಚಾಗಬಹುದು? ಆಮೇಲೆ ನಾಲ್ಕನೇ ವಾರ ಮನೆಗೆ ಹೋಗಿ ಬರ್ತಾರೆ. ಅಂದರೆ ದಿನಕ್ಕೆ ನಾಲ್ಕು ಶಿಫ್ಟ್ ತರಹ ನಾಲ್ಕು ಸಿಬ್ಬಂದಿ, ತಿಂಗಳಿಗೆ ವಾರಕ್ಕೊಮ್ಮೆ ಬೇರೆ ಬೇರೆ ಟೀಮ್ ಬರೋದ್ರಿಂದ ನಾಲ್ಕು ಟೀಮ್ ಬೇಕು. ಅಷ್ಟು ಜನಕ್ಕೂ ವಾರದ ಸಂಬಳ ಕೊಡೋಕಾಗಲ್ಲ. ಒಂದು ತಿಂಗಳಿನ ಸಂಬಳವೇ ಕೊಡಬೇಕು. . ಜೊತೆಗೆ ಇದು ಹೇಗೆ ಹರಡುತ್ತೆ? ಯಾರಿಗೆ ಸೀರಿಯಸ್ ಆಗುತ್ತೆ ಅನ್ನೋದು ಕೂಡ ಸರ್ಯಾಗಿ ಗೊತ್ತಿಲ್ಲ. ಎಲ್ಲಾ ಡಾಕ್ಟರ್ ಗಳಿಗೂ ಇದು ಹೊಸದೇ ಕಾಯಿಲೆ ಆಗಿರೋದ್ರಿಂದ ಎಲ್ಲರೂ ತಮ್ಮ ತಮ್ಮ ಅನುಭವದ ಮೇರೆಯಲ್ಲಿ ಚಿಕಿತ್ಸೆ ಕೊಡ್ತಾರೆ.
ಆಸ್ಪತ್ರೆಗಳು ನಡೆಯೋದೆ ಹೆಸರಿನ ಮೇಲೆ. ಹೆಸರು ಹೋಗಿಬಿಟ್ಟರೆ, ಅಂತಹ ಆಸ್ಪತ್ರೆಗಳಿಗೆ ಭವಿಷ್ಯವಿಲ್ಲ. ಹಾಗಿರುವಾಗ ಯಾವ ಖಾಸಗಿ ಆಸ್ಪತ್ರೆಗಳು ಕೂಡ ಇಷ್ಟು ರಿಸ್ಕ್ ತೊಗೊಳ್ಳೋಕೆ ಸಾಧ್ಯವಿಲ್ಲ.
Comments
Post a Comment