#ಶಿವಮೊಗ್ಗ_ಜಿಲ್ಲೆಯ_ಮೊದಲ_ಸೀಲ್ಡೌನ್_ತೀಥ೯ಹಳ್ಳಿಯಲ್ಲಿ
ನಿನ್ನೆ ರಾತ್ರಿಯಿ೦ದ ದಾಖಲಾಗಿದೆ, ಮೇ ತಿಂಗಳು ನಿಣಾ೯ಯಕ ಮತ್ತು ಜೂನ್ ಜುಲೈ ಅತಿ ಹೆಚ್ಚು ಸೋ೦ಕು ಹರಡುವ ಸಾದ್ಯತೆ ಬಗ್ಗೆ ಆರೋಗ್ಯ ಇಲಾಖೆ ಈಗಾಗಲೆ ಎಚ್ಚರಿಸಿದೆ.
ಜಿಲ್ಲೆಯ ಜನ ಇನ್ನೂ ಹೆಚ್ಚಿನ ಮುಂಜಾಗೃತಿ ವಹಿಸುವ ಅನಿವಾಯ೯ತೆ ಇದೆ.
ಬ್ರೇಕಿಂಗ್ ನ್ಯೂಸ್ ತೀರ್ಥಹಳ್ಳಿ ಯಲ್ಲಿ ಕೆಲವು ಗ್ರಾಮಗಳಲ್ಲಿ ಸೀಲ್ ಡೌನ್ ಆದೇಶ.ಲೇಖನ ಲಿಯೋ ಅರೋಜ. ತೀರ್ಥಹಳ್ಳಿ. ಜಿಲ್ಲಾಧಿಕಾರಿಗಳ ಆದೇಶದಂತೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕೊರೊನಾ ವೈರಸ್ ಮತ್ತು covid19 ತಡೆಗಟ್ಟಲು ಹಾಗೂ ಮುಂಜಾಗ್ರತಾ ಕ್ರಮವಾಗಿ ನಿನ್ನೆ ತಡ ರಾತ್ರಿ ತಹಶಿಲ್ದಾರ್ ಡಾ ಶ್ರೀಪಾದ, EO ಆಶಲತಾ, ಡಾ ಅಶೋಕ, ಡಾ ಅರುಣಕುಮಾರ್ CPI ಗಣೇಶಪ್ಪ, CO ನಾಗೇಂದ್ರಪ್ಪ ಸಭೆ ಸೇರಿ ಕೊರೊನಾ ವೈರಸ್ ಹರಡದಂತೆ ಪ್ರಾಯೋಗಿಕವಾಗಿ ಹಳ್ಳಿಬೈಲು, ರಂಜದಕಟ್ಟೆ, ಮುಳುಬಾಗಿಲು, ಸುತ್ತಮುತ್ತಲಿನ ಗ್ರಾಮಗಳನ್ನು Containment ಮತ್ತು Buffer Zone ಗಳನ್ನು ಗುರುತಿಸಿ Ceal down ಆದೇಶವನ್ನು ಹೊರಡಿಸಲಾಗಿದೆ. ಈ ಗ್ರಾಮಗಳ ಆರೋಗ್ಯ, ಕುಡಿಯುವ ನೀರು ಸರಬರಾಜು, ಎಲ್ಲಾ ನಾಗರೀಕ ಸೌಲಭ್ಯ ಒದಗಿಸುವ ಬಗ್ಗೆ ಮುಳಬಾಗಿಲು ಗ್ರಾಮ ಪಂಚಾಯತಿಯ PDO ರವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಗ್ರಾಮಗಳ ವೃದ್ದರನ್ನು ಮತ್ತು ಮಕ್ಕಳನ್ನು ಯಾವುದೇ ಕಾರಣದಿಂದ ಮನೆಯಿಂದ ಹೊರಗೆ ಬರದಂತೆ ನೋಡಿಕೊಳ್ಳಲು ತಡ ರಾತ್ರಿ ಒಂದು ಗಂಟೆಯವರೆಗೂ ಮಾನ್ಯ ಜಿಲ್ಲಾಧಿಕಾರಿಗಳು ಕೊವಿಡ್ 19 ರ ಹತೋಟಿಗಾಗಿ ತಾಲ್ಲೂಕು ಆಡಳಿತದದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ತಹಶಿಲ್ದಾರ್ ಮತ್ತು ಅವರ ಇತರೆ ಅಧಿಕಾರಿ ತಂಡ ಬೆಳಗಿನ ಜಾವ ನಾಲ್ಕು ಗಂಟೆಯವರೆಗೂ ರಂಜದಕಟ್ಟೆ ಸುತ್ತಮುತ್ತ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿದ್ದು ಜನ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.ಇಂದು ಬೆಳಿಗ್ಗೆ ಆರು ಗಂಟೆಯಿಂದ ಸದರಿ ಗ್ರಾಮಗಳಲ್ಲಿ ತಹಶಿಲ್ದಾರ್ ತಂಡ ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಆಶಾಕಾರ್ಯಕರ್ತೆಯರೊಂದಿಗೆ ಗ್ರಾಮದ ಮನೆಮನೆಗೆ ಭೇಟಿ ನೀಡಿ ಕೊವಿಡ್ 19 ಬಗ್ಗೆ ಮನವರಿಕೆ ಮಾಡುತ್ತಿದ್ದಾರೆ.ತಾಲ್ಲೂಕಿನ ಜನರು ತಾಲ್ಲೂಕು ಆಡಳಿತದೊಂದಿಗೆ ಸಹಕರಿಸಲು ತಹಶಿಲ್ದಾರ್, ತಾಲ್ಲೂಕು ಪಂಚಾಯತ್, ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ, ಗ್ರಾಮ ಪಂಚಾಯತಿ ಅಧಿಕಾರಿಗಳು, ಮನವಿ ಮಾಡಿ ಕೊಂಡಿದ್ದಾರೆ. ಲೇಖನ ಲಿಯೋ ಅರೋಜ.
Comments
Post a Comment