Skip to main content

Posts

Showing posts with the label American space x setlite line

ನಿನ್ನೆ (20- ಡಿಸೆಂಬರ್ -2020) ರಾತ್ರಿ ಆಕಾಶದಲ್ಲಿ ಬೆಳಕಿನ ಸರಮಾಲೆಯ ಮೆರವಣಿಗೆ ಏನದು? 1970 ರ ದಶಕದಲ್ಲಿ ಸಾಮೂಹಿಕ ಸನ್ನಿಯಂತೆ ಜನರ ಭಯಕ್ಕೆ ಕಾರಣ ಆಗಿದ್ದ ಆಕಾಶದಲ್ಲಿ ನಡೆಯುತ್ತಿದ್ದ ಶವ ಸಂಸ್ಕಾರದ ಮೆರವಣಿಗೆಯ ಸುದ್ದಿ.

#ನಿನ್ನೆ_ಆಕಾಶದಲ್ಲಿ_ಕಂಡದ್ದೇನು? #ಕೆಲವೇ_ಕ್ಷಣದಲ್ಲಿ_ಸಾಮಾಜಿಕ_ಜಾಲತಾಣದಿಂದ_ಉತ್ತರ. #ಎಪ್ಪತ್ತರ_ದಶಕದಲ್ಲಿ_ಸಾಮಾಜಿಕ_ಸನ್ನಿಯಂತೆ_ಭಯ_ಹರಡಿದ್ದ_ಆಕಾಶದಲ್ಲಿನ_ಶವಸಂಸ್ಕಾರದ_ಮೆರವಣಿಗೆ.   ನಿನ್ನೆ ಸಂಜೆ ಆಕಾಶದಲ್ಲಿ ಬೆಳಕಿನ ದೀಪ ಮಾಲೆಯೊಂದು ಮೆರವಣಿಗೆಯಂತೆ ಹೋಯಿತು ಎಂಬ ಚಿತ್ರ - ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು ಇದು ದಕ್ಷಿಣ ಭಾರತದಲ್ಲೆಲ್ಲ ಜನ ನೋಡಿದರಂತೆ ಈ ಸುದ್ದಿ ಪ್ರಕಟವಾದ ಕ್ಷಣದಲ್ಲೇ ಇದರ ನೈಜ ಕಾರಣವನ್ನು ಬಾಹ್ಯಾಕಾಶ ವೀಕ್ಷಕರು ತಮ್ಮ ಪ್ರತಿಕ್ರಿಯೆ ನೀಡಿದರು ಇದು ಅಮೆರಿಕಾದ ಶ್ರೀಮ೦ತ ಉದ್ಯಮಿ ವಿಶ್ವದಾದ್ಯಂತ ಅಂತರ್ಜಾಲ ಸಂಪರ್ಕ ಸುಲಭ ಮತ್ತು ಕೆಲವು ಪಟ್ಟು ವೇಗವಾಗಿ ನೀಡಲು ಹಾರಿಬಿಟ್ಟ #space_x ಎಂಬ ಸರಣಿ ಉಪಗ್ರಹಗಳ ಪ್ರತಿಪಲನ ಅಂತ.   ಕ್ಷಣ ಮಾತ್ರದಲ್ಲಿ ಜನರ ಕುತೂಹಲ, ಆತಂಕಗಳು ಪರಿಹಾರ ಆಯಿತು ಇದು ವಿಜ್ಞಾನದ ಸಾಮಾಜಿಕ ಜಾಲ ತಾಣದ ತಾಕತ್ತು ಕೂಡ.   1970 ರ ದಶಕದ ಪ್ರಾರಂಭದಲ್ಲಿ ಒಂದು ಆತಂಕಕಾರಿ ಸುದ್ದಿ ಎಲ್ಲಿಂದಲೋ ಹರಡಿತು ಅದೇನೆಂದರೆ ಅಮಾವಾಸ್ಯೆ ಹಿಂದೆ ಮುಂದಿನ ಮದ್ಯರಾತ್ರಿಯಲ್ಲಿ ಆಕಾಶದಲ್ಲಿ ಶವ ಸಂಸ್ಕಾರದ ಮೆರವಣಿಗೆ ಉತ್ತರದಿಂದ ದಕ್ಷಿಣಕ್ಕೆ ಹೋಗಿದ್ದು ಕೆಲವರು ನೋಡಿದ್ದೆವೆಂಬ ಸುದ್ದಿ ಪ್ರತಿ ತಿಂಗಳ ಅಮಾವಾಸ್ಯೆ ಸಂದರ್ಭದಲ್ಲಿ ಆ ಊರಲ್ಲಿ ಕಂಡಿತು ಈ ಊರಲ್ಲಿ ಕಂಡಿತು ಎಂಬ ಸುದ್ದಿ ಜನ ಸೇರುತ್ತಿದ್ದ ಊರ ಚೌಕದಲ್ಲಿ, ಕೃಷಿ ಕೆಲಸದ ನಡುವೆ, ಮಧ್ಯದ ಅಂಗಡಿಯಲ್ಲ...