ನಿನ್ನೆ (20- ಡಿಸೆಂಬರ್ -2020) ರಾತ್ರಿ ಆಕಾಶದಲ್ಲಿ ಬೆಳಕಿನ ಸರಮಾಲೆಯ ಮೆರವಣಿಗೆ ಏನದು? 1970 ರ ದಶಕದಲ್ಲಿ ಸಾಮೂಹಿಕ ಸನ್ನಿಯಂತೆ ಜನರ ಭಯಕ್ಕೆ ಕಾರಣ ಆಗಿದ್ದ ಆಕಾಶದಲ್ಲಿ ನಡೆಯುತ್ತಿದ್ದ ಶವ ಸಂಸ್ಕಾರದ ಮೆರವಣಿಗೆಯ ಸುದ್ದಿ.
#ಕೆಲವೇ_ಕ್ಷಣದಲ್ಲಿ_ಸಾಮಾಜಿಕ_ಜಾಲತಾಣದಿಂದ_ಉತ್ತರ.
#ಎಪ್ಪತ್ತರ_ದಶಕದಲ್ಲಿ_ಸಾಮಾಜಿಕ_ಸನ್ನಿಯಂತೆ_ಭಯ_ಹರಡಿದ್ದ_ಆಕಾಶದಲ್ಲಿನ_ಶವಸಂಸ್ಕಾರದ_ಮೆರವಣಿಗೆ.
ನಿನ್ನೆ ಸಂಜೆ ಆಕಾಶದಲ್ಲಿ ಬೆಳಕಿನ ದೀಪ ಮಾಲೆಯೊಂದು ಮೆರವಣಿಗೆಯಂತೆ ಹೋಯಿತು ಎಂಬ ಚಿತ್ರ - ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು ಇದು ದಕ್ಷಿಣ ಭಾರತದಲ್ಲೆಲ್ಲ ಜನ ನೋಡಿದರಂತೆ ಈ ಸುದ್ದಿ ಪ್ರಕಟವಾದ ಕ್ಷಣದಲ್ಲೇ ಇದರ ನೈಜ ಕಾರಣವನ್ನು ಬಾಹ್ಯಾಕಾಶ ವೀಕ್ಷಕರು ತಮ್ಮ ಪ್ರತಿಕ್ರಿಯೆ ನೀಡಿದರು ಇದು ಅಮೆರಿಕಾದ ಶ್ರೀಮ೦ತ ಉದ್ಯಮಿ ವಿಶ್ವದಾದ್ಯಂತ ಅಂತರ್ಜಾಲ ಸಂಪರ್ಕ ಸುಲಭ ಮತ್ತು ಕೆಲವು ಪಟ್ಟು ವೇಗವಾಗಿ ನೀಡಲು ಹಾರಿಬಿಟ್ಟ #space_x ಎಂಬ ಸರಣಿ ಉಪಗ್ರಹಗಳ ಪ್ರತಿಪಲನ ಅಂತ.
ಕ್ಷಣ ಮಾತ್ರದಲ್ಲಿ ಜನರ ಕುತೂಹಲ, ಆತಂಕಗಳು ಪರಿಹಾರ ಆಯಿತು ಇದು ವಿಜ್ಞಾನದ ಸಾಮಾಜಿಕ ಜಾಲ ತಾಣದ ತಾಕತ್ತು ಕೂಡ.
1970 ರ ದಶಕದ ಪ್ರಾರಂಭದಲ್ಲಿ ಒಂದು ಆತಂಕಕಾರಿ ಸುದ್ದಿ ಎಲ್ಲಿಂದಲೋ ಹರಡಿತು ಅದೇನೆಂದರೆ ಅಮಾವಾಸ್ಯೆ ಹಿಂದೆ ಮುಂದಿನ ಮದ್ಯರಾತ್ರಿಯಲ್ಲಿ ಆಕಾಶದಲ್ಲಿ ಶವ ಸಂಸ್ಕಾರದ ಮೆರವಣಿಗೆ ಉತ್ತರದಿಂದ ದಕ್ಷಿಣಕ್ಕೆ ಹೋಗಿದ್ದು ಕೆಲವರು ನೋಡಿದ್ದೆವೆಂಬ ಸುದ್ದಿ ಪ್ರತಿ ತಿಂಗಳ ಅಮಾವಾಸ್ಯೆ ಸಂದರ್ಭದಲ್ಲಿ ಆ ಊರಲ್ಲಿ ಕಂಡಿತು ಈ ಊರಲ್ಲಿ ಕಂಡಿತು ಎಂಬ ಸುದ್ದಿ ಜನ ಸೇರುತ್ತಿದ್ದ ಊರ ಚೌಕದಲ್ಲಿ, ಕೃಷಿ ಕೆಲಸದ ನಡುವೆ, ಮಧ್ಯದ ಅಂಗಡಿಯಲ್ಲಿ, ಶಿಕಾರಿಗಾರರ ಮಧ್ಯ ಇದು ರೋಚಕ ಚರ್ಚಾ ವಿಷಯ ಆಗಿರುತ್ತಿತ್ತು.
ಇದನ್ನು ನೋಡಿದವರು ಇದ್ದಾರೆ ಎಂಬ ಸುದ್ದಿ ಬಿಟ್ಟರೆ ಇದನ್ನು ಸಾಕ್ಷಿಕರಿಸುವ ಪೋಟೋ ಇತ್ಯಾದಿ ಯಾವುದು ಇರಲಿಲ್ಲ, ಇದು ಸುಳ್ಳು ಕಲ್ಪನೆ ಅಂತ ಅಥವ ಸಾಮೂಹಿಕ ಸನ್ನಿ ಆಗಿರುವ ಜನರ ಭಯಕ್ಕೆ ಕಾರಣವಾದ ಮೂಡ ನಂಬಿಕೆ ಎಂಬ ಯಾವುದೇ ವಿಚಾರವಾದಿ ಅಥವ ವಿಜ್ಞಾನಿಗಳ ಉತ್ತರ ಬರಲಿಲ್ಲ ಅಥವ ಬಂದಿದ್ದರೂ ಜನರ ತಲುಪಲಿಲ್ಲ ಕಾಣುತ್ತೆ.
ಕ್ರಮೇಣ ಈ ಸುದ್ದಿ ನಮ್ಮ ನಮ್ಮ ಊರಲ್ಲೂ ಇಂತಹ ಘಟನೆ ನೋಡಿದ ಸುದ್ದಿ ಆಗಿ ಹಳ್ಳಿಗಳಲ್ಲಿ ಜನ ರಾತ್ರಿ ಮನೆಯ ಹೊರಗೆ ಬರುವುದೇ ನಿಂತು ಹೋಯಿತು.
ಇಂತಹ ಸಂದರ್ಭದಲ್ಲಿ ನಾವೆಲ್ಲ ಚಿಕ್ಕವರಿದ್ದಾಗ ನಗರದ ದೇವಗಂಗೆಯ ನಮ್ಮ ದೊಡ್ಡಮ್ಮನ ಮನೆಯಲ್ಲಿ ಶಾಲಾ ಬೇಸಿಗೆ ರಜಾದಲ್ಲಿ ಇದ್ದಾಗ " ಭರ್ಮಣ್ಣ ನಿನ್ನೆ ರಾತ್ರಿ ಜಲ ಬಾದೆಗಾಗಿ ಮನೆ ಹೊರಗೆ ಬಂದಾಗ ಅವನ ಮನೆ ಎದುರಿನ ತೆಂಗಿನ ಮರದ ಸರೂತ ಆಕಾಶದಲ್ಲಿ ನಾಲ್ಕು ಜನ ಶವ ಒಂದನ್ನು ಚಟ್ಟದಲ್ಲಿ ಹೊತ್ತು ಒಯ್ಯುತ್ತಿದ್ದರಂತೆ ಹಿಂದಿನಿಂದ ರೋದಿಸುತ್ತಾ ಹಣ್ಣು ಕೂದಲ ಮುದುಕಿ ಹೋಗುತ್ತಿತ್ತಂತೆ " ಅಂದಾಗ ಇಡೀ ದೇವಗಂಗೆ ಎಂಬ ಸಣ್ಣ ಹಳ್ಳಿಯಲ್ಲಿ ಜನ ಭಯ ಬೀತರಾಗಿದ್ದರು, ನಾವೆಲ್ಲ ಕತ್ತಲಾಯಿತೆಂದರೆ ಕುಮುಟಿ ಬೀಳುವಂತೆ.
ಭರ್ಮಣ್ಣ ಕೆಲಸಕ್ಕೆ ಹೋದಲ್ಲೆಲ್ಲ ಜನರಿಗೆ ಈ ಕಥೆ ಹೇಳುವುದೇ ಕೆಲಸ ಆಯಿತು, ದೈರ್ಯವಂತ ಯುವಕರು ಒಂದಾಗಿ ಕೆಲ ಅಮಾವಾಸ್ಯೆ ರಾತ್ರಿಯಲ್ಲಿ ಭತ್ತದ ಕಣದಲ್ಲಿ ಮಲಗಿ ರಾತ್ರಿ ಇಡೀ ಆಕಾಶ ವೀಕ್ಷಣೆ ಮಾಡಿದೆವು ಇಂತಹ ಯಾವುದೇ ಘಟನೆ ಕಾಣಲಿಲ್ಲ ಅಂದರೂ ಅವರ ಪ್ರತ್ಯಕ್ಷ ಪರೀಕ್ಷೆಗಿಂತ ಪರೋಕ್ಷವಾಗಿ ಹರಡಿದ ಸುದ್ದಿಯೇ ನೈಜದಂತೆ ಜನರಲ್ಲಿ ಅಚ್ಚೊತ್ತಿ ಬಿಟ್ಟಿತ್ತು.
ರಜಾ ಮುಗಿಸಿ ನಮ್ಮ ಊರಿಗೆ ಬಂದಾಗ ಅದು ಇಲ್ಲೂ ಸುದ್ದಿ ಮಾಡುತ್ತಿತ್ತು, ಅಂತಹ ಬೂತ ಚೌಡಿ ಕಂಡರೆ ಹೆದರದ ಡುಮಿಂಗಣ್ಣರ ಮಗ ಜಾನಣ್ಣ ನಿನ್ನೆ ಆಕಾಶದಲ್ಲಿ ಇಂತಹ ಘಟನೆ ನೋಡಿ ಚಳಿ ಜ್ವರದಿಂದ ಮಲಗಿದವರು ಎದ್ದಿಲ್ಲ ಅಂತ.
ಇದು ಕೆಡುಗಾಲ ಬರುವ ಮುನ್ಸೂಚನೆ, ಕೆಲ ದಿನದಲ್ಲಿ ಪ್ರಳಯ ಆಗಲಿದೆ ಇಂತಹ ಅನೇಕ ಭಯಕ್ಕೆ ಕಾರಣ ಆಗಿತ್ತು ಇದು ಮಳೆಗಾಲದಲ್ಲಿ ಮರೆತು ಹೋದರೂ ಪ್ರತಿ ಬೇಸಿಗೆಯ ಕಾಲದಲ್ಲಿ ಪುನ: ಸುದ್ದಿ ಆಗುತ್ತಿತ್ತು, ಒಂದೆರೆಡು ವರ್ಷದ ನಂತರ ಮರೆತು ಹೋಯಿತು.
ನಮ್ಮ ಊರಲ್ಲಿ ಹಿರಿಯ ಮಿತ್ರರಿದ್ದಾರೆ ಮೊನ್ನೆ ಅವರು ತಾವೂ ಇದನ್ನು ತನ್ನ ಕಣ್ಣಿಂದ ನೋಡಿದ್ದೆ ಅಂತಿದ್ದರು.
ಇದು ಉತ್ತರ ಸಿಗದ ಜನರ ಭಯಹರಡುವ ಒ0ದು ಸುದ್ದಿ ಮಾತ್ರ ಆಗಿತ್ತು.
ಆ ಕಾಲದಲ್ಲಿ ಅಂತರ್ಜಾಲದ ಉಪಗ್ರಹದ ಈ ಸರಣಿ ಬೆಳಕಿನ ಮೆರವಣಿಗೆ ನೋಡಿದ್ದರೆ ಏನೇನೆಲ್ಲ ಸುದ್ದಿ ಆಗುತ್ತಿತ್ತೋ !?.
Comments
Post a Comment