Skip to main content

ಆನಂದಪುರಂ ಕನ್ನಡ ಸಂಘದ ಆವರಣದಲ್ಲಿ 2001ರಲ್ಲಿ ನಾ.ಡಿಸೋಜ ಬಯಲು ರಂಗಮಂದಿರ ಕಡಿದಾಳು ಶಾಮಣ್ಣ ಉದ್ಘಾಟಿಸಿದ್ದರು

#ಆನಂದಪುರಂನ_ಕನ್ನಡ_ಸಂಘ

#2001ರಲ್ಲಿ_ಆನಂದಪುರಂ_ಕನ್ನಡ_ಸಂಘದ_ಆವರಣದಲ್ಲಿ_ನಾ_ಡಿಸೋಜ_ಬಯಲು_ರಂಗ_ಮಂದಿರ 

#ಉದ್ಘಾಟನೆ_ಕಡಿದಾಳು_ಶಾಮಣ್ಣರಿಂದ 

  1995 ರಿಂದ 2001ರವರೆಗೆ ಆನಂದಪುರಂ ಹೋಬಳಿಯಲ್ಲಿ ರಚನಾತ್ಮಕ ಕಾಯ೯ ನೆರವೇರಿಸುವ ಹುಮ್ಮಸ್ಸು ಮತ್ತು ವಯಸ್ಸು ನನ್ನದಾಗಿತ್ತು ಆಗ ನನ್ನ ವಯಸ್ಸು 30.
  ಮುರುಘಾಮಠ ಸ.ಪ್ರಾ.ಶಾಲೆ ಆವರಣದಲ್ಲಿ ಕೆ.ವಿ.ಸುಬ್ಬಣ್ಣ ರಂಗಮಂದಿರ, ಆನಂದಪುರಂ ಕಾಲೇಜ್ ಆವರಣದಲ್ಲಿ ಹಾಸ್ಯ ನಟ ಬಾಲಕೃಷ್ಣ ರಂಗಮಂದಿರ, ಯಡೇಹಳ್ಳಿ ಶಾಲಾ ಆವರಣದಲ್ಲಿ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ ರಂಗ ಮಂದಿರ ಪ್ರಾರಂಬಿಸಿದ ನಂತರ ಸಾಗರದ ನೆಚ್ಚಿನ ಸಾಹಿತಿ ನಾ.ಡಿಸೋಜ ಬಯಲು ರಂಗಮಂದಿರ ಆನಂದಪುರಂ ನ ಕನ್ನಡ ಸಂಘದ ಆವರಣದಲ್ಲಿ ನಿಮಿ೯ಸಿ ಕಡಿದಾಳು ಶಾಮಣ್ಣರಿಂದ ಉದ್ಘಾಟಿಸಿದ್ದು ಈ ಸಮಾರಂಭದಲ್ಲಿ ನಾ.ಡಿಸೋಜರು ಖುದ್ದಾಗಿ ಭಾಗವಹಿಸಿದ್ದರು.
 ಆ ದಿನ ಶಿವಮೊಗ್ಗದ ಜಾಷದಿ ಸಸ್ಯಗಳ ತಜ್ಞ ವೆಂಕಟಗಿರಿಯರನ್ನ ಸನ್ಮಾನಿಸಿದ್ದು ಕೂಡ.
  ಎಲ್ಲರೂ ನನ್ನ ಮನೆಯಲ್ಲಿ ಚಹಾ ಕುಡಿದು ಕಾಯ೯ಕ್ರಮಕ್ಕೆ ಹೋಗಿದ್ದೆವು.
  ಕಡಿದಾಳು ಶಾಮಣ್ಣ ನಾ.ಡಿಸೋಜ ರಂಗಮ೦ದಿರ ಉದ್ಘಾಟಿಸಿ ದೇವಾಲಯಕ್ಕೆ ಮುಂಚೆ ಟಾಯಿಲೆಟ್ ನಿಮಾ೯ಣ ಆಗಬೇಕೆಂದು 2001ರಲ್ಲೇ ಸ್ವಚ್ಚ ಭಾರತ ಪ್ರತಿಪಾದಿಸಿದರೆ ನಾ.ಡಿ.ನನ್ನ ಹೆಸರಲ್ಲಿ ರಂಗ ಮಂದಿರ ನನ್ನ ಜೀವನದ ಅವಿಸ್ಮರಣಿಯ ದಿನ ಎಂದರು, ನಂತರ ಅವರು ಅತ್ಯಂತ ಮೇಲ್ಮಟ್ಟದ ಸ್ಥಾನ ಪಡೆದಿದ್ದಾರೆ.
 ಅವತ್ತು ಆನಂದಪುರದ ಕನ್ನಡ ಸಂಘದ ಅಧ್ಯಕ್ಷ ಹಾ.ಮಾ.ಬಾಷಾ ಈಗಿಲ್ಲ, ನಾ.ಡಿಸೋಜರನ್ನು ಈ ಕಾರ್ಯಕ್ರಮದ ನಂತರ ಬೇಟಿ ಆಗಲಿಲ್ಲ, ಆಗಾಗ್ಗೆ ಶಿವಮೊಗ್ಗದ ಮಿನಾಕ್ಷಿ ಭವನದಲ್ಲಿ ವೆಂಕಟಗಿರಿ ಸಿಗುತ್ತಾರೆ, ಈ ಕಡೆ ಬಂದಾಗ ಕಡಿದಾಳು ಶಾಮಣ್ಣ ಒಂದೆರೆಡು ಬಾರಿ ಮನೆಗೆ ಬಂದಿದ್ದರು, ಆನಂದಪುರದ ಕನ್ನಡ ಸಂಘ ಈಗಲೂ ಪ್ರತಿ ವಷ೯ ವಾಷಿ೯ಕೋತ್ಸವ ಆಚರಿಸುತ್ತದೆ.
  ಸಂಘವು ತನ್ನ ಬೆಳ್ಳಿಹಬ್ಬ ಆಚರಣೆ ಸಂದರ್ಭದಲ್ಲಿ ಬಿಡುಗಡೆ ಮಾಡಿದ #ನಮ್ಮೂರ_ಇತಿಹಾಸ ಎಂಬ ಸ್ಮರಣ ಸಂಚಿಕೆ ಅಮೂಲ್ಯವಾದ ಊರಿನ ಇತಿಹಾಸ ದಾಖಲಿಸಿದೆ.
  ಆನಂದಪುರದ ಕನ್ನಡ ಸಂಘ ಗೋಕಾಕ್ ವರದಿ ಜಾರಿಯ ಹೋರಾಟದಲ್ಲಿ ನಟ ಸಾವ೯ಬೌಮ ರಾಜ್ ಕುಮಾರ್ ಕರೆಸಿ ಆನಂದಪುರದಲ್ಲಿ ಸಭೆ ನಡೆಸಿದ್ದು, ಡಾಕ್ಟರ್ ಮೊದಿಯವರಿಂದ ಮೂರು ಸಾರಿ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ, ಪತ್ರಕತ೯ರ ತರಬೇತಿ ಶಿಬಿರ, ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪದೆ೯, ಜಿಲ್ಲಾ ತಾಲ್ಲೂಕ್ ಮಟ್ಟದ ಯುವಜನ ಮೇಳ, ಕಥೆ ಕವನ ರಚನಾ ತರಬೇತಿ ಹೀಗೆ ಹತ್ತಾರು ರಚನಾತ್ಮಕ ಕಾಯ೯ಕ್ರಮ ನಿರಂತರವಾಗಿ ನಡೆಸಿಕೊಂಡು ಬಂದಿದೆ ಇತ್ತೀಚಿಗೆ ಕೆಲವು ಹಿತಾಸಕ್ತಿಗಳು ಈ ಅತ್ಯುತ್ತಮ ಸಂಘ ನಿಷ್ಕ್ರಿಯಗೊಳಿಸುತ್ತಿದ್ದರೂ ಅದನ್ನ ಸರಿಪಡಿಸಿಕೊಂಡು ಸಮಾಜ ಸುಧಾರಣೆಯ ಕಾಯ೯ಕ್ರಮದಲ್ಲಿ ಆನಂದಪುರಂ ಕನ್ನಡ ಸಂಘ ಮುಂದುವರೆಯುತ್ತಿರುವುದು ಸೋಜಿಗವೇ !?

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...