#ಅವದಿ_ಮ್ಯಾಗಜೀನ್
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಅವದಿ ಆನ್ ಲೈನ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಮ್ಯಾಗಜೀನ್ ಗೆ ಈಗ 14 ವರ್ಷದ ಆಚರಣೆಯಲ್ಲಿದೆ, ಈ ಡಿಜಿಟಲ್ ಮ್ಯಾಗಜೀನ್ ನಲ್ಲಿ ಏನಿದೆ ಏನಿಲ್ಲ! ಕನ್ನಡ ಸಾಹಿತ್ಯ ಸಂಸ್ಕೃತಿಯ ಸುದ್ದಿ ವಿಮರ್ಷೆಗಳ ಸಾಲು ಸಾಲೇ ಡಿಜಿಟಲ್ ರೂಪದಲ್ಲಿದೆ ವೀಕ್ಷಿಸಿ.
ನಿನ್ನೆ (8- ಡಿಸೆಂಬರ್ -20 21) ರಂದು ನನ್ನ ಸಣ್ಣ ಕಥಾ ಸಂಕಲನದ ಬಗ್ಗೆ ಆರ್.ಟಿ. ವಿಠಲ ಮೂರ್ತಿಯವರ ಅಭಿಪ್ರಾಯ ಪ್ರಕಟ ಆಗಿದೆ.
ಈ ಕಥಾ ಸಂಕಲದಲ್ಲಿ ಆರ್.ಟಿ. ವಿಠಲ ಮೂರ್ತಿ, ಅರವಿಂದ ಚೊಕ್ಕಾಡಿ ಮತ್ತು ಶೃಂಗೇಶರು ಮುನ್ನುಡಿಗಳ ಮೂಲಕ ಬೆನ್ನು ತಟ್ಟಿದ್ದಾರೆ.
ಮೊದಲ ಕಾದಂಬರಿ #ಬೆಸ್ತರ_ರಾಣಿಚ೦ಪಕಾ ನಾನು ನಿರೀಕ್ಷಿಸದ ಅಭೂತ ಪೂರ್ವ ಯಶಸ್ಸು ದಾಖಲೆಯ ಜೊತೆ ರಾಣಿ ಚಂಪಕಾಳಿಗಾಗಿ ರಾಜ ನಿರ್ಮಿಸಿದ ಸ್ಮಾರಕ #ಚ೦ಪಕ_ಸರಸ್ಸು ಅನೇಕರ ಸಂಶೋದನೆಗೆ, ವೀಕ್ಷಣೆಗೆ ಕಾರಣವಾಗಿ ಈಗ ನಾನೂರು ವರ್ಷದ ಆಚರಣೆ ಸಂದರ್ಭದಲ್ಲಿ ಪ್ರಖ್ಯಾತ ನಟ ಯಶ್ ಅವರ ಸಮಾಜ ಸೇವಾ ಸಂಸ್ಥೆ ಯಶೋಮಾಗ೯ದ ಮುಖಾಂತರ ಪುನಶ್ಚೇತನ ಕಾಮಗಾರಿ ನಾಡಿನ ಪ್ರಖ್ಯಾತ ಜಲ ವಿಜ್ಞಾನಿ ಶಿವಾನಂದ ಕಳವೆಯವರಿಂದ ಭರದಿಂದ ನಡೆದಿದೆ.
Comments
Post a Comment