#ರಾಮಕಿಣಿಯವರ_ಪುತ್ರಿಯರು_ಐವತ್ತು_ವರ್ಷದ_ನಂತರ_ಚಂಪಕಸರಸ್ಸು_ವೀಕ್ಷಣೆಗೆ_ಬಂದಿದ್ದರು.
#ಹುಟ್ಟಿದ_ಊರು_ಬೆಳೆದ_ಪರಿಸರದ_ಆಕರ್ಷಣೆ_ಅಂತಹದ್ದು.
https://arunprasadhombuja.blogspot.com/2021/06/42.html
ನಾನು ಬಾಲ್ಯದಲ್ಲಿ ನೋಡುತ್ತಿದ್ದ ಆನಂದಪುರಂನ ರಾಮಕಿಣಿಯವರ ಕೋಮಲ ವಿಲಾಸ್ ಹೋಟೆಲ್ ಅಂತಹದ್ದು ಇನ್ನೊಂದು ಈವರೆಗೆ ನೋಡಿಲ್ಲ, ಈಗ ನಾನು ಸ್ವತ: ಲಾಡ್ಜ್ ರೆಸ್ಟೋರೆಂಟ್ ಗಳ ಮಾಲಿಕನಾಗಿ ಇದು ನನ್ನ ಪ್ರಾಮಾಣಿಕ ಅಭಿಪ್ರಾಯ.
ಅವರ ಮೂವರು ಪುತ್ರಿಯರು ನಿನ್ನೆ ಉಡುಪಿಗೆ ಕುಟುಂಬದ ವಿವಾಹ ಕಾರ್ಯಕ್ರಮಕ್ಕೆ ಬಂದವರು ತಾವು ಹುಟ್ಟಿದ ಊರಿಗೆ ಬಂದಿದ್ದರು ಜೊತೆಯಲ್ಲಿ ಅವರ ಪತಿಯವ ರ ಜೊತೆ.
ಸುಮಾರು 50 ವರ್ಷದ ಹಿಂದೆ ಈ ಊರು ತೊರೆದವರು ಪುನಃ ಆನಂದಪುರಂಗೆ ಬರಲು ಮುಖ್ಯ ಕಾರಣ ಚಂಪಕ ಸರಸ್ಸು ಮತ್ತೊಮ್ಮೆ ನೋಡ ಬೇಕೆಂಬ ತುಡಿತ.
ಸಾಮಾಜಿಕ ಜಾಲ ತಾಣ ಕಳೆದು ಹೋದ ಸಂಪರ್ಕವನ್ನು ಮತ್ತೆ ಜೋಡಿಸಿದೆ.
ದೊಡ್ಡ ಮಗಳು ಶ್ರೀಮತಿ ನಿರ್ಮಲಾ ಮತ್ತು ಅವರ ಪತಿ ರಾಮನಾಥ ನಾಯಕರು ದೂರದ ಓಮನ್ ದೇಶದಲ್ಲಿ ಕಳೆದ 35 ವರ್ಷದಿಂದ ನೆಲೆಸಿದ್ದಾರೆ.
ಎರಡನೆ ಮಗಳು ಶ್ರೀಮತಿ ನಳಿನಿ ಮತ್ತು ಅವರ ಪತಿ ಹೆಚ್.ಕೆ. ಕಾಮತ್ (ಭಾರತೀಯ ವಾಯುಪಡೆಯಲ್ಲಿ ಉದ್ಯೋಗಿ ಆಗಿದ್ದವರು) ದೇಶವೆಲ್ಲ ಸುತ್ತಿ ಈಗ ಬೆಂಗಳೂರಲ್ಲಿ ನೆಲೆಸಿದ್ದಾರೆ.
ಮೂರನೆ ಮಗಳು ಶ್ರೀಮತಿ ನಯನ ಮತ್ತು ಅವರ ಪತಿ ಲಕ್ಷ್ಮಣ್ ಶೆಣೈ ಬೆಂಗಳೂರು ನಿವಾಸಿಗಳಾಗಿದ್ದಾರೆ.
ಇವರನ್ನು ನಮ್ಮ ಆನಂದಪುರಂನ ಪತ್ರಕರ್ತರು, ಯುವ ಮುಖಂಡರೂ, ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ಕಾರ್ಯದರ್ಶಿ ಬಿ.ಡಿ. ರವಿ ಚಂಪಕ ಸರಸ್ಸು ದರ್ಶನ ಮಾಡಿಸಿದ್ದಾರೆ ಇವರ ತಂದೆ ಟೀಕಪ್ಪ ಮಾಸ್ತರ್ ಇವರಿಗೆಲ್ಲ ಪ್ರಾಥಮಿಕ ಶಾಲೆಯಲ್ಲಿ ಗುರುಗಳಾಗಿದ್ದರು.
ಚಂಪಕ ಸರಸ್ಸು, ಕೋಟೆ ಆಂಜನೇಯ ದೇವಾಲಯ, ರಂಗನಾಥ ದೇವಾಲಯ ಮತ್ತು ಬ್ರಹ್ಮಪುರಿ ಆಂಜನೇಯ ದೇವರ ದರ್ಶನ ಮಾಡಿ ಬೆಂಗಳೂರಿಗೆ ತೆರಳಿದರು.
ಹುಟ್ಟಿದ ಊರಿನ ಬಗ್ಗೆ ಪ್ರತಿಯೊಬ್ಬನಲ್ಲೂ ಇರುವ ಆಕಷ೯ಣೆ 50 ವರ್ಷದ ನಂತರವೂ ನವನವೀನವೇ ಎಂಬುದು ಈ ಮೂವರು ಸಹೋದರಿಯರ ಸಂತ್ರಪ್ತಿಯ ಮುಖ ಬಾವದಲ್ಲಿ ಗ್ರಹಿಸಬಹುದು.
ಚಂಪಕ ಸರಸ್ಸು ಎಂಬ ಕೆಳದಿ ರಾಜ ವೆಂಕಟಪ್ಪ ನಾಯಕರು ಮತ್ತು ರಾಣಿ ಚಂಪಕರ ದುರಂತ ಪ್ರೇಮ ಕಥೆಯ ಸ್ಮಾರಕ ಮುಂದಿನ ದಿನದಲ್ಲಿ ಇಲ್ಲಿ ಹುಟ್ಟಿ ಬೆಳೆದು ಬೇರೆಲ್ಲೊ ನೆಲೆಸಿದ ವರನ್ನೆಲ್ಲ ಪುನಃ ಹುಟ್ಟೂರಿಗೆ ಕರೆಸಿಕೊಳ್ಳಲಿದೆ.
ಇದನ್ನು ಅಭಿವೃದ್ದಿ ಮಾಡುತ್ತಿರುವ ಖ್ಯಾತ ಚಲನಚಿತ್ರ ನಟ ಯಶ್, ನೇತೃತ್ವ ವಹಿಸಿದ ಜಲ ತಜ್ಞ ಶಿವಾನಂದ ಕಳವೆ, ಇವರಿಗೆ ಸಹಕರಿಸುತ್ತಿರುವ ಸ್ಥಳಿಯ ಯುವ ಪಡೆ, ಚಂಪಕ ಸರಸ್ಸು ಪುನಶ್ಚೇತನಕ್ಕಾಗಿ ಸ್ಥಳಿಯರನ್ನ ಸೇರಿಸಿ ಈಜು ತರಬೇತಿ ಪ್ರಾರಂಬಿಸಿ ಮೊದಲ ಸ್ವಚ್ಚತೆಗೆ ಕಾರಣರಾದ ಈಜು ತಜ್ಞ ಸಾಗರದ ಜೀವ ವಿಮಾದ ಹರೀಶ್ ನವಾತೆ ಅವರನ್ನು ಚಂಪಕ ಸರಸ್ಸು ಪರಿಚಯಿಸಿದ ಸ್ಥಳಿಯ ಯುವ ಮುಂದಾಳು ಜೀವ ವಿಮಾ ಹರೀಶ್, ಸ್ಥಳಿಯ ಕನ್ನಡ ಸಂಘ, ಆನಂದಪುರಂನ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದ ಖ್ಯಾತ ದೈಹಿಕ ಶಿಕ್ಷಕರಾಗಿದ್ದ ಎಸ್.ಆರ್.ಕೃಷ್ಣಪ್ಪ,ಜಲ ತಜ್ಞ ಶಿವಾನಂದ ಕಳವೆಯವರಿಗೆ ನಾಲ್ಕು ವರ್ಷದ ಹಿಂದೆ ಚಂಪಕ ಸರಸ್ಸು ತೋರಿಸಿದ ನೀಚಡಿಯ ಪತ್ರಕರ್ತ ವಸಂತ್ ಮತ್ತು ನೀಚಡಿ ಕೆರೆ ಅಭಿವೃದ್ಧಿ ಮಾಡಿದ ನೀಚಡಿಯ ಸಹೃದಯ ಗೆಳೆಯರನ್ನೆಲ್ಲ ಅಭಿನಂದಿಸುತ್ತೇನೆ.
Comments
Post a Comment