Blog number1126.ಆನಂದಪುರಂ ಸಾಹಿತ್ಯ ಹಬ್ಬ ಭಾಗ 9 , ವಿಶ್ವದಾಖಲೆಯ ಹಬ್ಬು ಕುಟುಂಬದ ರಾಮಚಂದ್ರ ಹಬ್ಬು ಅವರು ತಮ್ಮ ಸಾಹಿತ್ಯ ಕೃತಿ ಮತ್ತು ಜೀವನದ ಬಗ್ಗೆ ಆನಂದಪುರಂ ಸಾಹಿತ್ಯ ಹಬ್ಬದಲ್ಲಿ ಮಾತಾಡಿದ್ದಾರೆ
#ಭಾಗ_9. #ಆನಂದಪುರಂ_ಸಾಹಿತ್ಯ_ಹಬ್ಬ. #ವಿಶ್ವದಾಖಲೆಯ_ಹಬ್ಬು_ಸಾಹಿತ್ಯ_ಕುಟುಂಬದೊಂದಿಗೆ_ಸಂವಾದ #ಕಾರವಾರದ_ದಿವೇಕರ_ಕಾಲೇಜಿನ_ನಿವೃತ್ತ_ಪ್ರಾಚಾರ್ಯರಾದ #ರಾಮಚಂದ್ರ_ಹಬ್ಬು_ಸಂವಾದದಲ್ಲಿ. https://photos.app.goo.gl/o7NKC9G9diEkLnx3A ಇಂಡಿಯನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಕನ್ನಡದ ಸಾಹಿತ್ಯ ಕುಟುಂಬದ ದಾಖಲೆ ನಮೂದಾಗಿದೆ ಸದ್ಯದಲ್ಲೇ ಗಿನ್ನೆಸ್ ರೆಕಾರ್ಡ್ ಕೂಡ ಆಗಲಿದೆ. ಒಂದು ಕುಟುಂಬದಲ್ಲಿ ತಂದೆ ಮತ್ತು ಆರು ಗಂಡು ಮಕ್ಕಳು ಸಾಹಿತಿಗಳು ಅವರೆಲ್ಲರ ಸಾಹಿತ್ಯ ಕೃತಿಗಳು ಪ್ರಕಟವಾಗಿದೆ. ದಿನಾಂಕ 11-ಡಿಸೆಂಬರ್ -2022 ರ ಭಾನುವಾರ ಆನಂದಪುರಂನಲ್ಲಿ ನಮ್ಮ ಶ್ರೀ ಕೃಷ್ಣ ಸರಸ ಕನ್ವೆನ್ಷನ್ ಹಾಲ್ ನಲ್ಲಿ ಹಬ್ಬು ಕುಟುಂಬದ ಪ್ರಕಟಿತ ಪುಸ್ತಕಗಳ ಪ್ರದರ್ಶನವನ್ನ ಶಿವಮೊಗ್ಗದ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಂಜುನಾಥ್ ಉದ್ಘಾಟಿಸಿದ್ದರು. ನನ್ನ ಎರೆಡು ಪುಸ್ತಕಗಳ ಅವಲೋಕನ ಮತ್ತು ಹಬ್ಬು ಸಾಹಿತ್ಯದ ಸಂವಾದ ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಪತ್ರಕರ್ತ, ಶಿಕ್ಷಣ ತಜ್ಞ ಹಾಗೂ ಸಾಹಿತಿಗಳಾದ ಅರವಿಂದ ಚೊಕ್ಕಾಡಿ ಅವರು ನೆರವೇರಿಸಿದರು. ದಿವಂಗತ ಸುಗುಣ ಶಂಕರರು 1930 ರಿಂದ 1940ರವರೆಗೆ ಬರೆದ ಬರಹಗಳು ಅನಾಮಿಕನ ಉಲುಹು ಪುಸ್ತಕ 2004 ರಲ್ಲಿ ಪ್ರಕಟವಾಗಿದೆ. ಕುಟುಂಬದ ಹ...