ಬಿ_ಎಸ್ಸಿ_ಕಾರ್ಡಿಯಾಕ್_ಕೇರ್_ಟೆಕ್ನಾಲಜಿ. #NEET_ಪರೀಕ್ಷೆ_ಅವಲಂಬನೆ_ಬೇಕಾಗಿಲ್ಲ. NEET ಪರೀಕ್ಷೆಯೊಂದೇ ಜೀವನದ ಅಂತಿಮ ಗುರಿ ಎಂದು ಕೊಳ್ಳಬಾರದು. BSC ಅಲೈಡ್ ಹೆಲ್ತ್ ಸೈನ್ಸ್ ವೈದ್ಯಕೀಯ ಕ್ಷೇತ್ರದಲ್ಲಿ ಸಾದನೆ ಮಾಡಬೇಕೆನ್ನುವ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸುತ್ತದೆ. ಪೋಷಕರು ಮತ್ತು ವಿದ್ಯಾರ್ಥಿಗಳು ಈ ಬಗ್ಗೆ ತಿಳಿದುಕೊಳ್ಳಲು ಇಲ್ಲಿದೆ ಮಾಹಿತಿ... ಪ್ರತಿ ವರ್ಷ ಸುಮಾರು 22ರಿಂದ 24 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತದಲ್ಲಿ NEET-UG ಪರೀಕ್ಷೆಗೆ ನೋಂದಾಯಿಸಿಕೊಳ್ಳುತ್ತಾರೆ. ಇವರಲ್ಲಿ ಪರೀಕ್ಷೆ ಬರೆದು ಅರ್ಹತೆ ಪಡೆಯುವವರ ಸಂಖ್ಯೆ ಸುಮಾರು 11 ರಿಂದ 13 ಲಕ್ಷದಷ್ಟಿರುತ್ತದೆ. ಆದರೆ ಅರ್ಹತೆ ಪಡೆದವರೆಲ್ಲರಿಗೂ ವೈದ್ಯಕೀಯ ಸೀಟು ಸಿಗುವುದಿಲ್ಲ,ಭಾರತದಲ್ಲಿ ಲಭ್ಯವಿರುವ ಸೀಟುಗಳ ಸಂಖ್ಯೆ ಸೀಮಿತವಾಗಿರುವುದರಿಂದ ಪ್ರತಿ ವರ್ಷ ಅಂದಾಜು 1.2 ರಿಂದ 1.3 ಲಕ್ಷ ವಿದ್ಯಾರ್ಥಿಗಳು ಮಾತ್ರ MBBS ಕೋರ್ಸ್‌ಗೆ ಪ್ರವೇಶ ಪಡೆದು ವೈದ್ಯರಾಗುವತ್ತ ಹೆಜ್ಜೆಯಿಡುತ್ತಾರೆ. ಆದ್ದರಿಂದ ಈ BSC ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ ಮಾಹಿತಿಯನ್ನು ನಿಮ್ಮ ಆಪ್ತರಿಗೆ ಹಂಚಿ. #ಬಿ_ಎಸ್ಸಿ_ಕಾರ್ಡಿಯಾಕ್_ಕೇರ್_ಟೆಕ್ನಾಲಜಿ. (B.Sc. Cardiac Care Technology) ಎಂಬುದು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಮತ್ತು ಚಿಕಿತ್ಸೆಗಳ ಬ...