Skip to main content

Posts

Showing posts with the label This year 2019 Best film Govt higher primary school kasragodu

# ಈ ವಷ೯ದ ಅತ್ಯುತ್ತಮ ಚಲನಚಿತ್ರ ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆ ಕಾಸರ ಗೋಡು #

#ಸರ್ಕಾರಿಹಿರಿಯಪ್ರಾಥಮಿಕಶಾಲೆಕಾಸರಗೋಡು #  ಮೊನ್ನೆ ಹುಬ್ಬಳ್ಳಿ, ಶಿಶುನಾಳದಿ೦ದ ವಾಪಾಸು ಹೊರಡುವಾಗ  ರಾತ್ರಿ 8 ಆಗಿತ್ತು, ಊರು ಸೇರಲು 4 ಗಂಟೆ ಅವಧಿ ಬೇಕು, ನಾವು ಪ್ರಯಾಣಕ್ಕೆ ಒಯ್ದಿದ್ದು ರಿಪ್ಪನ್ ಪೇಟೆಯ ಗೆಳೆಯರಾದ ಶಿವಕುಮಾರರ ಹೊಸ ಮಿನಿ ಬಸ್, ಪ್ರಯಾಣದ ಕಾಲಾಹರಣಕ್ಕಾಗಿ ಈ ಸಿನಿಮಾ ಹಾಕಿದ್ದರು.   ಹಾಸ್ಯ ಮತ್ತು ಮನೋರಂಜನೆಯ ಜೊತೆ ಕಾಸರಗೋಡು ಕನ್ನಡಿಗರ ಸಮಸ್ಯೆಗಳನ್ನ ಈ ಸಿನಿಮಾ ನವಿರಾಗಿ ತೋರಿಸಿದೆ.  ಇವತ್ತು ಕಾಸರಗೋಡಿನ ಕನ್ನಡ ಹೋರಾಟಗಾರ ಕಾಸರಗೋಡು ಶಿವರಾಂ ಪೋನ್ ಮಾಡಿದಾಗ ಇದೆಲ್ಲ ನೆನಪಾಯಿತು, ಈ ಸಿನೆಮಾ ನೋಡಿದ ಬಗ್ಗೆ ಹೇಳಿದೆ, ಈ ಸಿನಿಮಾದಲ್ಲಿ ದಡ್ಡ ಸತೀಶನ ಪಾತ್ರ ಮಾಡಿದವ ಇವರ ಸಂಬಂಧಿ ಅಂತೆ ಪ್ರಥಮ ಪಿಯು ವಿದ್ಯಾಥಿ೯ ಈಗ ಅಂದರು.   ಅವರಿಗೆ ಯಾವುದೋ ಮಾಹಿತಿಗಾಗಿ ಪೋನ್ ಮಾಡಿದ್ದರು, ಹಲವು ಬಾರಿ ನಾನು ಕಾಸರಗೋಡಿಗೆ ಹೋಗಿದ್ದೆ. ಅಲ್ಲಿನ ಕನ್ನಡಿಗರು ತಮ್ಮ ಬಾಷೆಗಾಗಿ ಈಗಲೂ ಹೋರಾಟ ಜೀವ೦ತ ಇಟ್ಟಿದ್ದಾರೆ.  ಹಾಲಿ ಕಾಸರಗೋಡಿನಲ್ಲಿ 183 ಕನ್ನಡ ಶಾಲೆಗಳು ಜೀವ೦ತವಾಗಿದೆ ಎಂದರೆ ಅವರ ಬಾಷಾಭಿಮಾನ ಅಥ೯ವಾಗುತ್ತದೆ, ಅಲ್ಲಿ ಈಗಲೂ ಮನೆ ಮನೆಗಳಲ್ಲಿ ಖಾಸಾಗಿ ಗ್ರಂಥಾಲಯಗಳಿದೆ.   ಉದಯವಾಣಿ ಪತ್ರಿಕೆ ಇವರಿಗೆಲ್ಲ ಸಂಬಂದ ಸೇತುವಾಗಿದೆ, ಈ ಪತ್ರಿಕೆಯ ಕಾಸರಗೋಡು ಜಿಲ್ಲಾ ಬ್ಯೂರೋ ಚೀಪ್ ಶ್ರೀ ಪ್ರದೀಪ್ ಬೇಕಲ್ ಇಲ್ಲಿನ ಕನ್ನಡ ಹೋರಾಟಗಾರರಿಗೆ ಬೆನ್ನೆಲುಬಾಗಿದ್ದಾರೆ.   ಕ...