ಮೊನ್ನೆ ಹುಬ್ಬಳ್ಳಿ, ಶಿಶುನಾಳದಿ೦ದ ವಾಪಾಸು ಹೊರಡುವಾಗ ರಾತ್ರಿ 8 ಆಗಿತ್ತು, ಊರು ಸೇರಲು 4 ಗಂಟೆ ಅವಧಿ ಬೇಕು, ನಾವು ಪ್ರಯಾಣಕ್ಕೆ ಒಯ್ದಿದ್ದು ರಿಪ್ಪನ್ ಪೇಟೆಯ ಗೆಳೆಯರಾದ ಶಿವಕುಮಾರರ ಹೊಸ ಮಿನಿ ಬಸ್, ಪ್ರಯಾಣದ ಕಾಲಾಹರಣಕ್ಕಾಗಿ ಈ ಸಿನಿಮಾ ಹಾಕಿದ್ದರು.
ಹಾಸ್ಯ ಮತ್ತು ಮನೋರಂಜನೆಯ ಜೊತೆ ಕಾಸರಗೋಡು ಕನ್ನಡಿಗರ ಸಮಸ್ಯೆಗಳನ್ನ ಈ ಸಿನಿಮಾ ನವಿರಾಗಿ ತೋರಿಸಿದೆ.
ಇವತ್ತು ಕಾಸರಗೋಡಿನ ಕನ್ನಡ ಹೋರಾಟಗಾರ ಕಾಸರಗೋಡು ಶಿವರಾಂ ಪೋನ್ ಮಾಡಿದಾಗ ಇದೆಲ್ಲ ನೆನಪಾಯಿತು, ಈ ಸಿನೆಮಾ ನೋಡಿದ ಬಗ್ಗೆ ಹೇಳಿದೆ, ಈ ಸಿನಿಮಾದಲ್ಲಿ ದಡ್ಡ ಸತೀಶನ ಪಾತ್ರ ಮಾಡಿದವ ಇವರ ಸಂಬಂಧಿ ಅಂತೆ ಪ್ರಥಮ ಪಿಯು ವಿದ್ಯಾಥಿ೯ ಈಗ ಅಂದರು.
ಅವರಿಗೆ ಯಾವುದೋ ಮಾಹಿತಿಗಾಗಿ ಪೋನ್ ಮಾಡಿದ್ದರು, ಹಲವು ಬಾರಿ ನಾನು ಕಾಸರಗೋಡಿಗೆ ಹೋಗಿದ್ದೆ. ಅಲ್ಲಿನ ಕನ್ನಡಿಗರು ತಮ್ಮ ಬಾಷೆಗಾಗಿ ಈಗಲೂ ಹೋರಾಟ ಜೀವ೦ತ ಇಟ್ಟಿದ್ದಾರೆ.
ಹಾಲಿ ಕಾಸರಗೋಡಿನಲ್ಲಿ 183 ಕನ್ನಡ ಶಾಲೆಗಳು ಜೀವ೦ತವಾಗಿದೆ ಎಂದರೆ ಅವರ ಬಾಷಾಭಿಮಾನ ಅಥ೯ವಾಗುತ್ತದೆ, ಅಲ್ಲಿ ಈಗಲೂ ಮನೆ ಮನೆಗಳಲ್ಲಿ ಖಾಸಾಗಿ ಗ್ರಂಥಾಲಯಗಳಿದೆ.
ಉದಯವಾಣಿ ಪತ್ರಿಕೆ ಇವರಿಗೆಲ್ಲ ಸಂಬಂದ ಸೇತುವಾಗಿದೆ, ಈ ಪತ್ರಿಕೆಯ ಕಾಸರಗೋಡು ಜಿಲ್ಲಾ ಬ್ಯೂರೋ ಚೀಪ್ ಶ್ರೀ ಪ್ರದೀಪ್ ಬೇಕಲ್ ಇಲ್ಲಿನ ಕನ್ನಡ ಹೋರಾಟಗಾರರಿಗೆ ಬೆನ್ನೆಲುಬಾಗಿದ್ದಾರೆ.
ಕಾಸರಗೋಡು ಜಿಲ್ಲೆಯ ಹೊಸದುಗ೯ ತಾಲ್ಲೂಕ್ ನ ಕಾಂಜನಗಾಡು ನಿತ್ಯಾನಂದ ಆಶ್ರಮ ಕೂಡ ಅನೇಕ ಕನ್ನಡ ಕಾಯ೯ಕ್ರಮಗಳ ಕೇಂದ್ರ.
ಬೇಕಲ್ ನ ಐತಿಹಾಸಿಕ ಕೋಟೆ ಕೆಳದಿ ಅರಸರು ನಿಮಿ೯ಸಿದ್ದರೂ ಕೇರಳ ಇತಿಹಾಸದಲ್ಲಿ ಟಿಪ್ಪು ಸುಲ್ತಾನ್ ನಿಮಿ೯ಸಿದ್ದಾಗಿ ನಮೂದಾಗಿದ್ದನ್ನ ನ್ಯಾಯಾಲಯದಲ್ಲಿ ದಾಖಲೆ ಸಮೇತವಾದಿಸಿ ಸರಿಪಡಿಸಿದವರು ಈ ಕನ್ನಡಿಗರು.
ಕೆಳದಿ ರಾಜರ ಕೊನೆಯ ತಂತುಗಳು ಇಲ್ಲಿ ಇದ್ದಾರೆ ಆದರೆ ಅವರು ವೀರಶೈವರಲ್ಲ ಕಾರಣ ಕೆಳದಿಯ ಕೊನೆಯ ಅರಸು ವಿವಾಹ ಆಗುವುದು ರಾಮ ಕ್ಷತ್ರಿಯ ಯುವತಿಯನ್ನ ಅವರಿಗೆ ಸಂತಾನವಿಲ್ಲದ್ದರಿಂದ ಅವರು ದತ್ತು ಪಡೆಯುವುದೂ ರಾಮ ಕ್ಷತ್ರಿಯ ಸಮುದಾಯದಲ್ಲೇ!
ಗೋವಾದಿಂದ ಪೋಚು೯ಗೀಸ್ ಮತಾಂತರ ವಿರೋದಿಸಿ, ಕೆಳದಿ ಅರಸರಲ್ಲಿ, ವಿಜಯನಗರದ ಅರಸರಲ್ಲಿ ಸೇವೆ ಸಲ್ಲಿಸುವ ಈ ಕ್ಷತ್ರಿಯ ಸಮುದಾಯದ ಇತಿ ಹಾಸವೇ ವಿಶಿಷ್ಟ, ಹೆಚ್ಚಿನವರು ಕನಾ೯ಟಕದ ಕರಾವಳಿಗೆ ಗೋವಾದಿಂದ ಬಂದು ನೆಲೆಸಿದವರು, ಕಾಸರಗೋಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಇವರು ಅಯೋಧ್ಯಾ ಮೂಲದ ವೀರ ಯೋಧರಾದ್ದರಿಂದ ಸ್ಥಳಿಯ ಕ್ಷತ್ರಿಯರಿಂದ ಪ್ರತ್ಯೇಕ ಗುರುತಿಗಾಗಿ ರಾಮ ಕ್ಷತ್ರಿಯರು ಅನ್ನುತ್ತಾರೆ, ಇವರ ಸಾಹಸ ಪ್ರವೃತ್ತಿ ಕೂಡ ಕೇರಳದ ಕಾಸರಗೋಡಿನ ಕನ್ನಡ ಚಳವಳಿ ನಿರಂತರವಾಗಿ ಮುಂದುವರಿಯಲು ಒಂದು ಕಾರಣವಾಗಿದೆ.
ಕನ್ನಡ ಪುಸ್ತಕಗಳನ್ನ ದಾನ ಮಾಡುವವರು ಕಾಸರಗೋಡಿನ ಖಾಸಾಗಿ ಕನ್ನಡ ಗ್ರಂಥಾಲಯಗಳಿಗೆ ನೀಡಿದರೆ ಅದು ನಿಜಕ್ಕೂ ಉಪಯೋಗ ಆಗುತ್ತೆ ಒಂದು ಪ್ರಸ್ತಕ ನೂರಕ್ಕೂ ಹೆಚ್ಚು ಜನ ಓದುತ್ತಾರೆ.
ಕನ್ನಡ ಪತ್ರಿಕೆಗಳನ್ನ ಉಚಿತವಾಗಿಯೂ ಕಾಸರಗೋಡು ಜಿಲ್ಲೆಗೆ ಕಳಿಸಬಹುದು.
ಅಲ್ಲಿ ಸಂಪಕಿ೯ಸ ಬಹುದಾದ ಕನ್ನಡ ಹೋರಾಟಗಾರರು ಅನೇಕರಿದ್ದಾರೆ ಅವರನ್ನೆಲ್ಲ ಒಂದುಗೂಡಿಸುವ ಸಂಚಾಲಕ ಮಿತ್ರ ಶಿವರಾಂ ಕಾಸರಗೋಡು ಇದ್ದಾರೆ ಅವರ ಮೊಬೈಲ್ ನಂಬರ್ 9448572016.
Comments
Post a Comment