#ಕುವೆ೦ಪು ಬರೆದ ಬೊಮ್ಮನ ಹಳ್ಳಿ ಕಿಂದರ ಜೋಗಿ ಇವರೇನ#
ಆನಂದಪುರOನಲ್ಲಿ ನೆಲೆಸಿರುವ ಉತ್ತರ ಕನಾ೯ಟಕದ ಜೋಗಿಗಳು ತಮ್ಮನ್ನ ಕಿನ್ನರ ಜೋಗಿ ಎಂದು ಕರೆದು ಕೊಳ್ಳುತ್ತಾರೆ ಅವರನ್ನ ಕಿಂದರ ಜೋಗಿ ಅಂತಾನು ಕರೆಯುತ್ತಾರೆ.
ಇವರ ಸಂಗೀತ ಸಾದನ ಕಿನ್ನರಿ, ಇದನ್ನ ಇವರೇ ಸ್ವತಃ ತಯಾರಿಸುತ್ತಾರೆ, ಸ್ಥಳಿಯ ವಾಗಿ ಸಿಗುವ ಒಣ ಸೋರೆಕಾಯಿ ಬುರುಡೆ, ಬಿದಿರು ಕೋಲು ಮತ್ತು ಕಿನ್ನರಿ ತಂತಿಯಿಂದ ತಯಾರಿಸುತ್ತಾರೆ, ತಯಾರಿ ಸುಲಭ ಮತ್ತು ಉಚಿತ ಆದರೆ ಅದನ್ನ ಅವರ ಲಯದಲ್ಲಿ ನುಡಿಸಲು ತರಬೇತಿ ಬೇಕು.
ಇವತ್ತು ನನ್ನ ಕಚೇರಿಗೆ ಬಂದಿದ್ದ ಕಿನ್ನರ ಜೋಗಿ, ಜನಪದ ಹಾಡುಗಾರ ತೊಂಬ್ರಿ ನಾಗರಾಜರು ಜೊತೆಯಲ್ಲಿ ತಂದಿದ್ದ ಕಿನ್ನರಿ ಬಗ್ಗೆ ವಿವರಿಸಿದರು ಕೆಲ ಜೋಗಿ ಪದ, ವಿವಿದ ಪ್ರಕಾರದ ಹಾಡುಗಳನ್ನ ಅವರ ಸಂಗೀತ ಸಾದನ ಕಿನ್ನರಿಯೊಂದಿಗೆ ಹಾಡಿ ರಂಜಿಸಿದರು.
ಆನ೦ದಪುರದ ಚಂಪಕ ಸರಸ್ಸು ಬಗ್ಗೆ ನಾನು ಸಂಗ್ರಹಿಸಿ ಬರೆದ ಕೆಳದಿ ಅರಸ ರಾಜ ವೆಂಕಟಪ್ಪ ನಾಯಕ ಮತ್ತು ರಾಣಿ ಚಂಪಕಾರ ದುರಂತ ಪ್ರೇಮಕಥೆಯನ್ನೂ ಹಾಡಿದರು.
ನನಗಾಗಿ ಕಿನ್ನರಿ ಒಂದನ್ನ ತಯಾರಿಸಿ ತಂದು ಕೊಡುವ ಅಶ್ವಾಸನೆ ಕೂಡ ನೀಡಿದರು.
Comments
Post a Comment