5 ಪುಸ್ತಕ ಅವರ ಸಹಿಯೋOದಿಗೆ ಕಳಿಸಲು ವಿನಂತಿಸಿದ್ದೆ ಬಂದು ಅನೇಕ ದಿನ ಆದರೂ ಓದಲಾಗಿರಲಿಲ್ಲ ತುಂಬಾ ವಿರಾಮದಲ್ಲಿ ಓದಬೇಕೆಂದು ಹಾಗೆ ಇಟ್ಟಿದ್ದೆ ಕಾರಣ ಇದು ಉಗಾಂಡದಲ್ಲಿ ಸವಾ೯ದಿಕಾರಿ ಇದಿ ಆಮೀನರ ಏಮಾರಿಸಿ ಭಯೋತ್ಪಾದಕರಿಂದ ಇಸ್ರೇಲ್ ತನ್ನ ದೇಶದ ಪ್ರಜೆಗಳ ಕಾಪಾಡಿದ ಘಟನೆಯ ವಿವರ ಇರುವ ಪುಸ್ತಕ.
ಪುಟ 138 ರಿಂದ ಪ್ರಾರಂಭ ಆಗುವ ರೋಚಕತೆ ಪುಸ್ತಕ ಮುಗಿಯುವವರೆಗೆ ನಿಮ್ಮನ್ನ ಬಿಡುವುದಿಲ್ಲ.
ತೇಜಸ್ವಿಯವರ ಮಿಲೇನಿಯಮ್ ಸರಣಿ ಪುಸ್ತಕದ ನಂತರ ರವಿ ಬೆಳೆಗೆರೆ ಇಂತಹ ಸತ್ಯ ಘಟನೆಯನ್ನ ರೋಚಕವಾಗಿ ಬರೆದು ಓದುಗರಿಗೆ ತಲುಪಿಸುತ್ತಿದ್ದರು ಈಗ ಇದೇ ಹಾದಿಯಲ್ಲಿ ಕನ್ನಡ ಓದುಗರಿಗೆ ಸ೦ತೋಷಕುಮಾರ್ ಮೆಹಂದಳೆ ನಡೆಯುತ್ತಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಗರಿಮೆ.
ಇನ್ನು ಇಂತಹ ಪುಸ್ತಕ ಹೆಚ್ಚು ಹೆಚ್ಚು ಬರಲಿ ಎಂದು ಅವರಿಗೆ ಶುಭ ಹಾರೈಸುತ್ತೇನೆ.
Comments
Post a Comment