#1980ರ ಪೆಬ್ರವರಿ 16ರಲ್ಲಿ ನಡೆದ ಪೂಣ೯ ಸೂಯ೯ ಗ್ರಹಣ ನಾನು ಜೀವಮಾನ ಮರೆಯುವುದಿಲ್ಲ ಕಾರಣ ಬರಿಗಣ್ಣಲ್ಲಿ ಸೂಯ೯ ಗ್ರಹಣ ನೋಡಿ ನನ್ನ ಬಲಗಣ್ಣ ಅಕ್ಷಿಪಟಲ ಹರಿದು ಹೋಗಿತ್ತು#
ಮೊದಲ ಚಿತ್ರ ಪತ್ರಕತ೯ ತಲವಾಟದ ರಾಘವೇ೦ದ್ರ ಶಮ೯ರು ತೆಗೆದ ಆತ್ಯುತ್ತಮ ಚಿತ್ರ, ಇನ್ನೊಂದು ಗ್ರಹಣ ಕಾಲದಲ್ಲಿ ಆನಂದಪುರದ ಬಸ್ ನಿಲ್ದಾಣದ ಎಲ್ಲಾ ಅಂಗಡಿ ಮಳಿಗೆ ಬಂದ್ ಆಗಿರುವುದು
ಸೂಯ೯ ಗ್ರಹಣದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಭಯ ಹೆಚ್ಚಾಗುತ್ತಿದೆ, ಟಿವಿ, ಮೊಬೈಲ್ಗಳ ಈ ಮುಂದುವರಿದ ಆದುನಿಕ ಭಾರತದಲ್ಲಿ ವಿಜ್ಞಾನದ ಹೆಚ್ಚಿನ ತಿಳುವಳಿಕೆ ಉ೦ಟಾಗುತ್ತದೆ ಮತ್ತು ಮೂಡನಂಬಿಕೆಗಳು ನಶಿಸುತ್ತದೆ ಎಂಬ ಭರವಸೆ ಸುಳ್ಳಾಗಿದೆ.
ಟಿವಿಗಳ ಚಾನಲ್ ಗಳ ಜೋತಿಷಿಗಳು ಹುಟ್ಟು ಹಾಕುವ ವಿವಿದ ಆಚರಣೆಯ ಹೆಸರಲ್ಲಿ ಬೀತಿ ಜನ ಸಾಮಾನ್ಯರ ಜೀವನ ಕ್ರಮದಲ್ಲಿ ಅನೇಕ ಮೌಡ್ಯಕ್ಕೆ ಕಾರಣವಾಗಿದೆ.
1980ರ ಪೆಬ್ರುವರಿ 16ರOದು ನಡೆದ ಖಗ್ರಾಸ ಸೂಯ೯ಗ್ರಹಣದ ದಿನ ನೆನಪಿಗೆ ಬಂತು ಅವತ್ತು ಶನಿವಾರ ಆದರೂ ಶಾಲಾ ಕಾಲೇಜುಗಳಿಗೆ ರಜಾ ನೀಡಿದ್ದರು, ದಕ್ಷಿಣ ಭಾರತದಲ್ಲಿ ಸಂಪೂಣ೯ ಗ್ರಹಣ ಗೋಚರ ಆಗುವುದರಿಂದ ದೇಶ ವಿದೇಶದ ಖಗೋಳ ವಿಜ್ಞಾನಿಗಳು ಬಂದಿದ್ದರು ಅವತ್ತಿನ ನಿತ್ಯ ಪತ್ರಿಕೆ ಮತ್ತು ರೇಡಿಯೋಗಳಲ್ಲಿ ಸೂಯ೯ ಗ್ರಹಣದ ಬಗ್ಗೆ ವೈಜ್ಞಾನಿಕ ಸಲಹೆ ಸಂವಾದಗಳು ಸುದ್ದಿ ಆಗುತ್ತಿತ್ತು.
ಬರಿಗಣ್ಣಲ್ಲಿ ನೋಡಿದರೆ ಅನಾಹುತ ಎಂಬ ಎಚ್ಚರಿಕೆ ಇತ್ತು ಅವತ್ತು ಮಧ್ಯಾಹ್ನ ಸುಮಾರು 12 ಗಂಟೆಯಿ೦ದ ಸ೦ಜೆ 5ರ ತನಕ ನಡೆದ ಗ್ರಹಣ ಮಧ್ಯಾಹ್ನ 2.23ರಿಂದ 2.30 ಸಂಪೂಣ೯ ಕತ್ತಲಾಗಿದ್ದು, ಪಕ್ಷಿಗಳು ರಾತ್ರಿ ಆಯಿತೆಂದು ಗೂಡು ಸೇರಲು ತೊಡಗಿದ್ದು, ಗೋವುಗಳು ಮಧ್ಯಾಹ್ನವೇ ಕೊಟ್ಟಿಗೆ ಸೇರಿದ್ದು ಅದೇ ಸಂದಭ೯ದಲ್ಲಿ ಅಲೆಗಳ ಉಪಾದಿಯಲ್ಲಿ ನೆರಳು ಭೂಮಿಯ ಮೇಲೆ ವೇಗವಾಗಿ ಸಾಗಿದ್ದು ಎಲ್ಲಾ 15 -16 ವಷ೯ ಪ್ರಾಯದ ನಮಗೆ ಕುತೂಹಲ ಮತ್ತು ರೋಮಾಂಚನ ಘಟನೆ ಅದಕ್ಕಾಗಿ 6 ತಿಂಗಳಿಂದ ಸುದ್ದಿ ಮಾಧ್ಯಮಗಳಿ೦ದ ಈ ಅಪೂವ೯ ಘಟನೆಗೆ ಕಾದಿದ್ದೆವು.
ನಮ್ಮ ತಂದೆ ನಮ್ಮ ಕಣ್ಣುಗಳ ರಕ್ಷಣೆ ಬಗ್ಗೆ ವಿಶೇಷ ಕಾಳಜಿವಹಿಸಿದ್ದರು x ರೇ ಶೀಟುಗಳ ಅನೇಕ ಹೊದಿಕೆ ಮಾಡಿದ್ದರ ಮೂಲಕ ಸೂಯ೯ ಗ್ರಹಣಕ್ಕೆ ಅನುಮತಿ ನೀಡಿದ್ದರು ಆದರೂ ನಾನು ಎಡಗಣ್ಣು ಕೈಯಲ್ಲಿ ಮುಚ್ಚಿ ಬರಿ ಬಲಗಣ್ಣಿ೦ದ ಸೂಯ೯ಗ್ರಹಣ ನೋಡಿದ್ದೆ, ನೋಡಬಾರದು ಮಾಡಬಾರದು ಎಂಬುದನ್ನ ಮಕ್ಕಳಾಟಿಕೆ ಆಗಿ ಉಲ್ಲಂಘನೆ ಮಾಡಿದ್ದೆ ಏನೂ ಆಗಿಲ್ಲವಲ್ಲ ಅಂತ ಸಂಭ್ರಮ ಪಟ್ಟಿದ್ದೆ 10 ವಷ೯ದ ನಂತರ ದೃಷ್ಟಿ ದೊಷ ಪರೀಕ್ಷೆ ಮಾಡಿಸಿಕೊಂಡಾಗ ಕಣ್ಣಿನ ವೈದ್ಯರು ಅಕ್ಷಿಪಟಲ ಹರಿದಿದೆ ಬರಿಗಣ್ಣಲ್ಲಿ ಸೂಯ೯ ಗ್ರಹಣ ನೋಡಿದೀರಾ ಅಂದಾಗ 1980ರ ಖಗ್ರಾಸ ಸೂಯ೯ ಗ್ರಹಣ, ನಮ್ಮ ತಂದೆಯ ನೆನಪು ಎಲ್ಲಾ ಆಯಿತು.
ಅವತ್ತು ಜನರಲ್ಲಿ ಇವತ್ತಿನ ಭಯ ಇರಲಿಲ್ಲ ಅವತ್ತಿನ ಸುದ್ದಿ ಮಾಧ್ಯಮಗಳಾದ ಪತ್ರಿಕೆಗಳು ರೇಡಿಯೋಗಳು ಜನರಿಗೆ ಬೇಕಾದ ಮಾಹಿತಿ ವೈಜ್ಞಾನಿಕ ದೃಷ್ಟಿಕೊನದಲ್ಲಿ ನೀಡಿದ್ದು ಒಂದು ಕಾರಣ ಅವತ್ತು ಖಗೋಳ ವಿಜ್ಞಾನಿಗಳ ಸಂಶೋದನ ವರದಿ ಮತ್ತು ಸಂದಶ೯ನಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗಿತ್ತು ಆದರೆ ಇವತ್ತಿನ ಸುದ್ದಿ ಮಾಧ್ಯಮ ಟೀವಿ ಚಾನಲ್ ಗಳಿ೦ದ ಏನೇನು ಮಾಹಿತಿ ಪಡೆದವೆಂದು ತಮಗೆಲ್ಲ ತಿಳಿದಿದೆ ಇವರಿಗೆಲ್ಲ ಖಗೋಳ ವಿಜ್ಞಾನಿಗಳು ಸಿಗಲಿಲ್ಲ ಸಿಕ್ಕವರೆಲ್ಲ ಅರೆ ಬರೆ ಕಲಿತ ಜೊತಿಷಿಗಳು ಸುದ್ದಿ ಪ್ರಸಾರಕ್ಕೆ ಹುಲುಸಾದ ಟೀವಿ ಮಾಧ್ಯಮ!
Comments
Post a Comment