ಶಿವಮೊಗ್ಗದಲ್ಲಿ ಮಿತ್ರರೊವ೯ರ ಹೋಟೆಲ್ ಉದ್ಫಾಟನೆ ಇತ್ತು ಅಲ್ಲಿ ಜೆ.ಹೆಚ್.ಪಟೇಲರ ಒಡನಾಡಿ ಸಂಯುಕ್ತ ಜನತಾದಳದ ಲೋಕಪಾಲ ಜೈನರ ಭಾಷಣ ಅವತ್ತಿನ ಸಭೆಯ ಹೈಲೆಟ್ ಆಗಿತ್ತು.
ಸಭೆಯಲ್ಲಿ ಅನೇಕ ಗೌರವಾನ್ವಿತ ದಂಪತಿಗಳು ಉಪಸ್ಥಿತರಿದ್ದರು.
ಅವರು ತಮ್ಮ ಬಾಷಣದ ಪ್ರಾರಂಭದಲ್ಲಿ ಕುಡಿಯೋರೆ ಬೇರೆ ಕುಡುಕರೇ ಬೇರೆ ಆದರೆ ನೀವು ಹೆಣ್ಣು ಮಕ್ಕಳು ಕುಡಿಯೋರನ್ನೆಲ್ಲ ಕುಡುಕರ ಸಾಲಿಗೆ ಸೇರಿಸಿ ಬಿಡುತ್ತೀರಿ ಇದನ್ನ ಪಟೇಲರು ಒಂದು ಘಟನೆಯಲ್ಲಿ ಹೇಳಿದ್ದು ನೆನಪಾಯಿತು ಕೇಳಿ ಅಂತ ಶುರುಮಾಡಿದರು.
ಆಗ ಶಾಸಕರ ಭವನದಿಂದ ಮೆಜೆಸ್ಟಿಕ್ ತನಕ ಜನ ಸಂಚಾರ ವಿರಳ ಸಂಜೆ 8 ಆಗುತ್ತಿದ್ದಂತೆ ಪಟೇಲರು ಕೋಡೇಸ್ xxx ರಂ ತರಲು ಹುಡುಗರಾದ ನಮ್ಮ ಹತ್ತಿರ ಹಣ ಕೊಟ್ಟು ಕಳಿಸಿದ್ದರು ನಾವು ತೆಗೆದುಕೊಂಡು ಬರುವಾಗ ಶಾಸಕರ ಭವನದ ಎದರು ಇಬ್ಬರು ಹೊಟ್ಟೆ ತುಂಬಾ ಕುಡಿದು ಕೊಂಡು ಜಗಳವಾಡುತ್ತಿದ್ದರಂತೆ ಅದನ್ನ ಇವರೆಲ್ಲ ನೋಡುತ್ತಾ ನಿಂತವರಿಗೆ ಸಮಯ ಹೋದದ್ದೇ ಗೊತ್ತಾಗಿಲ್ಲವಂತೆ, ಆಗ ಮೊಬೈಲ್ ಇಲ್ಲ ಪಟೇಲರಿಗೆ ಕುಡಿಯುವ ಸಮಯ ಮೀರಿದ್ದರಿಂದ ಚಟಪಟಿಕೆ ಕೋಪ ಬಂದಿತ್ತು, ಅಂತೂ ಇವರು ಅವರ ರಂ ಜೊತೆ ಅವರ ಕೋಣೆಗೆ ತಲುಪಿದಾಗ ಪಟೇಲರು ಯಾಕಯ್ಯ ಲೇಟ್ ಮಾಡಿದ ರಿ? ಅಂದಾಗ ಇವರು ಕೆಳಗೆ ಇಬ್ಬರು ಪುಲ್ ಟೈಟ್ ಆಗಿ ಜಗಳ ಹೊಡೆದಾಟ ಆಗ್ತಾ ಇತ್ತು ಹಾಗಾಗಿ ಲೇಟ್ ಆಯಿತು ಅಂದರಂತೆ ಆಗ ಸ್ವಲ್ಪ ಹೊತ್ತು ಸುಮ್ಮನಾದ ಪಟೇಲರು ತಮ್ಮ ಗಂಟಲು ರಂನಿಂದ ಒದ್ದೆ ಮಾಡಿಕೊಂಡವರು ಈ ಕುಡುಕರಿOದ ಕುಡಿಯೋರ ಮಯಾ೯ದೆ ಹೋಗ್ತಾ ಇದೆ ಅಂದರಂತೆ, ನಮಗೆ ಇದು ಅಥ೯ ಆಗಲಿಲ್ಲ ವಿವರಿಸಿ ಅಂತ ಇವರೆಲ್ಲ ದಂಬಾಲು ಬಿದ್ದಾಗ ಲಯಕ್ಕೆ ಬಂದಿದ್ದ ಪಟೇಲರು ಹೇಳಿದ್ದು ಹೆಚ್ಚಿನ ಜನ ರಿಲ್ಯಾಕ್ಸ್ ಗೆ, ಪ್ಯಾಷನ್ ಗೆ ಅಥವ ಟೈo ಪಾಸ್ ಗೆ ಕುಡಿತಾರೆ ಇವರಿಂದ ಅವರ ಕುಟುಂಬಕ್ಕೆ ಸಮಾಜಕ್ಕೆ ಯಾವತ್ತೂ ತೊಂದರೆ ಇಲ್ಲ ಆದರೆ ಈ ಕುಡುಕ ನನ್ನ ಮಕ್ಕಳು ಕುಡಿದು ಬೈಯ್ದಾಡಿ, ಹೊಡೆದಾಟ ಮಾಡಿ ಚರಂಡಿಲೀ ಬಿಳುತ್ತಾರೆ ಇದರಿಂದ ಕುಡಿತಾರೆ ಅಂದರೆ ಹೆಣ್ಣು ಮಕ್ಕಳೆಲ್ಲ ಎಲ್ಲರೂ ಹಿಂಗೆ ಇತಾ೯ರೆ ಅಂತ ತಿಳಿದಿರುತ್ತಾರೆ ಹಾಗಾಗಿ ಕುಡಿಯೋರ ಮಯಾ೯ದಿ ಈ ಕುಡುಕರಿಂದ ಹೋಗ್ತಾ ಇದೆ ಅಂದಾಗ ಇಡೀ ಕಾಯ೯ಕ್ರಮದಲ್ಲಿ ಭಾಗವಹಿಸಿದವರಿಂದ ಚಪ್ಪಾಳೆ ನಗುವಿನ ಕಲರವ ತುಂಬಾ ಹೊತ್ತು ನಿಂತಿರಲಿಲ್ಲ
Comments
Post a Comment