#ಕೆಮಿಕಲ್ ಕುಂಕುಮಕ್ಕೆ ಬಹಿಷ್ಕಾರ ಹಾಕಿ#
ನಾವೆಲ್ಲ ಪ್ಲಾಸ್ಟಿಕ್ ಮುಕ್ತ ಕನಾ೯ಟಕ ರಾಜ್ಯದ ಬಗ್ಗೆ ಗಮನ ಹೆಚ್ಚು ಹರಿಸುತ್ತಿದ್ದೇವೆ ಆದರೆ ರಾಜ್ಯದ ಬಹುತೇಕ ದೇವಾಲಯಗಳಲ್ಲಿ ಮತ್ತು ಪೂಜಾ ಸಮಾರಂಭಗಳಲ್ಲಿ ನಾವು ಬಳಸುವ ಕುಂಕುಮ ಮಾತ್ರ ಶುದ್ದ ರಾಸಾಯನಿಕ ಬಣ್ಣದ ಮಿಶ್ರಣದ ಕೆಂಪು ಪುಡಿ.
ಒಮ್ಮೆ ಹಣೆಗೆ ಹಚ್ಚಿದರೆ ಅದನ್ನು ತೊಳೆದು ತೆಗೆಯುವುದು ತುಂಬಾ ಕಷ್ಟ ಅಷ್ಟೇಕೆ ಕುಂಕುಮಾಚ೯ನೆ ಮಾಡುವ ಅಚ೯ಕರ ಕೈಗೆ ಅಂಟಿರುವ ಕುಂಕುಮದ ಕೆಂಪು ಬಣ್ಣ ಹೋಗುವುದೇ ಇಲ್ಲ ಆದರೂ ನಾವೆಲ್ಲ ಈ ಹಾನಿಕಾರಕ ರಾಸಾಯನಿಕ ಕುಂಕುಮಕ್ಕೆ ದಾಸರಾಗಿದ್ದೇವೆ.
ಶುದ್ದ ಕುಂಕುಮ ಆರಿಶಿಣದ ಪುಡಿ ಮತ್ತು ಸುಣ್ಣದ ಹದ ಮಿಶ್ರಣದಲ್ಲಿ ತಯಾರು ಮಾಡುತ್ತಾರೆ ಇದಕ್ಕೆ ಶುದ್ಧ ದೇಶಿ ಹಸುವಿನ ತುಪ್ಪದ ಮಿಶ್ರಣವೂ ಕೆಲವೆಡೆ ಇದೆ ಇದು ಪರಿಶುದ್ಧ ಕುಂಕುಮ ಇದು ದೇಹದ ಒಳಗೆ ಹೋದರೂ, ಕಣ್ಣಿಗೆ ಬಿದ್ದರೂ ಹಾನಿಕಾರ ಅಲ್ಲ ಮತ್ತು ತಂಪು ಆದರೆ ಇದಕ್ಕೆ ಬೆಲೆ ಹೆಚ್ಚು ಹಾಗಾಗಿ ಸಾವಯವ ಕುಂಕುಮದ ಜಾಗದಲ್ಲಿ ರಾಸಾಯನಿಕ ಕುಂಕುಮ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ ಅದೇ ರಾರಾಜಿಸುತ್ತಿದೆ.
ನಮ್ಮ ವರಸಿದ್ಧಿ ವಿನಾಯಕ ಸ್ವಾಮಿ ಜಾತ್ರೆಗೆ ಪ್ರತಿ ವಷ೯ ಉಡುಪಿ ಅಥವ ಕೊಲ್ಲೂರಿನಿಂದ ಶುದ್ಧ ಕುಂಕುಮ ಮತ್ತು ಭಸ್ಮ ತರುತ್ತೇನೆ.
ಕಳೆದ ತಿಂಗಳು ನಡೆದ ನನ್ನ ಮಗಳ ಮದುವೆಗಾಗಿ ದೂರದ ಈರೋಡಿನ ಶಿವ ದೇವಾಲಾಯದ ಪ್ರಧಾನ ಅಚ೯ಕರಾದ ಡಾII ಸೆಂದಿಲನಾಥನ್ ಶುದ್ಧವಾದ ಮದುರೈನ ಕುಂಕುಮ ಕಳಿಸಿದ್ದರು ಇಡೀ ವಿವಾಹಪೂವ೯, ವಿವಾಹ ಮತ್ತು ವಿವಾಹ ನಂತರದ ಪೂಜಾ ಕಾಯ೯ದಲ್ಲಿ ಇದೇ ಕುಂಕುಮ ಬಳಸಿದ್ದೆ.
ಈ ಕುಂಕುಮದ ವಿಶೇಷ ಇದನ್ನ ತಯಾರು ಮಾಡಿರುವುದು ಕೇದಿಗೆ ಹೂವಿನಿಂದ ! ಹಾಗಾಗಿ ಈ ಕುಂಕುಮ ಕೇದಿಗೆ ಸುವಾಸನೆಯಿ೦ದ ಕೂಡಿದೆ ಅನೇಕರು ಕೇಳಿದರು ಅವರಿಗೆಲ್ಲ ಕೊಟ್ಟು ಕಳಿಸಿದೆ.
ಕುಂಕುಮ ಪೂಜಾ ಮಂಗಳ ಕಾಯ೯ಕ್ಕೆ ಬೇಕೇ ಬೇಕು ಅದರಲ್ಲೂ ಇಷ್ಟೆಲ್ಲ ವೈವಿಧ್ಯತೆ ಪ್ರಾಚೀನ ಕಾಲದಿಂದಲೂ ಇದೆ ಅಂದರೆ ಎಷ್ಟು ಸೋಜಿಗವಲ್ಲವೆ?
ತಕ್ಷಣ ನಾವು, ಭಕ್ತರು, ಅಚ೯ಕರು ಮತ್ತು ದಾಮಿ೯ಕ ಕಾಯ೯ಕ್ರಮ ಆಯೋಜಕರು ಮತ್ತು ಮಹಿಳೆಯರು ಹಾನಿಕಾರಕ ಕೆಮಿಕಲ್ ಕುಂಕುಮ ಬಳಸದಂತೆ ಜನಜಾಗೃತಿ ಮಾಡಬೇಕು ಮತ್ತು ಪರಿಶುದ್ಧ ಕುಂಕುಮದ ಖರೀದಿ ಮತ್ತು ಬಳಕೆಗೆ ಪ್ರಾಶಸ್ತ್ಯ ನೀಡಬೇಕು.
Comments
Post a Comment