#ಹೊನ್ನಾವರದ ಬOದರಿನಲ್ಲಿ ನಾಗಪ್ಪ ಎಂಬ ಮೀನು ಕತ್ತರಿಸುವ ಸೂಪರ್ ಎಕ್ಸ್ಪಟ್೯#
ಹೊನ್ನಾವರದಲ್ಲಿ ಬ೦ದರಿನಲ್ಲಿ ಮೀನು ಖರೀದಿಸಿದವರು ಹುಡುಕುವುದು ಈ ನಾಗಪ್ಪನ್ನ, ಶರಾವತಿ ನದಿ ಅರಬ್ಬಿ ಸಮುದ್ರ ಸೇರುವ ಈ ಪ್ರದೇಶದಲ್ಲಿ ನಿತ್ಯ ಯಾಂತ್ರಿಕ ದೊಣಿ ಮತ್ತು ನಾಡ ದೊಣಿಗಳಲ್ಲಿ ಬರುವ ಮೀನು ಖರೀದಿಸಲು ಬೆಳಿಗಿನಿ೦ದ ರಾತ್ರಿ ತನಕ ಇಲ್ಲಿ ಜನ ಜಾತ್ರೆ 100 ರೂಪಾಯಿಗೆ ಒಂದು ಕೆಜಿ ಮೀನಿನಿಂದ 1000 ರೂಪಾಯಿಯ ದುಭಾರಿ ಮೀನು ಇಲ್ಲಿ ಲಭ್ಯ.
ಮೀನು ಖರೀದಿಸಿದವರ ಮೀನು ತುಂಡರಿಸಿ ಸ್ವಚ್ಚ ಮಾಡಿ ಕೊಡಲು ಅಲ್ಲಿ ಅನೇಕರು ಸ್ತ್ರಿ ಪುರುಷರಿರುತ್ತಾರೆ ಅದಕ್ಕೆ ಹಣ ನಿಗದಿ ಮಾಡಿ ಕೊಡಬೇಕು ಅವರು ಮನೆ ಒಡತಿ ಅಥವ ಮಾಲಿಕನ ಮಜಿ೯ಗೆ ತಕ್ಕ೦ತೆ (ಅವರಿಗೆ ಬೇಕಾದ ಗಾತ್ರ ಮತ್ತು ಆಕೃತಿಗೆ) ತುಂಡು ಮಾಡಿ ನೀಡುತ್ತಾರೆ.
ಒಂದೊ೦ದು ಮೀನಿಗೆ ಒಂದೊಂದು ಬಗೆಯಲ್ಲಿ ತಯಾರಿಸಿ ಕೊಡಬೇಕು, ಪಾ೦ಪ್ಲೆಟ್ ಮೀನು ಇಡಿಯಾಗಿರಬೇಕು ಅದರ ಬಾಲ ರೆಕ್ಕೆ ಕತ್ತರಿಸಿ ತೆಗೆದು ಅದರ ಹೊಟ್ಟೆ ಬಾಗ ಸ್ವಚ್ಚ ಮಾಡಿ ತೆಗೆಯಬೇಕು.
ಸೀಗಡಿಯ ಹೊರ ಕವಚ ತೆಗೆದು ಕೊಡಬೇಕು,ನಂಗು ಎನ್ನುವ ಮೀನಿನ ಮೈ ಚಮ೯ ಸುಲಿಯ ಬೇಕು ಹೀಗೆ ಮೀನಿನ ಲೋಕದ ಮೀನು ಪ್ರಿಯರ ಸಂಪ್ರದಾಯವಿದೆ.
ಅ೦ಜಲ್ ಮೀನು ಎಷ್ಟು ತೆಳ್ಳದಾಗಿ slice ಮಾಡುತ್ತೀರೋ ಅಷ್ಟು ರುಚಿ ಹಾಗಾಗಿ ಅದನ್ನ ಅತ್ಯಂತ ತೆಳುವಾಗಿ slice ಮಾಡುವ ಮತ್ತು ಕ್ಷಿಪ್ರವಾಗಿ ನಗು ನಗುತ್ತಾ ಮೀನು ಪ್ರಿಯರಿಗೆ ಖರೀದಿಸಿದ ಮೀನು ಸ್ವಚ್ಚಗೊಳಿಸಿ ತುಂಡರಿಸಿ ತಯಾರಿಸಿ ಕೊಡುವ ಈ ನಾಗಪ್ಪ ಹೊನ್ನಾವರದ ಸ್ಟಾರ್ ಪಿಶ್ ಕಟರ್ ಆಗಿದ್ದಾರೆ.
ದಿನಕ್ಕೆ 2 ರಿಂದ 3 ಸಾವಿರ ಕಮಾಯಿ ಇದೆ, ಈ ಉದ್ಯೋಗ ಕಳೆದ 25 ವಷ೯ದಿಂದ ನಡೆಸಿದ್ದಾರೆ, ಇಲ್ಲಿಗೆ ಬರುವವರಿಗೆಲ್ಲ ನಾಗಪ್ಪ ಚಿರಪರಿಚಿತ ಈತನ ಕೈಚಳಕ ನೋಡಲು ಪ್ರತಿನಿತ್ಯ ಅನೇಕರು ಅಲ್ಲಿ ಸೇರುತ್ತಾರೆ (ವೀಡಿಯೋ ನೋಡಿ)
ಇವತ್ತು ಹೊನ್ನಾವರಕ್ಕೆ ಹೋಗಿದ್ದೆ ನಮ್ಮ ಹೋಟೆಲ್ ಚಂಪಕಾ ಪ್ಯಾರಾಡೈಸ್ ಗೆ ಬೇಕಾದ ಅಂಜಲ್, ಪಾ೦ಪ್ಲೆಟ್ ಮತ್ತು ಸೀಗಡಿ ನಾಗಪ್ಪನ ಕೈಚಳಕದಲ್ಲಿ ತಯಾರು ಮಾಡಿಸಿ ಹೊನ್ನಾವರನ ಬಂದರ್ ನ ಗೆಳೆಯ ಸಂತೋಷ್ ಖಾವಿ೯ ಮಂಜುಗಡ್ಡೆಯೊ೦ದಿಗೆ ಪ್ಯಾಕ್ ಮಾಡಿ ಕೊಡುವ ಮೊದಲು ನಾಗಪ್ಪರ ಈ ಸಂದಶ೯ನ ನಿಮಗಾಗಿ.
Comments
Post a Comment