ಏನಿದು ಪ್ಲಾಸೆಬೋ?!........... ಏನಿದು ನೋಸೆಬೋ?!
____
ನಾನು ತಾಳಗುಪ್ಪದಲ್ಲಿ ಪಶುವೈದ್ಯನಾಗಿದ್ದಾಗ ಒಬ್ಬರ ಮನೆಯಲ್ಲಿದ್ದೆ. ಅವರ ಮನೆಯಲ್ಲಿ ಹಿರಿಯ ವಯೋವೃದ್ಧರಾದ ಅಜ್ಜಿ ಒಬ್ಬರಿದ್ದರು. ಅವರಿಗೆ ಆಗಾಗ ಕೆಮ್ಮು ಬರುತ್ತಿತ್ತು. ಆಗ ಸಾಗರದಲ್ಲಿ ಐತಾಳರೆಂಬ ವೈದ್ಯರೊಬ್ಬರಿದ್ದರು. ಅವರು ಚಿಕಿತ್ಸೆ ನೀಡಿದರೆ ಮಾತ್ರ ಅಜ್ಜಿಯ ಕೆಮ್ಮು ಗುಣವಾಗುತ್ತಿತ್ತು. ಅವರು ಒಂದು ಬಾಟಲಿಯ ಲೇಬಲ್ಲು ತೆಗೆದು ಅದಕ್ಕೆ ಜಿûಗ್ ಜಾಗ್ ತರಹದ ಸ್ಟಿಕರ್ ಅಂಟಿಸಿ ಅದರಲ್ಲಿ ಔಷಧ ತುಂಬಿಸಿ, ದಿನಕ್ಕೆ ಮೂರು ಅಥವಾ ನಾಲ್ಕು ಕಟ್ಟಿನ ಮಟ್ಟದ ಔಷಧ ಸೇವಿಸಲು ಹೇಳುತ್ತಿದ್ದರು. ಆ ಔಷಧಿ ಕುಡಿದರೆ ಮಾತ್ರ ಅಜ್ಜಿಯ ಕೆಮ್ಮು ಗುಣವಾಗುತ್ತಿತ್ತು. ಕೆಲವೊಮ್ಮೆ ಸಾಗರಕ್ಕೆ ಹೋದಾಗ ಅವರಿಗಾಗಿ ಕಾದು ಔಷಧಿ ತರುತ್ತಿದ್ದೆ. ಅವರ ಅಂಗಡಿಯಲ್ಲಿ ಬಹಳ ರಶ್ ಇರುವುದರಿಂದ ಬೇರೆ ಒಳ್ಳೆಯ ಔಷಧಿ ತಂದ್ರೂ ಅವರಿಗೆ ಕಡಿಮೆ ಆಗಲೇ ಇಲ್ಲ. ನಂತರ ಒಂದು ಬಾಟ್ಳಿ ಖಾಲಿ ಮಾಡಿ ಅದಕ್ಕೆ ಕೆಮ್ಮಿನ ಔಷಧಿ ತುಂಬಿಸಿ ಅದಕ್ಕೆ ಪಟ್ಟಿ ಪಟ್ಟಿ ಲೇಬಲ್ ಅಂಟಿಸಿ ಕೊಟ್ಟಾಗಲೇ ಅವರಿಗೆ ಕೆಮ್ಮು ಕಡಿಮೆ ಆಗಿದ್ದು !!.
ನನ್ನ ಸ್ನೆÃಹಿತನೊಬ್ಬ ಬಹಳ ದಿನಗಳ ನಂತರ ನಮ್ಮ ಮನೆಗೆ ಬಂದಿದ್ದ. ಅವನಿಗೆ ಬೆಂಗಳೂರಿನಿಂದ ಬಸ್ಸಿನಲ್ಲಿ ಬಂದಿದ್ದಕ್ಕೆ ಮೈ ಕೈ ನೋವು ಪ್ರಾರಂಭವಾಗಿತ್ತು. “ನೈಸ್” ಮಾತ್ರೆ ಇದ್ಯೆನೋ.. ಒಂದು ಕೊಡು ಅಂದ. ಇಲ್ಲಪ್ಪಾ. ಅದಕ್ಕಿಂತ ಜಾಸ್ತಿ ನೋವು ನಿವಾರಕವಾದ ಮತ್ತೊಂದು ಮಾತ್ರೆ ಕೊಟ್ಟೆ.. ಮಧ್ಯಾಹ್ನ “ಮೈಕೈ ನೋವು ತಲೆ ನೋವು ಕಡಿಮೆ ಆಗಿಲ್ಲ. ನಡಿ. ಔಷಧ ಅಂಂಗಡಿಗೆ.. ನೈಸ್ ತೆಗೆದು ಕೊಂಡು ಬರೋಣ.. ಅಂದ. ಭಾನುವಾರ ಶಿವಮೊಗ್ಗದಲ್ಲಿ ಬಹುತೇಕ ಔಷಧ ಅಂಗಡಿಗಳು ಕ್ಲೊÃಸ್. ಅಲ್ಲಲ್ಲೊÃ ಇರುವ ಮೆಡ್‌ಪ್ಲಸ್ಸಿಗೆ ಹೋಗಿ “ನೈಸ್” ಮಾತ್ರೆ ಖರೀದಿಸಿ ನುಂಗಿದ ಮೇಲೆಯೇ ಆತನಿಗೆ ಸಮಾಧಾನ.
ಅಮೇರಿಕದಲ್ಲಿ ನಡೆದ ಸಂಶೋಧನೆಯೊಂದರ ಪ್ರಕಾರ ಕಾಲುನೋವಿನ ಅಥವಾ ಬೆನ್ನುನೋವಿನ ಶಸ್ತçಚಿಕಿತ್ಸೆಯಲ್ಲಿಯೂ ಇದೇ ರೀತಿಯ ಮನಸ್ಸಿನ ಪರಿಣಾಮ ಇದೆಯಂತೆ!!. ನಡೆದಾಡಲೂ ಕಷ್ಟಪಡುವಂತ ಮಂಡಿಚಿಪ್ಪಿನ ನೋವಿನ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಮಂಡಿಚಿಪ್ಪಿನ ಮೇಲೆ ಶಸ್ತçಚಿಕಿತ್ಸೆ ಮಾಡಬೇಕಾದ ಗುಂಪೆÇಂದಕ್ಕೆ ಕೇವಲ ಅರಿವಳಿಕೆ ನೀಡಿ, ನಂತರ ಅಪರೇಷನ್ ಕೊಠಡಿಗೆ ಕರೆದೊಯ್ದು, ಮಂಡಿ ಚಿಪ್ಪಿನ ಮೇಲಿನ ಚರ್ಮ ಕುಯ್ದು ಹುಲಿಗೆ ಮತ್ತು ಬ್ಯಾಂಡೇಜ್ ಹಾಕಿದಾಗ ಶೇ 30 ರಷ್ಟು ರೋಗಿಗಳು ಕೂಡಲೇ ಗುಣಮುಖರಾಗಿ ನಡೆದಾಡಲು ಪ್ರಾರಂಭಿಸಿದರಂತೆ!! ಮಂಡಿನೋವಿನ ಶಸ್ತçಚಿಕಿತ್ಸೆಯನ್ನು ನಿಜವಾಗಿ ಮಾಡಿಸಿಕೊಂಡ ರೋಗಿಗಳಿಗಿಂತ ಇವರ ನೋವು ಮರುಕಳಿಸಿತು ಎಂಬುದು ಬೇರೆ ಮಾತು.
ಇವೆಲ್ಲಾ ನಾನು ಹೇಳಲು ಹೊರಟಿರುವ “ಪ್ಲಾಸೆಬೋ” ಅಥವಾ “ನೋಸೆಬೋ”ಪರಿಣಾಮಗಳು. ಅಂದರೆ ಔಷಧಿ ಇಲ್ಲದೆಯೂ ಸಹ ಗುಣಮುಖರಾಗುವುದು ಅಥವಾ ಇಲ್ಲದ ಅಡ್ಡಪರಿಣಾಮಗಳನ್ನು ಊಹಿಸಿಕೊಂಡು ಅದನ್ನು ಅನುಭವಿಸುವುದು. ಇಂತಹ ಸಾವಿರಾರು ಕಥೆಗಳು ನಮ್ಮ ಸುತ್ತ ದಿನನಿತ್ಯ ಲಭ್ಯವಿವೆ. ಇತ್ತಿÃಚಿನ ವೈಜ್ಞಾನಿಕ ಸಂಶೋಧನೆಯ ಪ್ರಕಾರ ಈ “ಪ್ಲಾಸೆಬೋ” ಅಥವಾ “ನೋಸೆಬೋ” ಪರಿಣಾಮ ಜಾಸ್ತಿಯಾಗುತ್ತಲೇ ಇದೆ. ಇದಕ್ಕೆ ಬಡವ ಶ್ರಿÃಮಂತರು, ವಿದ್ಯಾವಂತರು-ಅವಿದ್ಯಾವಂತರು ಎಂಬ ಬೇಧ ಭಾವಗಳಿಲ್ಲ.
“ಪ್ಲಾಸೆಬೋ” ಅಂದರೆ “ಹುಸಿ ಔಷದಿ” ಅಥವಾ “ಸುಳ್ಳೌಷಧಿ” ಅನ್ನಬಹುದು. ಹೊಸ ಔಷಧದ ಪರಿಣಾಮವನ್ನು ಮನುಷ್ಯರಿಗೆ ಪ್ರಯೋಗಿಸುವ ಹಂತದಲ್ಲಿ ಔಷಧಿಯೂ ಇಲ್ಲದೇ ಬರುವ “ಪ್ಲಾಸೆಬೋ” ಪರಿಣಾಮವನ್ನು ಗಮನಿಸಲು “ಹುಸಿ ಔಷಧಿ” ಯನ್ನು ಗುಳಿಗಳ ಒಳಗೆ ಹಾಕಿ ಅಥವಾ ಸಕ್ಕರೆ ಗುಳಿಗೆಗಳನ್ನೆÃ ವಿವಿಧ ಗುಂಪುಗಳಲ್ಲಿ ವಿಂಗಡಿಸಿದ ರೋಗಿಗಳ ಮೇಲೆ ಪ್ರಯೋಗಿಸಲಾಗುತ್ತದೆ. ವೈದ್ಯರು ಹೊಸ ಔಷಧಿಯ ಬಗ್ಗೆ ರೋಗಿಗೆ ವಿವರವಾಗಿ ಹೇಳಿಯೇ ಅವರಿಗೆ ಔಷಧಿ ನೀಡುತ್ತಾರೆ. ಆದರೆ ಅವರಿಗೆ ಅವರು ನೀಡುವ ಗುಳಿಗೆಯಲ್ಲಿ ಔಷಧಿ ಇದೆಯೇ ಅಥವಾ ಇಲ್ಲವೇ ಎಂದು ತಿಳಿದಿರುವುದಿಲ್ಲ. ಇದು ಕಂಪನಿಗೆ ಅಥವಾ ರೋಗಿಗೆ ಗೊತ್ತಿರಬಾರದು.
ಆಧುನಿಕ ಅಲೋಪತಿಯ ಹೊಸ ಔಷಧ ಪತ್ತೆಯ ಸಮಯದಲ್ಲಿ ಪ್ರಾಣಿಗಳಲ್ಲಿ ಅದರ ಪ್ರಯೋಗವಾದ ಮೇಲೆ ರೋಗ ಪೀಡಿತ ಮನುಷ್ಯರ ಮೇಲೆ ಅದರ ಪರಿಣಾಮ ಗಮನಿಸುವಾಗ ಈ “ಪ್ಲಾಸೆಬೋ” ಪರಿಣಾಮವನ್ನು ಗಮನಿಸಲಾಗುತ್ತದೆ.
ರೋಗ ಚಿಕಿತ್ಸೆಯಾಗಿ ನಂತರ ಪರಿಣಾಮವನ್ನು ನೋಡುವಾಗ ಇವೆಲ್ಲವುಗಳ ಡಿಕೋಡಿಂಗ್ ಮಾಡಲಾಗುವುದು. ಈ ಪ್ಲಾಸೆಬೋ ಚಿಕಿತ್ಸೆಯಿಂದ ಗುಣಮುಖಗೊಂಡ ರೋಗಿಗಳ ಸಂಖ್ಯೆ ಶೇ:10 ಕ್ಕಿಂತ ಜಾಸ್ತಿ ಇದ್ದಲ್ಲಿ ಔಷಧಿಯಿಂದ ಜಾಸ್ತಿ ಪರಿಣಾಮ ಆಗಲಿಕ್ಕಿಲ್ಲ ಎಂದು ಆ ಔಷಧವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದನ್ನು ಲೈಸೆನ್ಸ್ ನೀಡುವ ಪ್ರಾಧಿಕಾರವು ನಿಲ್ಲಿಸಬಹುದು ಅಥವಾ ಈ “ಪ್ಲಾಸೆಬೋ” ಪರಿಣಾಮ ಔಷಧಿಯ ನಿರೀಕ್ಷಿತ ಪರಿಣಾಮಕ್ಕಿಂತ ಜಾಸ್ತಿಯಾದರೆ ಔಷಧಿ ಮಾರುಕಟ್ಟೆಗೆ ಬರದು.
ಮನುಷ್ಯನಲ್ಲಿ ಶೇ: 65-70 ರೋಗಗಳು ಮನಸ್ಸಿನ ಮೇಲಿನ ಪರಿಣಾಮದಿಂದ ಉದ್ಭವವಾಗುವುದರಿಂದ ನಂಬಿಕೆ ಅಥವಾ ಭರವಸೆ ಅಥವಾ ಈ ವೈದ್ಯರು ನೀಡುವ ಔಷಧಿಯಿಂದ “ಗುಣವಾಗಿಯೇ ಆಗುತ್ತೆÃನೆ” ಎಂಬ ನಿರೀಕ್ಷೆಯಿಂದ ಹಲವಾರು ರೋಗಗಳು ಗುಣವಾಗುತ್ತವೆ.
ಅನೇಕ ಹಳ್ಳಿ ಔಷಧಿಗಳು, ನಂಬುಕೆಗಳು ಅಥವಾ ಆಚಾರಗಳಿಂದ ಕಾಯಿಲೆ ವಾಸಿಯಾದ ನಿದರ್ಶನಗಳಿವೆ. ಇದಕ್ಕೆ ಕೆಲವೊಮ್ಮೆ “ಪವಾಡ” ಎಂದು ಕರೆಯುತ್ತಾರೆ. ಆದರೆ ಇವೆಲ್ಲ ಪ್ಲಾಸೆಬೋ ಪರಿಣಾಮದಿಂದ ಎಂಬುದನ್ನು ಮರೆಯಬಾರದು.
ಒಂದು ಔಷಧಿ ಅಥವಾ ಪದ್ಧತಿ ಅಥವಾ ಭರವಸೆಯಿಂದ ಶೇ: 65-70 ರಷ್ಟು ಕಾಯಿಲೆಗಳು ಔಷಧವಿಲ್ಲದೇ ವಾಸಿಯಾಗುತ್ತವೆ ಎಂದರೆ ಈ “ಪ್ಲಾಸೆಬೋ” ದ ಅಗಾಧ ಪರಿಣಾಮವನ್ನು ಗಮನಿಸಬಹುದು. ಈಗ ಈ ಪ್ಲಾಸೆಬೋ ಪರಿಣಾಮವನ್ನೆÃ ಬಳಸಿ ಕಾಯಿಲೆಗಳನ್ನು ಔಷಧಿ ರಹಿತವಾಗಿ ಯಾಕೆ ವಾಸಿ ಮಾಡಬಾರದು? ಎಂಬ ಚಿಂತನೆಗಳು ಮತ್ತು ಸಂಶೋಧನೆಗಳು ನಡೆಯುತ್ತಿವೆ. ಅಲ್ಲದೇ ಪ್ಲಾಸೆಬೋದಿಂದಲೇ ಗುಣವಾಗುವ ಕಾಯಿಲೆ ಇದ್ದರೆ ಅವುಗಳಿಗೆ ಬೇರೆ ಔಷಧಿ ನೀಡಬಾರದು ಅನ್ನುತ್ತದೆ ವಿಜ್ಞಾನ.
ಈ ಪ್ಲಾಸೆಬೋ ಮತ್ತು ನೋಸೆಬೋ ಪರಿಣಾಮಗಳಿಗೆ ಮೆದುಳಿನಲ್ಲಿರುವ ಡೋಪಮಿನ್, ಎಂಡೋರ್ಫ್ಹಿನ್ ಮತ್ತು ಎನ್ಕೆಫಾಲಿನ್ ಎಂಬ ವಸ್ತುಗಳು ಮತ್ತು ಇನ್ನೂ ಅನೇಕ ಹಾರ್ಮೋನುಗಳು ಕಾರಣ ಎಂದು ವಿಜ್ಞಾನ ಖಚಿತವಾಗಿ ಹೇಳುತ್ತಿದೆ.
ಈ ಪ್ಲಾಸೆಬೋ ಪರಿಣಾಮಕ್ಕೆ ತದ್ವಿರುದ್ಧವಾಗಿರುವುದೇ ಈ “ನೋಸೇಬೋ” ಪರಿಣಾಮ. ಇದು ಪ್ಲಾಸೆಬೋ ಪರಿಣಾಮಕ್ಕಿಂತ ಅಪಾಯಕಾರಿ.
ಬಹುತೇಕ ವಿದ್ಯಾವಂತ ಅಥವಾ ಅತಿ ಬುದ್ಧಿವಂತ ಜನ ಗೂಗಲ್ಲಿನಲ್ಲಿಯೋ ಅಥವಾ ಔಷಧಿಯ ಜೊತೆ ಇರುವ ಚೀಟಿಯನ್ನು ಓದಿಯೋ, ಅಥವಾ ಇಂತಹ ಔಷಧಿಗೆ ಅಡ್ಡಪರಿಣಾಮ ಇದ್ದೆÃ ಇದೆ ಎಂಬ ಮನಸ್ಸಿನ ದೃಢ ಗ್ರಹಿಕೆಯಿಂದ ಅಥವಾ ಎಲ್ಲಾ ವೈಜ್ಞಾನಿಕ ವೈದ್ಯ ಪದ್ದತಿಯ ಔಷಧಿಗಳಿಗೆ “ಸೈಡ್ ಇಫೆಕ್ಟ್” ಮಾತ್ರ ಇದೆ ಎಂದು ಭಾವಿಸುತ್ತಾರೆ ಮತ್ತು ಅದನ್ನು ಅನುಭವಿಸುತ್ತಾರೆ ಕೂಡಾ. ಇಲ್ಲದ ಅಡ್ಡ ಪರಿಣಾಮ ಅನುಭವಿಸುವುದನ್ನು ಅಥವಾ ಋಣಾತ್ಮಕ ಅನುಭವವನ್ನು “ನೋಸೆಬೋ” ಪರಿಣಾಮ ಅನ್ನುತ್ತಾರೆ. ಈ ಪರಿಣಾಮವನ್ನು ಅನುಭವಿಸುವವರ ಬಹು ದೊಡ್ಡ ಗುಂಪೇ ಇದೆ. ಯಾವಾಗಲೂ ಋಣಾತ್ಮಕ ವಿಚಾರ ಮಾಡುವವರಿಗೆ ಅದೇ ರೀತಿಯ ಪರಿಣಾಮಗಳೇ ಆಗುತ್ತವೆ. ಇದೂ ಸಹ ಒಂದು ರೀತಿ ನೋಸೆಬೋ ಪರಿಣಾಮ.
ಯಾವ ಔಷಧಿಗೆ ಪರಿಣಾಮ ಇದೆಯೋ ಅದಕ್ಕೆ ಅಡ್ಡ ಪರಿಣಾಮ ಇದ್ದೇ ಇದೆ. ಅಡ್ಡ ಪರಿಣಾಮ ಇರದಿದ್ದರೆ ಅದಕ್ಕೆ ಪರಿಣಾಮವು ಇರುವುದಿಲ್ಲ.. ಇದು ನೆನಪಿರಲಿ. ಇಲ್ಲದಿದ್ದರೆ ಅದು ಔಷಧಿ ಎನಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಅಡ್ಡ ಪರಿಣಾಮಗಳು ಜಾಸ್ತಿ ಇದ್ದರೂ ಸಹ ಕ್ಯಾನ್ಸರಿನಂತಹ ಕಾಯಿಲೆ ಗುಣ ಪಡಿಸಲು ಅದರ ಅಪಾಯ ಮತ್ತು ಲಾಭ ಎರಡನ್ನು ತೂಗಿ ನೋಡಿ ಲಾಭ ಜಾಸ್ತಿ ಇದ್ದಲ್ಲಿ ಉಪಯೋಗಿಸಲೇಬೇಕಾಗುತ್ತದೆ.
ಒಂದರ್ಥದಲ್ಲಿ ಹೇಳಬೇಕೆಂದರೆ ಆಂಗ್ಲ ಅಥವಾ ಪಾಶ್ಚಾತ್ಯ ಅಥವಾ ಆಧುನಿಕ ವೈಜ್ಞಾನಿಕ ವೈದ್ಯ ಪದ್ದತಿ ಔಷಧಿಗಳ ಬಗ್ಗೆ ಜನರಿಗೆ ಅಸಹನೆ ಬೆಳೆಯುತ್ತಲೇ ಇದೆ. ಇದರಿಂದ ಅನೇಕ ಅನಾವಶ್ಯವಾದ “ನೋಸೆಬೋ” ಪರಿಣಾಮಗಳು ಕಾಣಿಸಿಕೊಳ್ಳುತ್ತಲೇ ಇವೆ.
ಪಶುವೈದ್ಯಕೀಯ ಕ್ಷೆÃತ್ರದಲ್ಲೂ ಹೊಸ ಔಷಧ ಪತ್ತೆ ಮತ್ತು ಸಂಶೋಧನೆ ಬಹುತೇಕ ಇದೇ ರೀತಿ ನಡೆಯುತ್ತದೆ. ಆದರೆ ಅವುಗಳಲ್ಲಿ “ಪ್ಲಾಸೆಬೋ” ಮತ್ತು “ನೋಸೆಬೋ” ಪರಿಣಾಮಗಳು ಇರದಿದ್ದರೂ ಅವುಗಳ ಮಾಲಕರಲ್ಲಿ ಇವೆಯಲ್ಲ?!!! ಈ ಪ್ಲಾಸೆಬೋ ಪರಿಣಾಮ ಪ್ರಾಣಿಗಳಲ್ಲೂ ಇದ್ದರೆ ಖರ್ಚು ಇಲ್ಲದೇ ಗುಣ ಮಾಡಬಹುದಿತ್ತಲ್ಲ ಎಂದು ಕೆಲವೊಮ್ಮೆ ಅನಿಸುವುದಿದೆ.
“ಎಲ್ಲಾ ಡಾಕ್ಟರುಗಳು ನೋಡಿ ಬಿಟ್ಟ ಕೇಸು ಕಣ್ರಿÃ ಇದು !!. ನೋಡಿ.. ಎಲ್ಲೊ... ಇವರು ನೀಡಿದ ಭಸ್ಮದಿಂದಲೋ ಅಥವಾ ದಾರ ಕಟ್ಟುವುದರಿಂದಲೇ ಕಾಯಿಲೆ ಕಡಿಮೆಯಾಯ್ತು” ಎನ್ನುವವರು ಸ್ವಲ್ಪ ಈ ಪ್ಲಾಸೆಬೋ ಎಂಬ ಶಬ್ಧದ ಕಡೆ ಗಮನವಹಿಸಿಕೊಳ್ಳುವುದು ಒಳ್ಳೆಯದು. ಹಾಗೇಯೇ ಈ ಔಷಧಿ ಕೆಲಸ ಮಾಡಲ್ಲ ಅಥವಾ ಇದಕ್ಕೆ ಬರೀ ಸೈಡ್ ಇಫೆಕ್ಟೇ ಜಾಸ್ತಿ ಎನ್ನುವವರು “ ನೋಸೆಬೋ” ಪರಿಣಾಮದ ಕಡೆಗೆ ಗಮನ ಹರಿಸುವುದು ಒಳ್ಳೆಯದು !!.
ಈ ಕುರಿತು “ಪ್ಲಾಸೆಬೋ” ಮತ್ತು “ನೋಸೆಬೋ” ಅಥವಾ “ಅಡ್ಡಪರಿಣಾಮ” ಗಳಿಲ್ಲದ ಆರೋಗ್ಯಕರ ಮುಕ್ತಮನಸ್ಸಿನ ಚರ್ಚೆಯಾಗಲಿ.
ಡಾ: ಎನ್.ಬಿ.ಶ್ರೀಧರ
Comments
Post a Comment