#ಬೆಂಗಳೂರುಪ್ರೆಸ್ ಕ್ಯಾಲೆ೦ಡರ್ ಗೆ ಶತಮಾನೋತ್ಸವ#
ಮೊನ್ನೆ ಬೆಂಗಳೂರಿನ ಅವೆನ್ಯೂ ರೋಡಿಗೆ 2020ರ ಬೆಂಗಳೂರು ಪ್ರೆಸ್ ಕ್ಯಾಲೆಂಡರ್ ಮತ್ತು ಒ೦ಟಿಕೊಪ್ಪಲು ಕ್ಯಾಲೆ೦ಡರ್, ಪಂಚಾಂಗ ತರಲು ಹೋಗಿದ್ದೆ.
35 ರೂಪಾಯಿಯ ಬೆಂಗಳೂರು ಪ್ರೆಸ್ ಕ್ಯಾಲೆಂಡರ್ ತುಂಬಾ ಉಪಯುಕ್ತ ದಿನಚರಿ ಇರುವಂತಾದ್ದು ಅದರಲ್ಲಿ ಸಕಾ೯ರಿ ರಜಾ, ದಾಮಿ೯ಕ ಹಬ್ಬ ಹರಿದಿನಗಳ ಮಾಹಿತಿ ಇರುತ್ತದೆ ಅಷ್ಟೆ ಅಲ್ಲ ಅದರ ಸುಂದರ ಮುದ್ರಣ ಗೋಡೆಗೆ ಒಂದು ಶೋಬೆ ಆದರೆ ಕಣ್ಣ ದೃಷ್ಟಿಗೂ ಸ್ಪಷ್ಟ ಹಾಗಾಗಿ ಹೆಚ್ಚಿನ ಜನ ಬೆಂಗಳೂರು ಪ್ರೆಸ್ ಕ್ಯಾಲೆಂಡರ್ ಗೆ ಮೊದಲ ಆದ್ಯತೆ ನೀಡುತ್ತಾರೆ.
ಈ ವಷ೯ದ ಕ್ಯಾಲೆಂಡರ್ ಈ ಸಂಸ್ಥೆಯ 100ನೇ ಕ್ಯಾಲೆಂಡರ್ ! 1921ರಲ್ಲಿ ಮೊದಲ ಇಂಗ್ಲೀಷ್ ಕ್ಯಾಲೆಂಡರ್ ಹೊರತಂದಿದ್ದು ಮೈಸೂರು ಸಂಸ್ಥಾನ, 1916 ಆಗಸ್ಟ 5ಕ್ಕೆ ಬೆಂಗಳೂರು ಪ್ರೆಸ್ ಕಾಯಾ೯ರಂಭ ಮಾಡಿದ್ದು, 1936ರಿಂದ ಕನ್ನಡ ಕ್ಯಾಲೆಂಡರ್ ಮುದ್ರಿಸುತ್ತಿದೆ, 1988 ರಿಂದ ಟೇಬಲ್ ಕ್ಯಾಲೆಂಡರ್ ಮುದ್ರಿಸುತ್ತಿದೆ.
ನಮ್ಮ ಹೆಮ್ಮೆಯ ಬೆಂಗಳೂರು ಪ್ರೆಸ್ ನ ಶತಮಾನೋತ್ಸವದ 2020ರ ಕ್ಯಾಲೆಂಡರ್ ಗೆ ಅಭಿನಂದನೆ ಸ್ವಾಗತ ಕೋರುತ್ತ 2019ರ ಕ್ಯಾಲೆಂಡರ್ ಹಿಂಬಾಗ ಅಳವಡಿಸಿದ್ದೇನೆ.
Comments
Post a Comment