#ಅಭಿಶೇಕ್ ಸ್ವೀಟ್ ಹೌಸ್ ಶಿವಮೊಗ್ಗ ಕೇಂದ್ರದ ಟಾಪ್ ಸ್ವೀಟ್ ಹೌಸ್#
ಇವತ್ತಿಗೂ ಶಿವಮೊಗ್ಗಕ್ಕೆ ಹೋದರೆ ವೆಂಕಟೇಶ್ವರ ಸ್ವೀಟ್ ಸ್ಟಾಲ್ ನಿಂದ ಸ್ಪೇಷಲ್ ಮೈಸೂರು ಪಾಕ್ ಮತ್ತು ಅಭಿಶೇಕ್ ಸ್ವೀಟ್ ಹೌಸ್ ನಿಂದ ಚ೦ಪಾಕಲಿ ತರಲೇಬೇಕು.
1980ರ ದಶಕದಲ್ಲಿ ಸಾಗರದ ಮಾರಿಕಾಂಬಾ ದೇವಾಲಯದ ಎದರು ಕಾಮತ್ ಸ್ವೀಟ್ & ಕಾಂಡಿಮೆಂಟ್ಸ್ ವಿದ್ಯಾಥಿ೯ ವಲಯದಲ್ಲಿ ಪ್ರಖ್ಯಾತ ಮೀಟಿಂಗ್ ಜಾಯಿOಟ್ ಆಗಿತ್ತು ಅಲ್ಲಿ ಬ್ರೆಡ್ ಸ್ಯಾ೦ಡ್ ವಿಚ್ ಮತ್ತು ಚಂಪಾಕಲಿ ಹೆಚ್ಚು ಖಚಾ೯ಗುತ್ತಿತ್ತು, ಬೆಳಿಗ್ಗೆ ಮತ್ತು ಸಂಜೆ 2 ಸಾರಿ ಪ್ರೆಷ್ ಚಂಪಾಕಲಿ ಶಿವಮೊಗ್ಗದಿಂದ ಬಸ್ ಲ್ಲಿ ಬರುತ್ತಿತ್ತು ಅದನ್ನ ಶಿವಮೊಗ್ಗದಲ್ಲಿ ತಯಾರಿಸಿ ಕಳಿಸುತ್ತಿದ್ದವರು - ಶಿವಮೊಗ್ಗದ ಅಭಿಷೇಕ್ ಸ್ವೀಟ್ ಹೌಸ್ ನ ಮಾಲಿಕರಾದ ಗಣೇಶ್ ಕೊಟ್ಯಾನ್!
ಇವತ್ತಿಗೂ ಶುಚಿ-ರುಚಿಗೆ ಹೆಸರು ಮಾಡಿರುವ ಈ ಸಂಸ್ಥೆ ಕೆಲವು ದಶಕಗಳಿಂದ ಶಿವಮೊಗ್ಗ ಬಸ್ ನಿಲ್ದಾಣದ ಸಮೀಪದಲ್ಲಿ ತನ್ನ ಗುಣಮಟ್ಟ ಕಾಪಾಡಿಕೊಂಡು ಬಂದಿದೆ.
ಇದರ ಮಾಲಿಕರಾದ ಕೊಟ್ಯಾನ್ ಸಹೋದರರ ಶಿಸ್ತು, ಸಂಯಮ ಮತ್ತು ಪರಿಶ್ರಮ ಈ ಬ್ರಾಂಡ್ ಮನೆಮಾತಾಗಲು ಕಾರಣವಾಗಿದೆ, ಸದಾ ಹಸನ್ಮುಖರಾಗಿ ಖರೀದಿಸಲು ಬಂದವರಿಗೆ ವಿವಿದ ಸಿಹಿ ತಿಂಡಿಯ ಪರಿಚಯಿಸುವ ಗಣೇಶ್ ಕೊಟ್ಯಾನ್ ಇವತ್ತಿಗೂ ಶಿವಮೊಗ್ಗಕ್ಕೆ ಹೊಸ ಸಿಹಿ ತಿಂಡಿಗಳನ್ನ ಅದರಲ್ಲೂ ಬೆಂಗಾಲಿ ಸಿಹಿ ತಿನಿಸು ತಂದ ಪ್ರಖ್ಯಾತರು.
Comments
Post a Comment