#ಪಶ್ಚಿಮ ಘಟ್ಟದ ಬಗ್ಗೆ ಮತ್ತು ಜೋಗ ಜಲಪಾತದ ಬಗ್ಗೆ ಹೆಚ್ಚು ಅದಿಕೃತವಾಗಿ ಮಾತಾಡುವ ಜಲಪಾತದ ಬಗಲಿನಲ್ಲಿನ ಮಾವಿನ ಗುಂಡಿಯಲ್ಲಿರುವ ಅಶೋಕ್ ಮಾವಿನ ಗುಂಡಿ ಇವತ್ತು ಸಂಜೆ ಬಂದಿದ್ದರು.#
ಇವರು ಸ್ಥಳಿಯವಾಗಿ ಬೆಳೆಯುವ ಅನಾನಸ್ ನಿಂದ ಐನಕೈ ಎಂಬ ಸಂಸ್ಥೆಯ ಮೂಲಕ ಅನಾನಸ್ ಜ್ಯೂಸ್, ಜಾ೦ ತಯಾರಿಸಿ ಮಾವಿನಗುಂಡಿ ವೃತ್ತದಲ್ಲಿ ಸುಮಾರು 35 ವಷ೯ ಮಾರಾಟ ಮಾಡಿ ಈಗ ನಿವೃತ್ತರಾಗಿದ್ದಾರೆ.
ಇವರು ಪೇಸ್ ಬುಕ್ ನಲ್ಲಿ ಬರೆಯುವ ಅದ್ಬುತ ಲೇಖನಗಳಿ೦ದ ನಾನು ಇವರ ಅಭಿಮಾನಿ, ಇವತ್ತು ಉಡುಪಿಯ ಲಾಡ್ಜ್ ಮಾಲಿಕರಾದ ಮತ್ತು ಮಣಿಪಾಲ್ ನ HP ಗ್ಯಾಸ್ (ಸುದೀ೦ದ್ರ ಏಜೆನ್ಸಿ) ಮಾಲಿಕರಾದ ಕೆ.ಬಾಲಕೃಷ್ಣ ಶೆನಯ್ ಜೊತೆ ಬಂದಿದ್ದರು.
ಅವರು ಈ ಹಿಂದೆ FBಯಲ್ಲಿ ಬರೆದು ಪಶ್ಚಿಮ ಘಟ್ಟದ ಬಗ್ಗೆ ಕಸ್ತೂರಿ ರಂಗನ್ ವರದಿ ಬಗ್ಗೆ ಬರೆದ ಲೇಖನ ಒಂದನ್ನು ಇಲ್ಲಿ ರೀ ಪೋಸ್ಟ್ ಮಾಡಿದ್ದೇನೆ.
ಒಂದು Observation cum ಅಭಿಪ್ರಾಯ ಮಾತ್ರ.
ಸದುದ್ದೇಶದ ಈ ಕಾನೂನು ಬರುವ ಪೂರ್ವ ದಲ್ಲಿ ಪಶ್ಚಿಮ ಘಟ್ಟದಲ್ಲಿ ಶರಾವತಿ, ಕಾಳಿ ನದಿಗಳಿಗೆ ದೊಡ್ಡ ದೊಡ್ಡ ಆಣೆಕಟ್ಟುಗಳು, ಕೊಳ್ಳದಲ್ಲೆಲ್ಲ ದೊಡ್ಡ ದೊಡ್ಡ ವಿದ್ಯುದಾಗಾರಗಳನ್ನು ನಿರ್ಮಿಸಲಾಯಿತು. ಅವುಗಳೆಲ್ಲ ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲ್ಪಡಬಹುದಾದ ಪ್ರದೇಶಗಳೇ.
ಈಗಿನಂತೆ ಮನುಕುಲ, ಭೂಮಂಡಲ ರಕ್ಷಕ ಪರಿಸರ ಪ್ರೇಮಿಗಳ ಒತ್ತಡ, ಪ್ರಭಾವ ಆಗ ಇಲ್ಲದಿದ್ದರೂ ಅಂದಿನ ಯೋಜಕರು, ತಂತ್ರಜ್ಞರು ನಿರ್ಮಿಸಿದ ಈ ಸ್ಥಾವರಗಳು, ಅದರ ಸುತ್ತ ಮುತ್ತಲಿನ ಭಾಗಗಳು ಈಬಾರಿಯ ಮಳೆ ಪ್ರಕೋಪದಲ್ಲಿ ಭದ್ರವಾಗಿಯೇ ಉಳಿದಿವೆ.
1980 ರ ನಂತರದ ಬಿಗಿ ಕಾನೂನು ಬಂದ ನಂತರ ಪರಿಸರ ವಾದದ ಅಬ್ಬರದ ಮಧ್ಯೆ ನಿರ್ಮಾಣವಾದ ರಸ್ತೆ, ಕಟ್ಟಡಗಳೇ ಬಹುತೇಕ ಮಳೆಪ್ರಕೋಪಕ್ಕೆ ಬಲಿಯಾದವು. ವಿಪರ್ಯಾಸ.
ಅಶೋಕ್ ಮಾವಿನಗುಂಡಿ.
Comments
Post a Comment