#100% ಸಾವಯವ ಮಣ್ಣಿನ ಸೋಪು,197Oರ ನಂತರ ಹುಟ್ಟಿದವರಿಗೆ ಗೊತ್ತೇ ಇಲ್ಲದ ಸೋಪಿನ ಪ್ರಪಂಚ#
ಆಗೆಲ್ಲ ಹತ್ತಾರು ಕತ್ತೆ ಮೇಲೆ ಮೂಟೆಗಳನ್ನ ತುಂಬಿಕೊಂಡು "ಸವಳು ಬೇಕಾ ಸವಳು" ಅಂತ ಸೋಪಿನ ಮಣ್ಣು ಮಾರಾಟಕ್ಕೆ ಬರುತ್ತಿದ್ದರೆಂದರೆ 50 ವಷ೯ದಲ್ಲಿ ಎಂತಹ ಬದಲಾವಣೆ ನೋಡಿ ಈಗ ಸೋಪು ಶಾಂಪುವಿನ ಕಾಲ.
ಒಂದು ಸೇರು ಭತ್ತ ಅಥವ ರಾಗಿಗೆ 3 ಸೇರು ಸವಳು ನೀಡುತ್ತಿದ್ದರಂತೆ ಅದನ್ನ ಸೋರುವ ಮಣ್ಣಿನ ಮಡಕೆಗಳಲ್ಲಿ (ಉಪಯೋಗಕ್ಕೆ ಬರದ ಮಡಕೆ) ಶೇಖರಿಸಿ ಇಡುತ್ತಿದ್ದರು, ಇದನ್ನ ಸ್ನಾನಕ್ಕೆ ಬಟ್ಟೆ ತೊಳೆಯಲು ಉಪಯೋಗಿಸುತ್ತಿದ್ದರು ಇದರಲ್ಲಿ ನೊರೆ ಬರುತ್ತಿತ್ತು ಮತ್ತು ಮಣ್ಣಿನಲ್ಲಿನ ಸೂಕ್ಷ್ಮ ಮರಳು ಮನುಷ್ಯನ ಚಮ೯ದ ಮೇಲ್ಪದರದ ಕೊಳೆ ಬ್ರಷ್ನಂತೆ ತೆಗೆಯುತ್ತಿತ್ತು.
ಹೊನ್ನಾಳಿ ನ್ಯಾಮತಿ ಮದ್ಯದ ಬೆಳಗುತ್ತಿಯ ತೀಥ೯ರಾಮೇಶ್ವರ ದೇವರ ಗುಡ್ಡ ಈ ಸವಳು (ಸೋಪಿನ ಮಣ್ಣಿನ) ಗಣಿ ಆಗಿತ್ತು.
ನಂತರ ಕಸ್ತೂರಿ, 50I ಬಾರ್ ಸೋಪು, ನಂದಿ, ವಿನಾಯಕ ಹೀಗೆ ಮುಂದುವರಿದು ವಾಷಿOಗ್ ಮೆಷಿನ್ ಜಗತ್ತು ಸೇರಿ ಸಪ್೯ ಅಕ್ಸೆಲ್ ವಾಷಿ೦ಗ್ ಪೌಡರ್ ವರೆಗೆ ಬಂದಿದ್ದೇವೆ, ವಾಷಿಂಗ್ ಪೌಡರ್ ನಿಮಾ೯ ಸೇರಿ.
ಅದೇ ರೀತಿ ಸ್ನಾನದ ಸೋಪುಗಳು ಲೈಪ್ ಬಾಯ್ ನಿಂದ ಮೈಸೂರು ಸ್ಯಾ೦ಡೆಲ್ ವರೆಗೆ ಬದಲಾಗಿದ್ದೇವೆ, ಹಮಾಮ್, ಲಕ್ಸ್ ಇವೆಲ್ಲವೂ ಇದೆ.
ಈಗ 100% ಸಾವಯವ ಸೋಪು ಅಂತ ಜ್ವಾಲಮುಖಿ ಮಣ್ಣಿನ ಸೋಪು, ಡೆಡ್ ಸೀ ಮಡ್ ಸೋಪು ಅ೦ತೆಲ್ಲ ಶ್ರೀಮಂತ ವಗ೯ದಲ್ಲಿ ಪ್ರಚಲಿತವಾಗಿದೆ.
ಕೇವಲ 50 ವಷ೯ದ ಹಿಂದೆ ಬಳಕೆಯಲ್ಲಿದ್ದ ನಮ್ಮ ಜಿಲ್ಲೆಯ ಸವಳು ಸೋಪಿನ ಮಣ್ಣು ಆದುನೀಕರಣದಲ್ಲಿ ಕಳೆದು ಹೋದರು ಈಗ ಅದು ದೂರದ ಜ್ವಾಲಾಮುಖಿ ಮಣ್ಣಿನ ಅಥವ ಡೆಡ್ ಸೀ ಮಣ್ಣಿನ ಸೋಪಿನ ರೂಪದಲ್ಲಿ ದುಬಾರಿ ಬೆಲೆಯಲ್ಲಿ ಪ್ರತ್ಯಕ್ಷ ಆಗಿದೆ.
ಕಾಲ ಚಕ್ರ ಸದಾ ತಿರುಗುತ್ತಿದೆ ನೋಡಿ.
Comments
Post a Comment