#ರಾಜ್ಯ_ಮಟ್ಟದ_ನಾಯಕತ್ವ_ಹೊಂದಬಹುದಾಗಿದ್ದ_ಕಾಗ೯ಲ್_ಅಜಿತ್_ಪಾಲ್. #ಆ_ದಿನಗಳ_ಹೀರೋ #ಜೋಗ್_ಕಾರ್ಗಲ್_ಪಟ್ಟಣ_ಪಂಚಾಯತ್_ಮೊದಲ_ಚುನಾವಣೆಯಲ್ಲಿ_ಜಯಬೇರಿಗೆ_ಕಾರಣಕರ್ತರು. #ಶ್ರೀಮಂತ_ಜೈನ_ಕುಟುಂಬದ_ಕುಡಿ. #ಲಿಂಗನಮಕ್ಕಿ_ಆಣೆಕಟ್ಟಿನಿಂದ_ಮುಪ್ಪಾನೆಯಲ್ಲಿ_ಮುಳುಗಡೆ_ಹೊಂದಿದ_ಕುಟುಂಬ #ಕಾಗ೯ಲ್_ಸುಭಾಷ್_ಮಹಾಲೆ_ರೈಸ್_ಮಿಲ್ಲಿಗೆ_ಜಾಗ_ನೀಡಿದ_ಕುಟುಂಬ #ಮುಪ್ಪಾನೆ_ಧನಪಾಲ್_ಗೌಡರು_ಕಾರ್ಗಲ್_ಧನಪಾಲಗೌಡರಾದರು. 1985 ರಲ್ಲಿ ಕಾರ್ಗಲ್ ಧನಪಾಲ ಗೌಡರ ತಂಗಿ ಮಗ ಶ್ರೀಕಾಂತ್ ಮತ್ತು ಲೋಕರಾಜ ಜೈನ್ ಸಾಗರ ಪೇಟೆಯ ಕನ್ನಡ ಪ್ರಭ ಪತ್ರಿಕೆಯ ಏಜೆನ್ಸಿ ನಡೆಸುತ್ತಿದ್ದರು ಆಗ ಸಾಗರ ಟ್ಯಾಕ್ಸಿ ಸ್ಟ್ಯಾಂಡ್ ನಲ್ಲಿ ಮಾರ್ಕ್ 4 ಡಿಸೇಲ್ ಪ್ಲೋರ್ ಗೇರಿನ ನನ್ನ ಅಂಬಾಸಡರ್ ಕಾರ್ ಇತ್ತು ನನಗಿಂತ ಮೊದಲು ಈ ಕಾರ್ ತಂದವರು ಕುಂಠೆ ಬ್ರದರ್ಸ್ ನವರು. ಬೆಂಗಳೂರಿನ ಸೆಂಟ್ ಮಾರ್ಕ್ಸ್ ರೋಡಿನ ಹಿಂದೂಸ್ಥಾನ್ ಕಾರ್ ಸಂಸ್ಥೆಗೆ ಡಿಡಿ ಕೊಟ್ಟು 10 ತಿಂಗಳ ನಂತರ ಕಲ್ಕತ್ತಾದಿಂದ ರಸ್ತೆ ಮೂಲಕ ಬೆಂಗಳೂರಿಗೆ ತಲುಪಿ ಡಿಲವರಿ ಪಡೆದ ಅಂಬಾಸಡರ್ ಕಾರ್ ಇದು. ಇದನ್ನು ಪ್ರತಿ ನಿತ್ಯ ಬೆಳಿಗ್ಗೆ ಶಿವಮೊಗ್ಗದಿಂದ ರಿಪ್ಪನ್ ಪೇಟೆ ಮಾರ್ಗವಾಗಿ ಸಾಗರಕ್ಕೆ ಕನ್ನಡ ಪ್ರಭ ಪತ್ರಿಕೆಯ ತಲುಪಿಸುವ ಬಾಡಿಗೆಗೆ ಬಿಟ್ಟಿದ್ದೆ ನನ್ನ ನೆನಪಿನ ಪ್ರಕಾರ ನಿತ್ಯ 125 ರೂಪಾಯಿ ಬಾಡಿಗೆಗೆ ನಂತರ ಲೋಕಲ್ ಬಾಡಿಗೆಗೆ ನನ್ನ ಕಾರು ಸಾಗರ ಸರಕಾರಿ ಆ...