#ಇವತ್ತಿನ_ನನ್ನ_ವಿಶೇಷ_ಅತಿಥಿಗಳು. https://youtu.be/DvNru8UzWqE?si=ZcVsNXu_0zUHBciF ಅಡಿಕೆ ಸಿಪ್ಪೆ ಸುಲಿಯುವ ಯಂತ್ರದ ಪಿತಾಮಹಾ ಮುಂಡಿಗೆಸರ ಮಂಜಪ್ಪರ ಪುತ್ರ ರಾಮಮೂರ್ತಿ. ಇವರು ಸಂಶೋಧಿಸಿದ ಮಾದರಿಯಲ್ಲಿ ಈಗಾಗಲೇ 15 ಸಾವಿರಕ್ಕೂ ಹೆಚ್ಚು ಯಂತ್ರ ತಯಾರಿಸಿ ಮಾರಾಟ ಮಾಡಿದ ಕಾರ್ಪೋರೇಷನ್ ಬ್ಯಾಂಕ್ ಸ್ಥಾಪಕ ಹಾಜಿ ಬುಡನ್ ಅಬ್ಬಲ್ಲಾ ಸಾಹೇಬರ ಮರಿ ಮಗ ಯಾಸೀನ್. ಉಡುಪಿ ಯೋಜನ್ ಅಡಿಕೆ ಯಂತ್ರದ ಸಹಯೋಗಿ ತೀರ್ಥಹಳ್ಳಿಯ ಅಡಿಕೆ ಬೆಳೆಗಾರ ರಘು. ಶಿವಮೊಗ್ಗ ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ರಾಜೇಂದ್ರ ಮತ್ತು ಕೋಣಂದೂರು ಜಾನ್ ಮುಂಗರವಳ್ಳಿ ಮಂಜಪ್ಪನವರು 1964ರಲ್ಲೇ ಅಡಿಕೆ ಸಿಪ್ಪೆ ಸುಲಿಯುವ ಯಂತ್ರ ಅವಿಷ್ಕಾರ ಮಾಡಿದ್ದರು. ಆ ಮೂಲ ಯಂತ್ರ ನಿಮಿಷಕ್ಕೆ ಒಂದು ಅಡಿಕೆ ಸಿಪ್ಪೆ ಸುಲಿಯುವ ಮೊದಲ ಯಂತ್ರ. ವೇಗವಾಗಿ ಅಡಿಕೆ ಸಿಪ್ಪೆ ಸುಲಿಯುವ ಸುದಾರಿತ ಯಂತ್ರ ಮಾಡುವ ಸಂಶೋಧನೆ ಅನೇಕ ವರ್ಷ ಮಾಡುತ್ತಿದ್ದರು. ಈ ಅಡಿಕೆ ಯಂತ್ರದ ಸಂಶೋಧನೆ ವಿವಿಧ ಹಂತಗಳನ್ನು ನೋಡಿದವರು ಕೆ ವಿ ಸುಬ್ಬಣ್ಣ ಮತ್ತು ಖ್ಯಾತ ಸಾಹಿತಿ ಶಿವರಾಮ ಕಾರಂತರು. ಹೆಗ್ಗೋಡಿಗೆ ಬಂದಾಗೆಲ್ಲ ಶಿವರಾಮ ಕಾರಂತರು ಕೆವಿ ಸುಬ್ಬಣ್ಣನವರ ಜೊತೆ ಮುಂಗರವಳ್ಳಿಯ ಮಂಜಪ್ಪನವರ ಮನೆಗೆ ಬಂದು "ಮಂಜಪ್ಪ ನಿನ್ನ ಅಡಿಕೆ ಮಿಷನ್ ಎಲ್ಲಿ ತನಕ ಬಂತು" ಎಂದು ವಿಚಾರಿಸಿ,ಸ್ವತಃ ಅದರ ಕಾರ್ಯವಿಧಾನಗಳನ್ನು ವೀಕ್ಷಿಸುತ್ತಿದ್ದ...