Skip to main content

Posts

Showing posts with the label Mansoon started in the region of western ghats

Blog number 2189. ಇದು ತರಹಾವಾರಿ ರುಚಿಕರ ಮಲೆನಾಡನ ಮುಂಗಾರು ಆರಂಭದ ಅಣಬೆಗಳ ಕಾಲ.

#ಮು೦ಗಾರು_ಮಳೆ_ಪ್ರಾರಂಭ_ಆಗಿದೆ. #ಮಲೆನಾಡಿನ_ಸಂಪ್ರದಾಯಿಕ_ಆಹಾರ_ಕೂಡ #ಕಳಲೆ_ಮರಕೆಸ_ಅಣಬೆ_ಹೀಗೆ....#ಸಾಗಿದೆ_ಉದ್ದ_ಪಟ್ಟಿ_ಸಾಲು #ತರಹೇವಾರಿ_ಅಣಬೆಗಳಲ್ಲಿ_ತಿನ್ನಬಾರದ್ದು_ಹೆಚ್ಚು_ಇದೆ #ಸಂಪ್ರದಾಯಿಕ_ಮೇಲ್ವರ್ಗದ_ಬ್ರಾಹ್ಮಣ_ಮತ್ತು_ಲಿಂಗಾಯಿತರ_ಕುಟುಂಬಗಳಲ್ಲಿ #ಅಣಬೆ_ಆಹಾರವಾಗಿ_ಸ್ವೀಕರಿಸಲು_ಅವಕಾಶ_ಇಲ್ಲ_ನಿಷೇದ_ಇದೆ. #ಸಸ್ಯ_ವರ್ಗದ_ಅಣಬೆ_ಶಿಲೀಂದ್ರವಾದ್ದರಿಂದ_ಇದನ್ನು_ಬಳಸುವುದಿಲ್ಲ.    ಪಶ್ಚಿಮ ಘಟ್ಟದಲ್ಲಿ 51 ವಿದದ ಅಣಬೆಗಳಲ್ಲಿ 8 ವಿದದ ಅಣಬೆ ಮಾತ್ರ ತಿನ್ನಲು ಯೋಗ್ಯವಂತೆ. ತರಕಾರಿ ಗುಂಪಿನ ಸಸ್ಯ ವರ್ಗಕ್ಕೆ ಸೇರಿದ ಈ ಶಿಲೀಂದ್ರ  ಅಣಬೆ ಉತ್ತಮ ಆಹಾರ ಮತ್ತು ಇದರಲ್ಲಿ ಶರ್ಕರ ಪಿಷ್ಟ ಕಡಿಮೆ ಇರುವುದರಿಂದ ಡಯಾಬಿಟೀಸ್ ಇರುವವರಿಗೆ ಒಳ್ಳೆಯ ಆಹಾರ ಇದು.    ನಾನು ನೋಡಿದ್ದು ಇದರಲ್ಲಿ ಕೆಲವೇ ಕೆಲವು ಮತ್ತು ತಿಂದಿದ್ದು ಇನ್ನೂ ಕೆಲವು ಮಾತ್ರ.     ನಮ್ಮಲ್ಲಿ  ಹೆಚ್ಚಾಗಿ ಸಿಗುವುದು #ಹೆಗ್ಗಲಾಣಬೆ ಅಂತ( ಇದನ್ನು ಬೇರೆ ಹೆಸರಲ್ಲೂ ಕರೆಯುತ್ತಾರೆ) ಇದರಲ್ಲಿ ಕಪ್ಪು ಮೊಗ್ಗು ಮತ್ತು ಬಿಳಿ ಮೊಗ್ಗು ಎಂಬ ಎರೆಡು ವಿದವಿದೆ.    ಮುಂಗಾರು ಮಳೆ ಪ್ರಾರಂಭದಲ್ಲಿ ಮತ್ತು ಮುಕ್ತಾಯದ ದಿನಗಳಲ್ಲಿ ಅರಣ್ಯ ಪ್ರದೇಶದಲ್ಲಿ ದೊರೆಯುತ್ತದೆ ಇದಕ್ಕೆ ಬೇಡಿಕೆ ಜಾಸ್ತಿ, ರುಚಿ ಜಾಸ್ತಿ ಆದ್ದರಿಂದ ಕೆಜಿಗೆ 300 ಕ್ಕೂ ಹೆಚ್ಚು ಬೆಲೆಗೆ ಮಾರಾಟ ಆಗುತ್ತೆ...