ನಮ್ಮೂರ_ಕುರಿಯನ್_ಮ್ಯಾಥ್ಯೂ
#ಜನ_ಪ್ರೀತಿಯಿಂದ_ಕರೆಯುವುದು_ಕುರಿಯನ್_ಮೇಷ್ಟರು
#ಇನ್ನು_ನೆನಪು_ಮಾತ್ರ.
ಸರಿಯಾಗಿ ನೆನಪಿಲ್ಲ 1998 ಅಥವ 99 ಬೆಳಿಗ್ಗೆನೆ ನಾನು ಮತ್ತು ನನ್ನ ಮಿತ್ರ ಅಮೀರ್ ಸಾಹೇಬರು ಶಿವಮೊಗ್ಗಕ್ಕೆ ಹೊರಟಿದ್ದೆವು,
#ಅಮೀರ್ಸಾಹೇಬರದ್ದೇ ಟ್ರಾಕ್ಸ್ ವಾಹನದಲ್ಲಿ.
ಆಗಷ್ಟೇ ಸಾಗರದಿಂದ ಬಂದ ಬೆಳಗಿನ 7.30 ರ ಬಸ್ಸು ಪುಲ್ ರಶ್ ಆಗಿದ್ದರಿಂದ ಅದರಲ್ಲಿ ಪ್ರಯಾಣಿಸಲು ಕುರಿಯನ್ ಮ್ಯಾಥ್ಯೂ ಮತ್ತು ಅವರ ಮಗಳು ಕೈ ಮಾಡಿದರೂ ಆ ಬಸ್ ನಿಲ್ಲಿಸದೇ ಹೊರಟು ಹೋಯಿತು.
ತಂದೆ ಮತ್ತು ಮಗಳು ತುಂಬಾ ಗಾಭರಿಯಿಂದ ಹತಾಶರಾಗಿ ನಿಂತಾಗ ಅವರಿಬ್ಬರನ್ನ ನಮ್ಮ ವಾಹನದಲ್ಲೇ ಶಿವಮೊಗ್ಗಕ್ಕೆ ಡ್ರಾಪ್ ಮಾಡಿದ್ದೆವು.
ಇದನ್ನು ಕುರಿಯನ್ ಮೇಷ್ಟರು ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದರು, ಅವತ್ತಿನ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಶಿವಮೊಗ್ಗಕ್ಕೆ ಸಾಗರದಿಂದಲೇ ವಿದ್ಯಾರ್ಥಿಗಳಿಂದ ಜಾಮ್ ಪುಲ್ ಆಗಿ ಬಸ್ಸುಗಳು ಬರುತ್ತಿದ್ದರಿಂದ ಇವರಿಗೆ ಆ ಬಸ್ಸು ನಿಲುಗಡೆ ಸಿಗಲಿಲ್ಲ ಇದರಿಂದ ಪರೀಕ್ಷಾ ಕೇಂದ್ರ ತಲುಪಲಾಗದ ಅಸಹಾಯಕತೆ ಅವರ ಆತಂಕಕ್ಕೆ ಕಾರಣ ಆಗಿತ್ತು.
ಅವರ ಆ ಮಗಳು #ಆಸ್ಟ್ರೇಲಿಯದಿಂದ ವಿಮಾನ ಹತ್ತಿ ರಾತ್ರಿ 2 ಕ್ಕೆ ಬೆಂಗಳೂರು ತಲುಪಿ ಬುಧವಾರ ಬೆಳಿಗ್ಗೆ ನಮ್ಮೂರು ಆನಂದಪುರಂ ತಲುಪಿ ಅವರ ತಂದೆ ಕುರಿಯನ್ ಮ್ಯಾಥ್ಯೂ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.
ಇದೆಲ್ಲ ನೆನಪುಗಳು... ಕುರಿಯನ್ ಮ್ಯಾಥ್ಯೂ ಕುಟುಂಬ 1990 ರಲ್ಲಿ ಕೇರಳದಲ್ಲಿನ ಕೃಷಿ ಭೂಮಿ ಮಾರಾಟ ಮಾಡಿ ನಮ್ಮೂರ ಸಮೀಪದ ಆಚಾಪುರದಲ್ಲಿ ಜಮೀನು ಖರೀದಿಸಿ ಕೃಷಿ ಮಾಡುತ್ತಿದ್ದರು.
ಆ ದಿನಗಳಲ್ಲಿ ವಿದ್ಯುತ್ ಇಲ್ಲ, ರಸ್ತೆ ಇಲ್ಲದ ಮತ್ತು ಕೃಷಿ ಆದಾಯ ಕೈಗೆ ಸಿಗದ ಕಷ್ಟದ ದಿನಗಳು.
ನಿತ್ಯ ಹೈನುಗಾರಿಕೆ ಮಾಡುತ್ತಾ ಮಕ್ಕಳ ವಿದ್ಯಾಭ್ಯಾಸ ಮಾಡಿಸುತ್ತಾ ಜೀವನ ಸಾಗಿಸಿದ ಕಾಯಕ ಯೋಗಿ ಇವರು.
ನಂತರ ಸೊರಬ ತಾಲೂಕಿನ ಮೂಡಗೋಡಿನಲ್ಲಿ ಅಡಿಕೆ ತೋಟ ಕೂಡ ಮಾಡಿದ್ದಾರೆ.
ಮಗ #ಮನುಕುರಿಯೊಕೋಸ್
ಒಯೋ (Oyo) ಹೋಟೆಲ್ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.
ಮೊನ್ನೆ ಮಂಗಳವಾರ ಬೆಳಿಗ್ಗೆ ತೀವ್ರ ಹೃದಯಾಘತದಿಂದ 73ನೇ ವಯಸ್ಸಿನಲ್ಲಿ ಕುರಿಯನ್ ಮ್ಯಾಥ್ಯೂ ಅವರು ಇಹ ಲೋಕ ತ್ಯಜಿಸಿದ್ದಾರೆ.
ನಿನ್ನೆ ಸಂಜೆ ರಿಪ್ಪನಪೇಟೆಯ ಅವರ ಧಾರ್ಮಿಕ ಕೇಂದ್ರವಾದ ಚರ್ಚ್ ನಲ್ಲಿ ಅವರ ಕುಟುಂಬ ಅಂತ್ಯ ಸಂಸ್ಕಾರ ನೆರವೇರಿಸಿದೆ.
ಸಜ್ಜನ - ಸಂಪನ್ನ ವ್ಯಕ್ತಿ ಆಗಿದ್ದ ಕುರಿಯನ್ ಮ್ಯಾಥ್ಯೂ ಅವರು ಕೇರಳದಲ್ಲಿ ಶಿಕ್ಷಕರಾಗಿದ್ದರಂತೆ ಆದ್ದರಿಂದ ನಮ್ಮ ಊರಲ್ಲಿ ಅವರಿಗೆ ಜನ ಪ್ರೀತಿಯಿಂದ ಕುರಿಯನ್ ಮೇಷ್ಟ್ರು ಅಂತಲೇ ಕರೆಯುತ್ತಿದ್ದರು ನಾನು ಕೂಡ ಮೇಷ್ಟ್ರೇ ಅಂತನೇ ಅವರನ್ನ ಕರೆಯುತ್ತಿದ್ದೆ.
ಅವರಿಗೆ ಸದ್ಗತಿ ಸ್ವರ್ಗ ಪ್ರಾಪ್ತಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ.
#kuriyanmyathyu #manukuriyokos #sagar #anandapuram #achapura #soraba #mudagodu
Comments
Post a Comment