ಕಾಳರಾತ್ರಿ ದೇವಿ ಕಡುಗಪ್ಪು ಮೈಬಣ್ಣ, ಕೆದರಿದ ಕೂದಲು, ತ್ರಿನೇತ್ರಗಳುಳ್ಳ ಅತ್ಯಂತ ಭಯಾನಕ ರೌದ್ರರೂಪ. ಕತ್ತೆಯ ವಾಹನದ ಮೇಲೆ ಕುಳಿತಿದ್ದು, ಒಂದು ಕೈಯಲ್ಲಿ ಕತ್ತಿ ಹಾಗೂ ಮತ್ತೊಂದು ಕೈಯಲ್ಲಿ ಕಬ್ಬಿಣದ ಮುಳ್ಳುಹಿಡಿಯ ಆಯುಧವಿರುತ್ತದೆ.
ಆದರೆ ಆಕೆಯ ಮುದ್ರೆಗಳು (ಅಭಯ ಮತ್ತು ವರದ) ಭಕ್ತರಿಗೆ ರಕ್ಷಣೆ ನೀಡುತ್ತವೆ ಆದ್ದರಿಂದ ಈಕೆಯನ್ನು ‘ಶುಭಂಕರಿ’ ಎಂದೂ ಕರೆಯುತ್ತಾರೆ.
ಅಜ್ಞಾನ, ಕತ್ತಲೆ ಮತ್ತು ರಾಕ್ಷಸ ಪ್ರವೃತ್ತಿಗಳನ್ನು ನಾಶಮಾಡುವ ರೂಪ. ಕಾಲ ಮತ್ತು ಮೃತ್ಯುವಿನ ಭಯವನ್ನು ಕಳೆದು ನಿರ್ಭಯತೆಯನ್ನು ನೀಡುತ್ತಾಳೆ.
#ಕಾಳರಾತ್ರಿದೇವಿ_ನೀಲಿ_ಬಣ್ಣ.
ಕತ್ತಲೆಯನ್ನೂ, ಕಾಲವನ್ನೂ ಮೀರಿದ ಅತ್ಯಂತ ಭಯಾನಕ ಆದರೆ ಭಕ್ತರಿಗೆ ಅಭಯ ನೀಡುವ ರೂಪ.
ಗಾಢ ನೀಲಿ ಬಣ್ಣವು ಅಗಾಧವಾದ ಬ್ರಹ್ಮಾಂಡ, ಅಜ್ಞಾನವನ್ನು ನುಂಗುವ ನಿಗೂಢ ಶಕ್ತಿ ಮತ್ತು ಅಚಲವಾದ ಗಾಂಭೀರ್ಯವನ್ನು ಸೂಚಿಸುತ್ತದೆ.
#dasara #navaratri #bluecolor.#navaratri.
Comments
Post a Comment