ಧರ್ಮಸಂರಕ್ಷಕ_ಬಿರುದಾಂಕಿತ.
ಜಿಗಳೆಮನೆ_ಗಣಪತಿಭಟ್ಟರಿಗೆ
ಹುಟ್ಟು_ಹಬ್ಬದ_ಶುಭಾಷಯಗಳು.
ಜೆಗಳೆಮನೆ ಎಂಬುದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪ್ರಖ್ಯಾತವಾದ ವರದಳ್ಳಿ ಶ್ರೀಧರ ಆಶ್ರಮಕ್ಕಿಂತ ಒಂದೆರೆಡು ಕಿಲೋ ಮೀಟರ್ ಹಿಂದೆ ಇರುವ ಯಡಜಿಗಳೆಮನೆ ಗ್ರಾಮಕ್ಕೆ ಸೇರಿದ ಒಂದು ಮೂರು ನಾಲ್ಕು ಹವ್ಯಕರ ಮನೆ ಇರುವ ಹಳ್ಳಿ.
ಇಲ್ಲಿನ ವಾಮನ ಮೂರ್ತಿ ರೂಪದ ಜಿಗಳೆಮನೆ ಗಣಪತಿ ಭಟ್ಟರು ಲೋಕಪ್ರಸಿದ್ಧರು, ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಬರೆಯುವ ಲೇಖನಕ್ಕೆ ಲಕ್ಷಾಂತರ ವೀಕ್ಷಕರಿದ್ದಾರೆ.
ಇವರ ಲೇಖನಗಳ ಸಂಖ್ಯೆ 30 ಸಾವಿರಕ್ಕೂ ಮಿಕ್ಕಿದೆ ಇದರಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚಿನ ಲೇಖನ ರಾಮಚಂದ್ರಾಪುರ ಮಠಕ್ಕೆ ಸಂಬಂದಪಟ್ಟಿದ್ದೇ ಆಗಿದೆ.
ಇವರು ವಿರೋಧಿಸುವ ಮಠದ ಪರವಾಗಿ ಒಲೈಸಲು ಅನೇಕರು ಇವರಿಗೆ ಗೇಲಿ ಮಾಡಲು ಹೋಗಿ ಅವರೇ ಹಾಸ್ಯಾಸ್ಪದರಾಗಿಬಿಟ್ಟಿದ್ದಾರೆ, ಅನೇಕರು ಗುಟ್ಟಾಗಿ ಇವರ ಜೊತೆ ರಾಜಿಯೂ ಆಗಿದ್ದಾರೆ ಯಾರು ಏನೇ ಅಂದರೂ ಇವರ ಧರ್ಮ ಸಂರಕ್ಷಣಾ ಕಾರ್ಯ ಮಾತ್ರ ಕಿಂಚಿತ್ತು ಬದಲಾಗಿಲ್ಲ.
ಜಿಗಳೆಮನೆ ಗಣಪತಿ ಭಟ್ಟರಿಗೆ ಇದು 77ನೇ ಹುಟ್ಟುಹಬ್ಬ ಇವರು ನವರಾತ್ರಿಯ ಶಾರದಾ ಪೂಜೆ ಮೂಲನಕ್ಷತ್ರದ ದಿನ ಹುಟ್ಟಿದ್ದು ಅವತ್ತು ದಿನಾಂಕ 16-10-1950,ಇಂಗ್ಲಿಷ್ ತಾರೀಖು ಮತ್ತು ಹಿಂದೂ ಪಂಚಾಂಗದ ದಿನ ಈ ವರ್ಷ ಅಪರೂಪಕ್ಕೆ
ಒಂದೇ ದಿನ ಈ ದಿನ ಬಂದಿದೆ.
ದರ್ಮಸಂರಕ್ಷಕ ಜಿಗಳೆಮನೆ ಗಣಪತಿ ಭಟ್ಟರು ಸಜ್ಜನ ಗಡದಲ್ಲಿ, ಪರಮಾನಂದ ಮಠದಲ್ಲಿ, ಸೀಗೆಹಳ್ಳಿಯ ಮಠದಲ್ಲಿ ಕೆಲವು ವಷ೯ ಅನೂಷ್ಠಾನ ಸಾದನೆ ಮಾಡಿದವರು.
ಭಟ್ಟರು ನಿರಂತರ ಸಾದು ಸಂತರ ಸತ್ಸ೦ಗದಲ್ಲಿದ್ದವರು, ವರದಳ್ಳಿ ಶ್ರೀಧರ ಸ್ವಾಮಿಗಳ ಭಕ್ತರು.
ಜಿಗಳೇಮನೆ ಗಣಪತಿ ಭಟ್ಟರ ಹೋರಾಟ ಅಸಮಾನ್ಯ
ಬಲಿಷ್ಟವಾದ ಮಠದ ವಿರುದ್ದವಾಗಿ ಜನಜಾಗೃತಿ ಮಾಡುವುದು ಎಂದರೆ ತಮ್ಮ ಜೀವವನ್ನೆ ಪಣಕ್ಕಿಡುವುದು, ಜಿಗಳೆಮನೆ ಗಣಪತಿ ಭಟ್ಟರದ್ದು ಎಂಟೆದೆಯ ದೈರ್ಯ.
ನ್ಯಾಯಕ್ಕಾಗಿ ಇವರು ನಡೆಸಿದ ಹೋರಾಟ ಹವ್ಯಕರ ರಾಮಚಂದ್ರಾಪುರ ಮಠದ ದಂತದ ಸಿಂಹಾಸನದಂತೆ ಶತ ಶತಮಾನಗಳಾದರೂ ಅಳಿಸದೇ ಉಳಿಯಲಿರುವ ಜಂಗಮವಾಗಿದೆ.
ಎಷ್ಟು ಜನ ಇವರನ್ನ ಇವರ ಸತ್ಯಶೋದದ ಬರವಣಿಗೆ ವಿರೋಧಿಸಿದ್ದರೋ ಅದರಲ್ಲಿ ಶೇಕಡಾ 99 ಜನ ಈಗ ಹೇಳುವುದು ಜಿಗಳೆಮನೆ ಗಣಪತಿ ಭಟ್ಟರು ಹೇಳಿದ್ದೆಲ್ಲ ಸತ್ಯ ನಾವು ಅವಾಗೆಲ್ಲ ಗೊತ್ತಿಲ್ಲದೆ ವಿರೋಧಿಸಿದೆವು ಅವರನ್ನು ಅವಮಾನಿಸಿದೆವು ಎಂದು ಪಶ್ಚಾತ್ತಾಪ ವ್ಯಕ್ತಪಡಿಸುತ್ತಾರೆ.
ಆದರೆ ಜಿಗಳೆಮನೆ ಗಣಪತಿ ಭಟ್ಟರು ಹೋರಾಟಗಾರರು, ಸತ್ಯ ಮತ್ತು ದರ್ಮಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ದರಿರುವುದರಿಂದ ತಮ್ಮ ಹವ್ಯಕ ಕುಲದ ಮಠದ ಅದರ್ಮದ ವಿರುದ್ಧ ಸಮರ ಸಾರಿದ್ದಕ್ಕಾಗಿ ಅವಮಾನ - ಬಹಿಷ್ಕಾರ - ಜೈಲು ಅನುಭವಿಸಿ ಆಗಿದೆ.
ಹುಟ್ಟು ಹೋರಾಟಗಾರ ಜಿಗಳೆಮನೆ ಗಣಪತಿ ಭಟ್ಟರು ಈ ದಮ೯ ಸಂಕ್ಷಣೆಯ ಜನಜಾಗೃತಿಗಾಗಿ ಲಕ್ಷಾಂತರ ಜನರ ಬೆಂಬಲಗಳಿಸಿದ್ದಾರೆ, ಹಿರಿಯರಾದ ಇವರು #ರಾಷ್ಟ್ರೀಯ_ಸ್ವಯಂ_ಸೇವಕ_ಸಂಘದ (RSS) ಪೂರ್ಣಾವದಿ ಕಾಯ೯ಕರ್ತರೂ ಆಗಿದ್ದವರು, ತುರ್ತು ಪರಿಸ್ಥಿತಿ ವಿರೋಧಿಸಿ ಮೂರು ತಿಂಗಳು ಜೈಲು ಅನುಭವಿಸಿದ ರಾಷ್ಟ್ರ ಭಕ್ತರು ಇವರು
ನಿನ್ನೆ ಬೆಳಿಗ್ಗೆ ನವರಾತ್ರಿ ಪ್ರಯುಕ್ತ ನಾನು #ವರದಳ್ಳಿ_ದುರ್ಗಾಂಬಾ ದೇವಾಲಯ ಮತ್ತು #ವರದಳ್ಳಿ_ಶ್ರೀಧರ_ಆಶ್ರಮಕ್ಕೆ ಹೋದವನು ಅಲ್ಲಿಂದನೇ ಜಿಗಳೆಮನೆ ಗಣಪತಿ ಭಟ್ಟರಿಗೆ ಫೋನಾಯಿಸಿ ಊರಲ್ಲಿ ಇದ್ದೀರಾ? ಎಂದು ವಿಚಾರಿಸಿ (ಕಳೆದ ವರ್ಷ ಈ ದಿನ ಅವರು ಬೆಂಗಳೂರಲ್ಲಿದ್ದರು) ಅವರ ಮನೆಗೆ ಹೋಗಿ ಬೇಟಿ ಆಗಿದ್ದೆ.
ಗಣಪತಿ ಭಟ್ಟರು ಮತ್ತು ಅವರ ಪತ್ನಿ ಈ ವಯಸ್ಸಿನಲ್ಲೂ ತುಂಬಾ ಲವಲವಿಕೆಯಿಂದ ಆರೋಗ್ಯವಾಗಿರುವುದು ಅವರಿಗೆ ದೇವರು ಕರುಣಿಸಿದ ಭಾಗ್ಯವೇ ಆಗಿದೆ.
ಅವರ ಹುಟ್ಟು ಹಬ್ಬದ ಒಂದು ದಿನ ಮೊದಲೇ ಅವರಿಗೆ ಹುಟ್ಟು ಹಬ್ಬದ ಶುಭಹಾರೈಸುವ ಅವಕಾಶ ನನ್ನದಾಗಿತ್ತು.
ವರದಳ್ಳಿ #ಶ್ರೀಧರಸ್ವಾಮಿಗಳು ಮತ್ತು #ಸಖರಾಯಪಟ್ಟಣದ_ಅವದೂತರಾದ
#ವೆಂಕಟಚಲಪತಿಗಳ ಅನುಗ್ರಹ ಮತ್ತು ದಶ೯ನ ಪಡೆದಿರುವ ಈ ದಂಪತಿಗಳು ವಿಶೇಷ ವ್ಯಕ್ತಿಗಳಾಗಿದ್ದಾರೆ.
80ರ ದಶಕದಲ್ಲಿ ಸಖರಾಯಪಟ್ಟಣದ ಅವದೂತರಾದ ವೆಂಕಟಾಚಲಪತಿಗಳು ದಿಡೀರಾಗಿ ಇವರ ಆಹ್ವಾನವೇ ಇಲ್ಲದೆ ಇವರ ಮನೆಗೆ ಬಂದಿದ್ದು ಹೋಳಿಗೆ ತಿಂದಿದ್ದು ಯೋಗಾಯೋಗವೇ ಆಗಿದೆ ಆ ಬಗ್ಗೆ ನಾನು ಹಿಂದೆ ಒಂದು ಲೇಖನ ಬರೆದಿದ್ದೆ.
ಇವರದ್ದೇ ಜಾತಿ ಸಮಾಜದ ರಾಮಚಂದ್ರಪುರ ಮಠದ ಸ್ವಾಮಿಗಳ ವಿರುದ್ಧ ಇವರು ನಡೆಸಿರುವ ಹೋರಾಟಕ್ಕೆ ದೊಡ್ಡ ಇತಿಹಾಸ ಇದೆ.
ಜಿಗಳೆಮನೆ ಗಣಪತಿ ಭಟ್ಟರು ನಿಜವಾದ #ಧರ್ಮ_ಸಂರಕ್ಷಕರಾಗಿದ್ದಾರೆ ಇವರ ಹೋರಾಟ ವೈಯಕ್ತಿಕ ದ್ವೇಷ ಅಥವ ಲಾಭಕ್ಕಾಗಿ ಅಲ್ಲ ಆದಿ ಶಂಕರಾಚಾರ್ಯರ ಸನ್ಯಾಸ ದೀಕ್ಷೆಯ ಪರಿಪಾಲನೆ ಪಾಲಿಸದ ತಮ್ಮ ಸ್ವಜಾತಿ ಮಠಾದೀಶರ ವಿರುದ್ಧ ಜನ ಜಾಗೃತಿಗಾಗಿ ಮಾಡುತ್ತಿದ್ದಾರೆ.
ಆದರೆ ಅನೇಕರು ಬಾವಿಸಿದ್ದು ... ಪ್ರಭಾವಿ ಮತ್ತು ಶ್ರೀಮಂತ ಮಠದ ವಿರುದ್ಧವಾದ ಹೋರಾಟದಿಂದ ಜಿಗಳೇಮನೆ ಗಣಪತಿ ಭಟ್ಟರನ್ನ ಅವರೆಲ್ಲ ಸೇರಿ ಕ್ಷಣ ಮಾತ್ರದಲ್ಲಿ ಹೊಸಕಿ ಹಾಕಿ ಬಿಡುತ್ತಾರೆಂದೇ ತಿಳಿದಿದ್ದರು.
ಅಂತಹ ಅನೇಕ ಪ್ರಯತ್ನವೂ ನಡೆದಿತ್ತಾದರೂ ದೈವ ರಕ್ಷಣೆ ಜಿಗಳೆಮನೆ ಗಣಪತಿ ಭಟ್ಟರಿಗೆ ಶ್ರೀರಕ್ಷೆ ಆಗಿತ್ತು.
ಭಟ್ಟರ ಮೇಲೆ ಅನೇಕ ಸುಳ್ಳು ಮೊಕದ್ದಮೆಗಳು ಹಾಕಲಾಗಿತ್ತು, ಜೈಲಿಗೂ ಕಳಿಸಿದ್ದರು, ಅವಮಾನ ಮಾಡಿದರು, ಅವರ ಸ್ವಜಾತಿ ಬಂದುಗಳಲ್ಲಿ ಅಘೋಷಿತ ಬಹಿಷ್ಕಾರ ಕೂಡ ಹಾಕಿದರು ಆದರೆ ಅದೆಲ್ಲವೂ ಮೊಡದ೦ತೆ ಭಟ್ಟರ ಜೀವನದಲ್ಲಿ ಕರಗಿ ಹೋಯಿತು.
ಭಟ್ಟರು ಅದೆಲ್ಲದಕ್ಕೂ ದೃತಿಗೆಡಲೇ ಇಲ್ಲ ಕಾರಣ ಅವರಿಗೆ #ಜೀವ_ಭಯವೇ_ಇಲ್ಲ.
ನನ್ನ ಆತ್ಮವನ್ನ ಯಾರೂ ನಾಶ ಮಾಡಲು ಸಾಧ್ಯವಿಲ್ಲ ಈ ದೇಹ ನಾಶ ಮಾಡಬಹುದು ಇದು ವಾಸ್ತವವಾಗಿ ನನ್ನದಲ್ಲ ಎನ್ನುವ ಭಟ್ಟರು ಆದ್ಯಾತ್ಮದ ಸಾಧನೆಯಲ್ಲಿ ಮೇರು ಹಂತ ತಲುಪಿದ್ದಾರೆ.
ಸಂತರಂತೆ ಈ ದಂಪತಿಗಳು ಸುಖವಾಗಿ ನೆಮ್ಮದಿಯಿಂದ ತಮ್ಮ ವೃದ್ಧಾಪ್ಯದ ದಿನಗಳನ್ನ ಕಳೆಯುತ್ತಿದ್ದಾರೆ #ದೇವರು ಇವರಿಗೆ #ಶತಾಯುಷಿ ಭಾಗ್ಯ ಕರುಣಿಸಲಿ ಎಂದು ಹಾರೈಸಿ ಇವರ #ಪಾದಾರವಿಂದಗಳಿಗೆ ನಮಿಸಿ ಬಂದೆ.
#dharmasamrakshaka #gigalemaneganapathibhttaru #varadalli #sridharashrama #durgambhatemple #ramachandramutt #sakarayapattanavenkatachalaavadutharu
Comments
Post a Comment