ದಸರಾ_ನವರಾತ್ರಿ
ಮೂರನೆಯ_ದಿನ_
ಚಂದ್ರಘಂಟಾ_ದೇವಿ
ದಿನಾಂಕ_13_ಅಕ್ಟೋಬರ್_2026_ಮಂಗಳವಾರ.
ಚಂದ್ರಘಂಟಾ ದೇವಿ
ಹಣೆಯ ಮೇಲೆ ಅರ್ಧಚಂದ್ರಾಕಾರದ ಗಂಟೆಯನ್ನು ಧರಿಸಿರುವ ಕಾರಣ ಈಕೆಗೆ ‘ಚಂದ್ರಘಂಟಾ’ ಎಂದು ಹೆಸರು.
ಸಿಂಹವಾಹಿನಿಯಾದ ಈಕೆಗೆ ಹತ್ತು ಕೈಗಳಿದ್ದು, ವಿವಿಧ ಆಯುಧಗಳನ್ನು ಹಿಡಿದು ರೌದ್ರ ಹಾಗೂ ಶಾಂತ ಭಾವಗಳ ಸಮತೋಲನವಾಗಿ ಗೋಚರಿಸುತ್ತಾಳೆ.
‘ಮಣಿಪೂರ ಚಕ್ರ’ವನ್ನು ಜಾಗೃತಗೊಳಿಸುವ ದೇವತೆ, ಶತ್ರುಭಯ ಮತ್ತು ಆತಂಕಗಳನ್ನು ದೂರಮಾಡಿ ಧೈರ್ಯ, ಶೌರ್ಯ ಮತ್ತು ಶಾಂತಿಯನ್ನು ನೀಡುತ್ತಾಳೆ.
#ಚಂದ್ರಘಂಟಾ_ಬೂದು_ಬಣ್ಣ ಹಣೆಯ ಮೇಲೆ ಚಂದ್ರ ಹಾಗೂ ಯುದ್ಧಕ್ಕೆ ಸನ್ನದ್ಧಳಾದ ರೌದ್ರ-ಶಾಂತ ರೂಪ.
ಬೂದು ಬಣ್ಣವು ತಟಸ್ಥತೆ, ದುಷ್ಟರನ್ನು ನಿಗ್ರಹಿಸಲು ಬೇಕಾದ ಕಠೋರ ಸಂಯಮ ಮತ್ತು ಭಾವನೆಗಳ ಮೇಲಿನ ನಿಯಂತ್ರಣವನ್ನು ಸೂಚಿಸುತ್ತದೆ.
#dasara #navaratri #mysore #greycolor
#chandraghanta
Comments
Post a Comment