ಹನಿಟ್ರಾಪ್_ಪುರಾಣ.
ಮನ್ಮಥನ_ಬಾಣದಿಂದ_ಹಿಡಿದು_ಕ್ಯಾಮೆರಾ_ಕಣ್ಣಿನವರೆಗೆ.
ಅಧಿಕಾರ, ಕಾಮ ಮತ್ತು ಬ್ಲ್ಯಾಕ್‌ಮೇಲ್‌ನ ಇತಿಹಾಸ!...
ಇದು ಇವತ್ತಿನ ಕಥೆಯಲ್ಲ ಇದು ಪುರಾಣ ಮತ್ತು ಇತಿಹಾಸದುದ್ದಕ್ಕೂ ಹರಿದು ಬಂದಿರುವ ತಂತ್ರ.
ಹೆಸರು "ವಿಷಕನ್ಯೆ"ಯಿಂದ "ಹನಿಟ್ರ್ಯಾಪ್" ಎಂದು ಬದಲಾಗಿರಬಹುದು ಆದರೆ ಆಡುತ್ತಿರುವ ಆಟ ಮಾತ್ರ ಅದೇ ಹಳೆಯದು.
ಇವತ್ತಿನ ಟಿವಿ ನ್ಯೂಸ್‌ಗಳಲ್ಲಿ, ಪತ್ರಿಕೆಗಳಲ್ಲಿ "ಹನಿಟ್ರ್ಯಾಪ್", "ಸಿಡಿ ಸ್ಫೋಟ", "ಬ್ಲ್ಯಾಕ್‌ಮೇಲ್" ಎಂಬ ಪದಗಳು ರಾರಾಜಿಸುತ್ತಿವೆ.
ಅಧಿಕಾರದಲ್ಲಿರುವ ನಾಯಕರೊಬ್ಬರು ಬೆಡ್‌ರೂಮ್ ರಹಸ್ಯದಲ್ಲಿ ಸಿಕ್ಕಿಬಿದ್ದು ಕುರ್ಚಿ ಕಳೆದುಕೊಂಡ ಸುದ್ದಿ ಕೇಳಿದಾಗ, ಇವೆಲ್ಲವೂ ಕೇವಲ ಇಂಟರ್ನೆಟ್ ಅಥವಾ ಡಿಜಿಟಲ್ ಕಾಲದ ಆವಿಷ್ಕಾರ ಎಂದು ಹಲವರು ಭಾವಿಸುತ್ತಾರೆ.
ಆದರೆ ವಾಸ್ತವವೇನೆಂದರೆ, ಅಧಿಕಾರವನ್ನು ಉರುಳಿಸಲು ಮನುಷ್ಯನ ಮೂಲಭೂತ ದೌರ್ಬಲ್ಯವಾದ "ಕಾಮ" ಮತ್ತು "ಆಕರ್ಷಣೆ"ಯನ್ನು ಅಸ್ತ್ರವಾಗಿ ಬಳಸಿಕೊಳ್ಳುವುದು ಇವತ್ತಿನ ಕಥೆಯಲ್ಲ ಇದು ಪುರಾಣ ಮತ್ತು ಇತಿಹಾಸದುದ್ದಕ್ಕೂ ಹರಿದು ಬಂದಿರುವ ತಂತ್ರ.
ಪುರಾಣಗಳನ್ನೇ ನೋಡಿ #ಶಿವನ ಕಠಿಣ ತಪಸ್ಸನ್ನು ಭಂಗ ಮಾಡಿ, ಆತನನ್ನು ಎಚ್ಚರಗೊಳಿಸಲು ದೇವತೆಗಳು ಆರಿಸಿಕೊಂಡಿದ್ದು ಬ್ರಹ್ಮಾಸ್ತ್ರವನ್ನಲ್ಲ, #ಮನ್ಮಥ ಮತ್ತು #ರತಿಯ ಪ್ರೇಮ ಬಾಣಗಳನ್ನು.
ದೇವಲೋಕದ ಅಧಿಪತಿ #ಇಂದ್ರನಿಗೆ ಯಾರಾದರೂ ಋಷಿ ಅಥವಾ ರಾಜ ತಪಸ್ಸು ಮಾಡಿ ತನ್ನ ಸಿಂಹಾಸನ ಕಿತ್ತುಕೊಳ್ಳುತ್ತಾನೋ ಎಂಬ ಭಯ ಶುರುವಾದಾಗಲೆಲ್ಲ ಆತ ಪ್ರಯೋಗಿಸುತ್ತಿದ್ದದ್ದು ರಂಭೆ, ಮೇನಕೆಯರ ಸೌಂದರ್ಯವನ್ನು. ತಪಸ್ಸಿನ ಶಕ್ತಿಯನ್ನೇ ಬುಡಮೇಲು ಮಾಡಲು ರೂಪದ ಮೋಹ ಬೇಕಾಗಿತ್ತು.
ಇನ್ನು ಇತಿಹಾಸಕ್ಕೆ ಬಂದರೆ #ಕೌಟಿಲ್ಯನ 'ಅರ್ಥಶಾಸ್ತ್ರ'ದಲ್ಲಿ ರಾಜಕೀಯ ವೈರಿಗಳನ್ನು ಸದೆಬಡಿಯಲು ಬಳಸುತ್ತಿದ್ದ "#ವಿಷಕನ್ಯೆಯರ ಇಲ್ಲೇಖವಿದೆ.
ಶತ್ರು ರಾಜನನ್ನು ಯುದ್ಧಭೂಮಿಯಲ್ಲಿ ಸೋಲಿಸುವುದಕ್ಕಿಂತ ಆತನ ಕಾಮದ ಹಪಾಹಪಿಯನ್ನು ಬಳಸಿಕೊಂಡು ಆತನ ಅಂತಃಪುರದಲ್ಲೇ ಬಲಿಪಶು ಮಾಡುವುದು ಸುಲಭದ ಹಾದಿಯಾಗಿತ್ತು.
ಸುಂದರ ನಾರಿಯೊಬ್ಬಳ ಅಪ್ಪುಗೆಯಲ್ಲೇ ಸಾವಿನ ವಿಷ ಅಡಗಿರುತ್ತಿತ್ತು.
ಹಿಂದೆ ವಿಷಕನ್ಯೆಯರಿದ್ದ ಜಾಗದಲ್ಲಿ ಇಂದು ಹೈ-ಡೆಫಿನಿಷನ್ #ಹಿಡನ್_ಕ್ಯಾಮೆರಾಗಳಿವೆ.
ರತಿ-ಮನ್ಮಥರ ಪ್ರೇಮಬಾಣಗಳ ಜಾಗದಲ್ಲಿ ವಾಟ್ಸಾಪ್ ವಿಡಿಯೋ ಕಾಲ್ ರೆಕಾರ್ಡಿಂಗ್‌ಗಳು ಮತ್ತು #ಪೆನ್_ಡ್ರೈವ್‌ಗಳು ಬಂದಿವೆ.
ಹೆಸರು "ವಿಷಕನ್ಯೆ"ಯಿಂದ "ಹನಿಟ್ರ್ಯಾಪ್" ಎಂದು ಬದಲಾಗಿರಬಹುದು ಆದರೆ ಆಡುತ್ತಿರುವ ಆಟ ಮಾತ್ರ ಅದೇ ಹಳೆಯದು.
ಇಲ್ಲಿ ದುರಂತವೆಂದರೆ ಅಧಿಕಾರದ ಮದದಲ್ಲಿ ತೇಲುವ ರಾಜಕಾರಣಿಗಳು ಇತಿಹಾಸದಿಂದ ಪಾಠ ಕಲಿಯುವುದೇ ಇಲ್ಲ.
ಸಾವಿರಾರು ಜನರ ಭವಿಷ್ಯವನ್ನು ನಿರ್ಧರಿಸಬೇಕಾದ ಜನನಾಯಕರು, ಕೇವಲ ಕ್ಷಣಿಕ ಆಕರ್ಷಣೆಗೆ ಮರುಳಾಗಿ, ಇಡೀ ಆಡಳಿತ ವ್ಯವಸ್ಥೆಯನ್ನೇ ಬ್ಲ್ಯಾಕ್‌ಮೇಲ್ ಜಾಲಕ್ಕೆ ಒತ್ತೆ ಇಡುತ್ತಾರೆ.
ಕ್ಯಾಮೆರಾ ಕಣ್ಣುಗಳು ಕಾಯುತ್ತಿವೆ ಎಂದು ತಿಳಿದಿದ್ದರೂ, ಮನುಷ್ಯನ ಅಹಂ ಮತ್ತು ವಾಂಛೆ ಆತನ ಬುದ್ಧಿಯನ್ನು ಮಂಕಾಗಿಸುತ್ತದೆ.
ಯುಗಗಳು ಬದಲಾಗಬಹುದು, ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬರಬಹುದು ಆದರೆ ಮನುಷ್ಯನ ಕಾಮ, ಅಧಿಕಾರದ ದುರಾಶೆ ಮತ್ತು ಅದನ್ನು ಬಂಡವಾಳವಾಗಿಸಿಕೊಂಡು ಆಡುವ ವಂಚನೆಯ ಆಟ ಎಂದಿಗೂ ಹಳೆಯದಾಗುವುದಿಲ್ಲ.
ಪುರಾಣದ ಇಂದ್ರನಿಗಿದ್ದ ಭಯವೇ ಇಂದಿನ ರಾಜಕಾರಣಿಗಳಿಗೆ ಇದ "ಯಾವ ರೂಪದಲ್ಲಿ ಸಿಂಹಾಸನ ಕಳಚುವುದೋ" ಎಂಬ ಭೀತಿ!
ಕ್ಷಣಿಕ ಸುಖಕ್ಕೆ ಬೀಳುವ ಮರುಳು, ಇತಿಹಾಸದುದ್ದಕ್ಕೂ ಸಾಮ್ರಾಜ್ಯಗಳನ್ನೇ ಮುಳುಗಿಸಿದೆ.
ಇನ್ನು ಇಂದಿನ ಕುರ್ಚಿಗಳು ಎಷ್ಟು ದಿನ ಉಳಿದಾವು?...
#honeyrtrap #politics #power #koutilya #trap
Comments
Post a Comment