4271.ಕಾನಡಾ_ಹೋ_ವಿಠ್ಠಲು_ಕರ್ಣಾಟಕೇ_ವಿವರಣೆ.ಕೊಲ್ಲಾಪುರದ_ವೆಂಕಟೇಶ್_ಭಟ್ಟರು.ಶಿವಮೊಗ್ಗ_ಜಿಲ್ಲೆಯ_ಸಾಗರ_ತಾಲ್ಲೂಕಿನ_ಬೆಳ್ಳೆಣ್ಣೆ_ಸಮೀಪದವರು.
ಕಾನಡಾ_ಹೋ_ವಿಠ್ಠಲು_ಕರ್ಣಾಟಕೇ_ವಿವರಣೆ.
ಕೊಲ್ಲಾಪುರದ_ವೆಂಕಟೇಶ್_ಭಟ್ಟರು.
ಶಿವಮೊಗ್ಗ_ಜಿಲ್ಲೆಯ_ಸಾಗರ_ತಾಲ್ಲೂಕಿನ_ಬೆಳ್ಳೆಣ್ಣೆ_ಸಮೀಪದವರು.
ಪಂಡರಾಪುರದ ವಿಠ್ಠಲ ಕರ್ನಾಟಕದವನು / ಕನ್ನಡಿಗ, ವಿಠ್ಠಲನ ಮೂಲ, ಭಕ್ತರು ಹಾಗೂ ಆತನ ಆರಂಭಿಕ ಪರಂಪರೆ ಕರ್ನಾಟಕಕ್ಕೆ ಸೇರಿದ್ದು ಈ ಬಗ್ಗೆ ಈ ಲೇಖನ ಪೂರ್ಣ ಓದಿ.
ಈ ಲೇಖನ ಬರೆಯಲು ಕಾರಣ ಆಗಿದ್ದು ಕೊಲ್ಲಾಪುರ ವಾಸಿ ಆಗಿರುವ ನಮ್ಮ ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯ ಬೆಳ್ಳೆಣ್ಣೆ ಸಮೀಪದ #ವೆಂಕಟೇಶ್_ಭಟ್ಟರು.
ಅವರು ನನ್ನ ಹಿಂದಿನ ಪಂಡರಾಪುರದ ಪುಂಡಲೀಕ ಮತ್ತು ವಿಠೋಬರ ಬಗ್ಗೆ ಬರೆದ ಲೇಖನಕ್ಕೆ ಪ್ರತಿಕ್ರಿಯಿಸಿ ಮಾಹಿತಿ ಕೇಳಿದ್ದರು.
ಅವರು ಪಕ್ಕದ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ದೊಡ್ಡ ಮಟ್ಟದಲ್ಲಿ ಜನರೇಟರ್ ಉದ್ಯಮ ನಡೆಸುತ್ತಿದ್ದಾರೆ.
ನಮ್ಮ ತಾಲ್ಲೂಕಿನ ಇವರು ಅಪಾರ ಓದು ಜ್ಞಾನ ಹೊಂದಿದ್ದಾರೆ ಇವರ ಬಗ್ಗೆ ನನಗೆ ಹೆಚ್ಚು ಅಭಿಮಾನ.
ಇವರು ಕೇಳಿದ ವಿವರ ಈ ಬಗ್ಗೆ ...
"#ಕಾನಡಾ.... #ರಾಜ_ಪಂಡರೀಚ" ಈ ಸುಮಧುರ ಹಾಡನ್ನು ಕೇಳುವಾಗ ಇಲ್ಲಿನ ಒಬ್ಬ ತಜ್ಞರಲ್ಲಿ ಈ ಹಾಡಿನಲ್ಲಿ ಬರುವ ಕನ್ನಡ ಶಬ್ದದ ಮಹತ್ವವಿಚಾರಿಸಿದಾಗ, ಅವರು ಹೇಳಿದ್ದು ಈಗಿರುವ ವಿಠ್ಠಲನ ಮೂರ್ತಿಯನ್ನು ಮುಸ್ಲಿಂ ದಾಳಿಕೋರರಿಂದ ತಪ್ಪಿಸಿ ಹಂಪಿಯಿಂದ ತರಲಾಗಿದ್ದು ಎನ್ನುವುದನ್ನು ಕೇಳಿ ತಿಳಿಯಲ್ಪಟ್ಟೆ ಹಾಗಾಗಿ ಆತನನ್ನು ಕಾನಡ ರಾಜ ಪಂಡರೀ ಚ ಎನ್ನುತ್ತಾರೆ ಅಂತ ಈ ಬಗ್ಗೆ ಸವಿಸ್ತಾರವಾಗಿ ತಿಳಿಯಬೇಕಿದೆ" ಅಂತ.
#ನನ್ನ_ಸಂಗ್ರಹದ_ಮಾಹಿತಿ...
#ಸಂತ_ಜ್ಞಾನೇಶ್ವರರ ಜನಪ್ರಿಯ ಅಭಂಗವಾದ "ಕಾನಡಾ ಹೋ ವಿಠ್ಠಲು ಕರ್ಣಾಟಕೇ" ಹಾಗೂ ಪಂ. #ಭೀಮಸೇನಜೋಷಿಯವರ ಕಂಠಸಿರಿಯಲ್ಲಿ ಅಮರವಾದ "ಕಾನಡಾ ರಾಜಾ ಪಂಡರೀಚಾ" ಕವಿ ಜಿ.ಡಿ. ಮಾಡ್ಗೂಳ್ಕರ್ ಸಾಲುಗಳಲ್ಲಿ ಬರುವ ‘ಕಾನಡಾ’ (ಕನ್ನಡ/ಕರ್ನಾಟಕ) ಶಬ್ದದ ಮಹತ್ವ ಮತ್ತು ಪಂಡರಾಪುರ-ಕರ್ನಾಟಕದ ಸಂಬಂಧದ ಕುರಿತು ಸಾಹಿತ್ಯಿಕ, ಚಾರಿತ್ರಿಕ ಹಾಗೂ ಪೌರಾಣಿಕವಾಗಿ ಹಲವು ಪ್ರಮುಖ ಮುಖಗಳಿವೆ.
ನಿಮಗೆ ಕೇಳಿಬಂದಿರುವ “ಹಂಪಿಯಿಂದ ವಿಗ್ರಹ ತಂದ” ಪ್ರಸಂಗದ ಜೊತೆಗೆ ಈ ‘ಕಾನಡಾ’ ಶಬ್ದದ ಹಿಂದಿನ ಸಂಪೂರ್ಣ ಇತಿಹಾಸ ಮತ್ತು ಹಿನ್ನೆಲೆ ಇಲ್ಲಿದೆ ನೋಡಿ.
‘ಕಾನಡಾ ರಾಜಾ’ ಪದದ ನಿಜವಾದ ಅರ್ಥಗಳು
ಮರಾಠಿ ಭಕ್ತಿ ಸಾಹಿತ್ಯದಲ್ಲಿ ‘ಕಾನಡಾ’ ಎಂಬ ಪದವು ಎರಡು ಪ್ರಮುಖ ಅರ್ಥಗಳನ್ನು ಹೊಮ್ಮಿಸುತ್ತದೆ.
ಪಂಡರಾಪುರದ ವಿಠ್ಠಲಕರ್ನಾಟಕದವನು / ಕನ್ನಡಿಗ, ವಿಠ್ಠಲನ ಮೂಲ, ಭಕ್ತರು ಹಾಗೂ ಆತನ ಆರಂಭಿಕ ಪರಂಪರೆ ಕರ್ನಾಟಕಕ್ಕೆ ಸೇರಿದ್ದು ಎಂಬ ಅರ್ಥದಲ್ಲಿ ಸಂತರು ಆತನನ್ನು ‘ಕಾನಡಾ’ ಎಂದು ಕರೆದರು.
ಅರ್ಥವಾಗದವನು / ದುರ್ಗಮವಾದವನು (ಅಗಮ್ಯ), ಹಳೆ ಮರಾಠಿಯಲ್ಲಿ ‘ಕಾನಡಾ’ ಎಂದರೆ ‘ಸುಲಭವಾಗಿ ತಿಳಿಯದವನು’, ‘ಬುದ್ಧಿಗೆ ನಿಲುಕದವನು’ ಎಂದೂ ಅರ್ಥೈಸಲಾಗುತ್ತದೆ,ಹೇಗೆ ಬೇರೆ ಭಾಷೆ ಸುಲಭವಾಗಿ ಅರ್ಥವಾಗುವುದಿಲ್ಲವೋ ಹಾಗೆ.
ಆದರೆ ಸಂತ ಜ್ಞಾನೇಶ್ವರರು ತಮ್ಮ ಅಭಂಗದಲ್ಲಿ ಸ್ಪಷ್ಟವಾಗಿ "ಕಾನಡಾ ಹೋ ವಿಠ್ಠಲು ಕರ್ಣಾಟಕೇ ತೇಣೇ ಮಜ ಲಾವಿಯೇಲೇ ವೇಧೇ" ಅಂದರೆ ಕರ್ನಾಟಕದವನಾದ ಆ ಕಾನಡ ವಿಠ್ಠಲ ನನಗೆ ಮೋಡಿ ಮಾಡಿದನು ಎಂದು ಕರ್ನಾಟಕ ಎಂಬ ಹೆಸರನ್ನೇ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಹಂಪಿಯಿಂದ ವಿಠ್ಠಲನ ಮೂರ್ತಿ ತಂದ ಪ್ರಸಂಗ,ಇತಿಹಾಸ ಏನು ಹೇಳುತ್ತದೆ? ...
ನಿಮಗೆ ತಿಳಿದುಬಂದ ಕಥೆಗೆ ಚಾರಿತ್ರಿಕ ಹಿನ್ನೆಲೆ ಇದೆ ಆದರೆ ಘಟನಾವಳಿಗಳ ಕಾಲಾನುಕ್ರಮ ಸ್ವಲ್ಪ ವಿಭಿನ್ನವಾಗಿದೆ.
ಪಂಡರಾಪುರದ ಪಾಂಡುರಂಗನ ಪರಮ ಭಕ್ತರಾಗಿದ್ದ ವಿಜಯನಗರದ ಅರಸ #ಶ್ರೀಕೃಷ್ಣದೇವರಾಯರು ಅಥವಾ #ಪ್ರೌಢದೇವರಾಯರ ಕಾಲದಲ್ಲಿ ಪಂಡರಾಪುರದಿಂದ ವಿಠ್ಠಲನ ವಿಗ್ರಹವನ್ನು ವಿಜಯನಗರದ #ಹಂಪಿಗೆ ತಂದು, ಅಲ್ಲಿ ಸುಪ್ರಸಿದ್ಧವಾದ ‘#ವಿಜಯ_ವಿಠ್ಠಲ_ದೇವಾಲಯ’ವನ್ನು ಕಲ್ಲಿನ ರಥವಿರುವ ದೇಗುಲನಿರ್ಮಿಸಿ ಪ್ರತಿಷ್ಠಾಪಿಸಿದ್ದರು ಎಂಬ ಉಲ್ಲೇಖವಿದೆ.
ಸಂತ ಏಕನಾಥರ ಮುತ್ತಜ್ಜರಾದ #ಸಂತ_ಭಾನುದಾಸರು ಕ್ರಿ.ಶ. 1498-1513ರಲ್ಲಿ "ವಿಠ್ಠಲನಿಲ್ಲದ ಪಂಡರಾಪುರ ಶೂನ್ಯವಾಗಿದೆ" ಎಂದು ದುಃಖಿಸಿ, ಹಂಪಿಗೆ ಬಂದು ತಮ್ಮ ಭಕ್ತಿಯಿಂದ ವಿಜಯನಗರದ ಅರಸರನ್ನು ಮೆಚ್ಚಿಸಿ, ಮೂರ್ತಿಯನ್ನು ಮರಳಿ ಪಂಡರಾಪುರಕ್ಕೆ ತಂದರು ಎಂಬುದು ಮಹಾರಾಷ್ಟ್ರದ ಚರಿತ್ರೆ ಮತ್ತು ಭಕ್ತಿ ಪರಂಪರೆಯ ಪ್ರಸಿದ್ಧ ನಂಬಿಕೆ.
14-16ನೇ ಶತಮಾನಗಳಲ್ಲಿ ದಖನ್ ಭಾಗದಲ್ಲಿ ಮುಸ್ಲಿಂ ಸುಲ್ತಾನರ ಆಕ್ರಮಣಗಳು ನಿರಂತರವಾಗಿದ್ದವು.
ದೇವಸ್ಥಾನಗಳ ಲೂಟಿ ಮತ್ತು ವಿಗ್ರಹ ಭಂಜನೆಯ ಭಯದಿಂದಾಗಿ ಹಲವು ಬಾರಿ ವಿಗ್ರಹಗಳನ್ನು ರಹಸ್ಯ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿತ್ತು.
ಆ ಕಾಲಘಟ್ಟದಲ್ಲಿ ವಿಠ್ಠಲನ ಮೂರ್ತಿಯನ್ನು ಸಂರಕ್ಷಿಸಲು ಕರ್ನಾಟಕದ ಗಡಿ ಪ್ರದೇಶಗಳಿಗೆ ಒಯ್ದು=ನಂತರ ಸುರಕ್ಷಿತವಾಗಿ ಮರಳಿ ತರಲಾಗಿತ್ತು ಎಂಬ ಐತಿಹ್ಯವೂ ಸೇರಿಕೊಂಡಿದೆ.
ಪಂಡರಾಪುರ ಮತ್ತು ಕರ್ನಾಟಕದ ಅವಿನಾಭಾವ ಸಂಬಂಧ ವಿಗ್ರಹದ ಸ್ಥಳಾಂತರಕ್ಕಿಂತಲೂ ಮಿಗಿಲಾಗಿ ವಿಠ್ಠಲನನ್ನು ‘ಕಾನಡ’ ಎಂದು ಕರೆಯಲು ಹಲವು ಶತಮಾನಗಳ ಆಳವಾದ ಕಾರಣಗಳಿವೆ.
ಭೌಗೋಳಿಕ ಮತ್ತು ರಾಜಕೀಯ ಹಿನ್ನೆಲೆಯಲ್ಲಿ ಪಂಡರಾಪುರವು (ಇಂದಿನ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಲ್ಲಿದೆ)
ಶತಮಾನಗಳ ಕಾಲ ಕರ್ನಾಟಕದ ರಾಜಮನೆತನಗಳಾದ ಕಲ್ಯಾಣದ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ಸೇವುಣರು (ಯಾದವರು) ಹಾಗೂ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿತ್ತು.
ಶಾಸನಗಳಲ್ಲಿ ಪಂಡರಾಪುರವನ್ನು ‘ಕನ್ನಡ ನಾಡಿನ ಭಾಗ’ ಎಂದೇ ಉಲ್ಲೇಖಿಸಲಾಗಿದೆ.
#ಶಾಸನಗಳ_ಸಾಕ್ಷಿ. ಪಂಡರಾಪುರದ ದೇವಾಲಯದ ಆವರಣದಲ್ಲಿರುವ ಕ್ರಿ.ಶ.1236 ರ ಹೊಯ್ಸಳ ಸೋಮೇಶ್ವರನ ಕಾಲದ ಶಾಸನವು ಸೇರಿದಂತೆ, ಹಲವು ಕನ್ನಡ ಶಾಸನಗಳು ಇಲ್ಲಿವೆ.
ಹೊಯ್ಸಳರು ವಿಠ್ಠಲನಿಗೆ ಗ್ರಾಮಗಳನ್ನು, ದಾನ-ದತ್ತಿಗಳನ್ನು ನೀಡಿದ ಉಲ್ಲೇಖಗಳಿವೆ.
#ಕನ್ನಡ_ಹರಿದಾಸ_ಪರಂಪರೆಯು ಮಹಾರಾಷ್ಟ್ರದ ಸಂತ ಪರಂಪರೆಗಿಂತಲೂ ಮುಂಚೆಯೇ ಕರ್ನಾಟಕದಲ್ಲಿ ವಿಠ್ಠಲನ ಆರಾಧನೆ ಪ್ರಬಲವಾಗಿತ್ತು.
ಪುರಂದರದಾಸರು, ಕನಕದಾಸರು, ವಿಜಯದಾಸರು ಮುಂತಾದ ಹರಿದಾಸರು ವಿಠ್ಠಲನನ್ನೇ ತಮ್ಮ ಆರಾಧ್ಯ ದೈವವಾಗಿ ಪೂಜಿಸಿದರು.
#ಪುರಂದರದಾಸರು ವಿಠ್ಠಲನನ್ನು ತಮ್ಮ ಕೀರ್ತನೆಗಳಲ್ಲಿ..
"ಕಂಡೆ ನಾ ಗೋವಿಂದನ... ಪುಂಡರೀಕಾಕ್ಷ ಪಾಂಡುರಂಗ ವಿಠ್ಠಲನ..."
ಎಂದು ಕರ್ನಾಟಕದ ಮನೆಮನೆಗೂ ತಲುಪಿಸಿದರು.
‘#ಕಾನಡಾ_ರಾಜಾ_ಪಂಡರೀಚಾ’ ಎಂಬ ಉದ್ಘೋಷ ಕೇವಲ ಒಂದು ಸ್ಥಳಾಂತರದ ಕಥೆಯಲ್ಲ ಅದು ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಗಳನ್ನು ಮೀರಿ, ಭಾಷೆಗಳನ್ನು ಬೆಸೆದ ವಿಠ್ಠಲ ಸಂಸ್ಕೃತಿಯ ಪ್ರತೀಕ.
ಭೌಗೋಳಿಕವಾಗಿ ಕನ್ನಡ ನೆಲದಲ್ಲಿದ್ದು, ಕರ್ನಾಟಕದ ರಾಜರಿಂದ ಪೋಷಿಸಲ್ಪಟ್ಟು, ಕನ್ನಡಿಗರ ಭಕ್ತಿಯಲ್ಲಿ ಮಿಂದೆದ್ದ ಕಾರಣಕ್ಕಾಗಿಯೇ ಸಂತರು ವಿಠ್ಠಲನನ್ನು ಭಕ್ತಿಪೂರ್ವಕವಾಗಿ "ಕಾನಡಾ ರಾಜಾ" (ಕನ್ನಡದ ದೊರೆ) ಎಂದು ಕರೆದು ಕೊಂಡಾಡಿದ್ದಾರೆ.
#pandarapura #pundalika #vitobha #hampe #kanadaraja #kollapura #venkateshbhat #krishnadevaraya
Comments
Post a Comment