Skip to main content

Posts

Showing posts with the label Malabar plumb Indian origin and medicine value fruit

Blog 919. ನೇರಳೆ ಹಣ್ಣಿನ ಮೂಲ ಭಾರತ,ಅತಿ ಎತ್ತರ ನೂರು ಅಡಿ ಬೆಳೆಯುವ ಮತ್ತು ನೂರು ವರ್ಷ ಬಾಳುವ ಔಷದಿ ಗುಣ ಹೊಂದಿದ ನೇರಳೆ ಹಣ್ಣು

#ನೇರಳೇಹಣ್ಣು_ಭಾರತೀಯ_ಮೂಲದ_ಸಸ್ಯ. #ಪುರಾಣದಲ್ಲಿ_ನೇರಳೆಮರದ_ಉಲ್ಲೇಖಗಳಿದೆ #ಅತಿ_ಎತ್ತರ_ಬೆಳೆಯುವ_ನೂರು_ವರ್ಷ_ಬಾಳುವ_ಮರ ಈ ವರ್ಷ ನೇರಳೆ ಹಣ್ಣು ನಮ್ಮ ಭಾಗದಲ್ಲಿ ತು೦ಬಾ ಕಡಿಮೆ, ಶಿವಮೊಗ್ಗದಲ್ಲೂ ಮಾರಾಟಕ್ಕೆ ಬರುತ್ತಿದ್ದ ನೇರಳೆ ಈ ವರ್ಷ ಇಲ್ಲವೇ ಇಲ್ಲ ಅನ್ನಿಸಿತ್ತು.   ಮೊನ್ನೆ ಶಿವಮೊಗ್ಗದಲ್ಲಿ ದೂರದ ಬೆಳಗಾಂನ ಖಾನಾಪುರದವರು ನೇರಳೆ ಹಣ್ಣು ತಂದು ಮಾರಾಟ ಮಾಡಿದ್ದಾರೆ ಅವರಿಂದ ಕೆ.ಜಿ.ಗೆ 200 ರ೦ತೆ ನೇರಳೆ ಹಣ್ಣು ಖರೀದಿಸಿದೆ ಆದರೆ ಈ ನೇರಳೆ ಹಣ್ಣಿನಲ್ಲಿ ಕಳೆದ ವರ್ಷದ ರುಚಿ ಇಲ್ಲವೇ ಇಲ್ಲ.   ಮಲಬಾರ್ ಪ್ಲಮ್ / ಬ್ಲಾಕ್ ಪ್ಲಮ್ ಎಂದು ಇಂಗ್ಲೀಷ್ ನಲ್ಲಿ ಕರೆಯುವ ನೇರಳೆ ಮರ ಭಾರತದ ಮೂಲದ್ದು, ಗೌತಮ ಬುದ್ಧ ಈ ಮರದ ನೆರಳಲ್ಲಿ ಮೊದಲ ಜ್ಞಾನೋದಯ ಆಯಿತೆಂದು ಉಲ್ಲೇಖವಿದೆ ಹಾಗೆ ಶ್ರೀ ಕೃಷ್ಣ ಪರಮಾತ್ಮರೂ ಪುರಾಣದಲ್ಲಿ ಉಲ್ಲೇಖಿಸಿದ್ದಾರೆ.   ಅತಿ ಎತ್ತರ 100 ಅಡಿ ಎತ್ತರ ಬೆಳೆಯುವ ನೂರು ವರ್ಷ ಬಾಳುವ ಈ ಮರದಿಂದ ರೈಲ್ವೆ ಸ್ಲೀಪರ್ ಮಾಡುತ್ತಿದ್ದರು.    83% ನೀರು, 16% ಕಾರ್ಬೋಹೈಡ್ರೇಟ್ ಮತ್ತು 1% ವಿಟಮಿನ್ ಅಂಶ ಇರುವ ನೇರಳೆ ಹಣ್ಣು ಅನೇಕ ಔಷದಿ ಗುಣವೂ ಹೊಂದಿದೆ.