Blog 919. ನೇರಳೆ ಹಣ್ಣಿನ ಮೂಲ ಭಾರತ,ಅತಿ ಎತ್ತರ ನೂರು ಅಡಿ ಬೆಳೆಯುವ ಮತ್ತು ನೂರು ವರ್ಷ ಬಾಳುವ ಔಷದಿ ಗುಣ ಹೊಂದಿದ ನೇರಳೆ ಹಣ್ಣು
#ಪುರಾಣದಲ್ಲಿ_ನೇರಳೆಮರದ_ಉಲ್ಲೇಖಗಳಿದೆ
#ಅತಿ_ಎತ್ತರ_ಬೆಳೆಯುವ_ನೂರು_ವರ್ಷ_ಬಾಳುವ_ಮರ
ಈ ವರ್ಷ ನೇರಳೆ ಹಣ್ಣು ನಮ್ಮ ಭಾಗದಲ್ಲಿ ತು೦ಬಾ ಕಡಿಮೆ, ಶಿವಮೊಗ್ಗದಲ್ಲೂ ಮಾರಾಟಕ್ಕೆ ಬರುತ್ತಿದ್ದ ನೇರಳೆ ಈ ವರ್ಷ ಇಲ್ಲವೇ ಇಲ್ಲ ಅನ್ನಿಸಿತ್ತು.
ಮೊನ್ನೆ ಶಿವಮೊಗ್ಗದಲ್ಲಿ ದೂರದ ಬೆಳಗಾಂನ ಖಾನಾಪುರದವರು ನೇರಳೆ ಹಣ್ಣು ತಂದು ಮಾರಾಟ ಮಾಡಿದ್ದಾರೆ ಅವರಿಂದ ಕೆ.ಜಿ.ಗೆ 200 ರ೦ತೆ ನೇರಳೆ ಹಣ್ಣು ಖರೀದಿಸಿದೆ ಆದರೆ ಈ ನೇರಳೆ ಹಣ್ಣಿನಲ್ಲಿ ಕಳೆದ ವರ್ಷದ ರುಚಿ ಇಲ್ಲವೇ ಇಲ್ಲ.
ಮಲಬಾರ್ ಪ್ಲಮ್ / ಬ್ಲಾಕ್ ಪ್ಲಮ್ ಎಂದು ಇಂಗ್ಲೀಷ್ ನಲ್ಲಿ ಕರೆಯುವ ನೇರಳೆ ಮರ ಭಾರತದ ಮೂಲದ್ದು, ಗೌತಮ ಬುದ್ಧ ಈ ಮರದ ನೆರಳಲ್ಲಿ ಮೊದಲ ಜ್ಞಾನೋದಯ ಆಯಿತೆಂದು ಉಲ್ಲೇಖವಿದೆ ಹಾಗೆ ಶ್ರೀ ಕೃಷ್ಣ ಪರಮಾತ್ಮರೂ ಪುರಾಣದಲ್ಲಿ ಉಲ್ಲೇಖಿಸಿದ್ದಾರೆ.
ಅತಿ ಎತ್ತರ 100 ಅಡಿ ಎತ್ತರ ಬೆಳೆಯುವ ನೂರು ವರ್ಷ ಬಾಳುವ ಈ ಮರದಿಂದ ರೈಲ್ವೆ ಸ್ಲೀಪರ್ ಮಾಡುತ್ತಿದ್ದರು.
Comments
Post a Comment