Blog number 910. ಚಾರ್ ದಾಮ್ ಯಾತ್ರೆಯ ಪುರಿ ಜಗನ್ನಾಥ ಮಂದಿರದ ಬಲಭದ್ರ - ಸುಭದ್ರ- ಜಗನ್ನಾಥರ ಅಪೂರ್ಣ ಕಟ್ಟಿಗೆ ವಿಗ್ರಹಕ್ಕೆ ಕಾರಣ? ಈ ವರ್ಷದ ರಥಯಾತ್ರೆ 145ನೆ ರಥ ಯಾತ್ರೆ, ಕಟಕ್ ನ ಉದ್ದಿಮೆದಾರರು ನನ್ನ ಹೊಸ ಲಾಡ್ಜ್ ನಿರ್ಮಾಣದ ಸಂದರ್ಭ ಶುಭ ಹಾರೈಸಿ ನೀಡಿದ ವಿಗ್ರಹ ಇವತ್ತು ನನ್ನ ಆಪೀಸಿನಲ್ಲಿ.
#ಈ_ಸುದ್ದಿ_ಕೇಳಿ_ನೆನಪಾಗಿದ್ದು_ಪುರಿಯ_ಗೆಳೆಯರು_ನೀಡಿದ್ದ_ಬಲಭದ್ರ_ಸುಭದ್ರ_ಜಗನ್ನಾಥ_ವಿಗ್ರಹ.
#ಹೊಸಲಾಡ್ಜ್_ನಿರ್ಮಾಣದ_ಸಂದರ್ಭದಲ್ಲಿ_ಶುಭಹಾರೈಸಿ_ನೀಡಿದ್ದು_ಮರೆತು_ಬಿಟ್ಟಿದ್ದೆ.
#ಹೊಸಲಾಡ್ಜ್_ಪ್ರಾರಂಬಿಸಿ_ಮೂರು_ವರ್ಷದ_ನಂತರ_ಪುರಿಯ_ಬಲಭದ್ರ_ಸುಭದ್ರ_ಜಗನಾಥರು_ನನ್ನ_ಕಛೇರಿಗೆ
#ಇದನ್ನು_ನೀಡಿದ_ಕಟಕ್_ಜಗನ್ನಾಥಾ_ಪಾಲಿಮರ್_ಸಂಸ್ಥೆ
#ಶ್ರೀ_ಸರೋಜ್_ಸುಬುದ್ದಿ_ಮತ್ತು_ಅವರ_ಆಪ್ತಕಾಯ೯ದರ್ಶಿ_ಸದಾನಂದ_ಜೇನಾ_ನೆನಪಾದರು
ಕೊರಾನಾ ಕಾಲದಲ್ಲಿ ಎರೆಡು ವರ್ಷ ಭಾರತೀಯ ಹಿಂದೂ ದರ್ಮಿಯರ ಚಾರ್ ದಾಮ್ ಯಾತ್ರೆಯ ಪುರಿ ಜಗನ್ನಾಥ ರಥ ಯಾತ್ರೆ ನಡೆದಿರಲಿಲ್ಲ, ಪ್ರತಿ ವರ್ಷ ಅಕ್ಷಯ ತದಿಗೆ ದಿನ ಬಲಭದ್ರ , ಸುಭದ್ರ ಮತ್ತು ಜಗನ್ನಾಥರ ಮೂರು ಪ್ರತ್ಯೇಕ ಮರದ ರಥ ಹೊಸದಾಗಿ ತಯಾರಿಸುತ್ತಾರೆ.
45 ಅಡಿ ಎತ್ತರದ 35 ಚದರಡಿಯ ಈ ಕಟ್ಟಿಗೆಯ ರಥಕ್ಕೆ ಒಂದೇ ಒಂದು ಮಳೆ ಬಳಸುವುದಿಲ್ಲ!, ಪ್ರತಿ ವರ್ಷ ಆಷಾಡ ಶುಕ್ಲ ಪಕ್ಷದ ಎರಡನೆ ದಿನ ಈ ರಥ ಯಾತ್ರೆ ನಡೆಯುತ್ತದೆ.
ಪುರಿ ಜಗನ್ನಾಥ ಮಂದಿರದಿಂದ 3 ಕಿ.ಮಿ.ದೂರದ ಜಗನ್ನಾಥನ ಚಿಕ್ಕಮ್ಮನ ಮನೆ (ಗುಂಡಿಜಾ)ಗೆ ಶ್ರೀ ಕೃಷ್ಣ ಮತ್ತು ಬಲರಾಮರು ತನ್ನ ತಂಗಿ ಸುಭ್ರದ್ರಾ ಜೊತೆ ಹೋಗಿ 7 ದಿನ ಅಲ್ಲಿದ್ದು ಅವರ ರಥಗಳೂ ಅಲ್ಲೇ ಇದ್ದು, 8 ನೇ ದಿನ ತಿರುಗಿ ಬರುತ್ತದೆ.
ಈ ವರ್ಷ ಮೊನ್ನೆ ಅಂದರೆ 1 - ಜುಲೈ -2022 ರಂದು ಪ್ರಖ್ಯಾತ ಜಗನ್ನಾಥ ರಥಯಾತ್ರೆ ಪ್ರಾರಂಭ ಆಯಿತು ಬಹುಶಃ ದೇವರು ಚಿಕ್ಕಮ್ಮನ ಮನೆಯಿಂದ ಇವತ್ತು ವಾಪಾಸು ಬರುವ ದಿನ, ಮೊನ್ನೆ ಮೊದಲ ದಿನ ರಥ ಯಾತ್ರೆಯಲ್ಲಿ ಬಾಗವಹಿಸಿದ ಜನಸ್ತೋಮ 10 ಲಕ್ಷಕ್ಕೂ ಹೆಚ್ಚು ಎಂಬ ವರದಿಗಳು ನೋಡಿದಾಗಲೇ ನನಗೆ ನೆನಪಾಗಿದ್ದು ಬಲಭದ್ರ - ಸುಭದ್ರ- ಜಗನ್ನಾಥರ ಕಟ್ಟಿಗೆ ವಿಗ್ರಹ.
2018ರಲ್ಲಿ (8- ಮಾರ್ಚ್ - 2018) ನನ್ನ ಹೊಸ ಲಾಡ್ಜ್ ಪೌಂಡೇಶನ್ ಕೆಲಸ ಪ್ರಾರಂಬಿಸಿದಾಗ ಒರಿಸ್ಸಾದ ಕಟಕ್ ನ ಜಗನ್ನಾಥ ಪಾಲಿಮರ್ ಪ್ರೈ.ಲಿ (ಪ್ಲಾಸ್ಟಿಕ್ ಪ್ಯಾಕೆಜಿಂಗ್ ಮೆಟರಿಯಲ್ ಉತ್ಪಾದಕರು) ರಸಗೊಬ್ಬರ ಸಂಸ್ಥೆಗಳಿಗೆ ಪ್ಲಾಸ್ಟಿಕ್ ಚೀಲ ಸರಬರಾಜುದಾರರಾದ ಸರೋಜ್ ಕುಮಾರ್ ಸುಬುದ್ದಿ ನನಗೆ ಶುಭ ಹಾರೈಸಿ ಅವರ ಆಪ್ತ ಕಾರ್ಯದರ್ಶಿ ಸದಾನಂದ ಜೆನಾರ ಹತ್ತಿರ ಪುರಿ ಜಗನ್ನಾಥರ ಮರದ ವಿಗ್ರಹ ಕಳಿಸಿದ್ದು ಸ್ವೀಕರಿಸಿದ್ದೆ ಅವರೆಲ್ಲರ ಹಾರೈಕೆಯಿಂದ 2019 ರಿಂದ ಮೊದಲ ಭಾಗ ಪೂರೈಸಿ ಹೊಸಲಾಡ್ಜ್ ವ್ಯವಹಾರ ಪ್ರಾರಂಬಿಸಿದ್ದರೂ ಅವರು ನೀಡಿದ ವಿಗ್ರಹಗಳು ಲಾಡ್ಜ್ ಲ್ಲಿ ಡಲು ಮರೆತಿದ್ದೆ.
ನಿನ್ನೆ ಈ ವಿಗ್ರಹ ಕಛೇರಿಗೆ ಬಂದಿದೆ, ಇದಕ್ಕೆ ಗಾಜಿನ ಬಾಕ್ಸ್ ಮಾಡಿಸಬೇಕು ಇವತ್ತು ಕಟಕ್ ಗೆ ಪೋನು ಮಾಡಿ ತಿಳಿಸಿದೆ ಕೂಡ.
ಪುರಿ ಜಗನ್ನಾಥ ಮಂದಿರದ ಬಲಭದ್ರ - ಸುಭದ್ರ- ಜಗನಾಥರ ವಿಗ್ರಹ ಲೋಹ ಅಥವ ಶಿಲೆಯದ್ದು ಅಲ್ಲ ಅದು ಕಟ್ಟಿಗೆಯಿಂದ ಮಾಡಿದ್ದು ಮತ್ತು ಈ ವಿಗ್ರಹಗಳಿಗೆ ಕಿವಿ ಇಲ್ಲ, ಕಾಲಿಲ್ಲ, ಕಣ್ಣಿನ ಜಾಗದಲ್ಲಿ ದೊಡ್ಡ ವರ್ತುಲ, ಮುರಿದ ಕೈ ಮಾತ್ರ ಇದೆ ಇದಕ್ಕೆ ಪುರಾಣದ ಉಲ್ಲೇಖ ಏನೆಂದರೆ ಸ್ವತಃ ವಿಷ್ಣುವೇ (ಇನ್ನೊಂದು ಕಥೆಯಲ್ಲಿ ಸ್ವತಃ ವಿಶ್ವಕರ್ಮ ಅನ್ನುತ್ತದೆ) ಈ ಶಿಲ್ಪಿಯ ಅವತಾರದಲ್ಲಿ ಬಂದು ವಿಗ್ರಹ ರಚಿಸುವ ಕೆಲಸ ವಹಿಸಿಕೊಳ್ಳುತ್ತಾರೆ ಆದರೆ ಅವರದ್ದೊಂದು ಕರಾರು ಇರುತ್ತದೆ ಏನೆಂದರೆ ಕೆಲಸ ಪೂರ್ಣ ಮಾಡಿ ಹೊರಬರುವ ತನಕ ಯಾರು ಒಳ ಪ್ರವೇಶ ಮಾಡಬಾರದು ಎಂಬುದು.
ಒಳ ಹೊಕ್ಕಿದ ಶಿಲ್ಪಿ ಕೆಲ ದಿನವಾದರೂ ಹೊರ ಬರದೇ ಇರುವುದು ಮತ್ತು ಕೆತ್ತನೆ ಕೆಲಸದ ಶಬ್ದ ಕೂಡ ಕೇಳದ್ದರಿಂದ ರಾಣಿ ಶಿಲ್ಪಿ ಒಳಗಡೆ ಮೃತನಾಗಿರಬೇಕೆಂಬ ಅನುಮಾನ ವ್ಯಕ್ತಪಡಿಸಿದ್ದರಿಂದ ರಾಜ ಒಳ ಪ್ರವೇಶ ಮಾಡಿದ್ದರಿಂದ ಶಿಲ್ಪಿ ರೂಪದ ವಿಷ್ಣು (ಅಥವ ವಿಶ್ವಕರ್ಮ) ವಿಗ್ರಹ ಅಪೂರ್ಣ ಮಾಡಿ ಹೋಗುತ್ತಾರೆ ನಂತರ ವಿಷ್ಣುವೇ ರಾಜನಿಗೆ ಅಪೂರ್ಣ ವಿಗ್ರಹವನ್ನೇ ಪ್ರತಿಷ್ಟಾಪಿಸಲು ಹೇಳಿದಂತೆ ಪ್ರತಿಷ್ಟಾಪನೆ ಆಯಿತು ಪ್ರತಿ 12 ಅಥವ 19 ವರ್ಷಕ್ಕೆ ಮೂಲ ಸ್ವರೂಪದಲ್ಲಿ ಹೊಸ ವಿಗ್ರಹ ಪುನರ್ ಪ್ರತಿಷ್ಟಾಪನೆ ಮಾಡುತ್ತಾರೆ.
ಕ್ರಿ.ಶ.1174ರಲ್ಲಿ ರಾಜ ಚೋಡಗಂಗಾ ಈ ದೇವಾಲಯ ಮೂಲ ಸ್ಥಳದಲ್ಲೇ ಹೊಸದಾಗಿ ನಿಮಿ೯ಸುತ್ತಾರೆ, ಇದು ಪುರಾಣ ಕಾಲದಲ್ಲಿ ಮಾಳವ ರಾಜ ನಿರ್ಮಿಸಿದ ಎಂಬ ಉಲ್ಲೇಖವೂ ಇದೆ.
ಇಲ್ಲಿನ ದೇವರ ಆರಾದನೆಗಳೂ ಬಿನ್ನ ಇಲ್ಲಿನ ದೇವರ ಪ್ರಸಾದ ತಯಾರಿಸುವ ಅಡುಗೆ ಮನೆ ವಿಶ್ವದಲ್ಲೇ ಅತ್ಯಂತ ದೊಡ್ಡದು, ಇಲ್ಲಿನ ಮಹಾಪ್ರಸಾದ 7 ಮಣ್ಣಿನ ಪಾತ್ರೆಯಲ್ಲಿಯೇ ತಯಾರಿಸುತ್ತಾರೆ, ನೈವೇದ್ಯ -ವಿತರಣೆಗಳು ಮರದ ಪಾತ್ರೆಯಲ್ಲಿ.
ಪ್ರತಿ ಬೇಸಿಗೆಯಲ್ಲಿ ದೇವರಿಗೆ ತಣ್ಣೀರು ಸ್ನಾನ, ಮಾವಿನ ಹಣ್ಣಿನ ನೈವೇದ್ಯ ಮಾಡುತ್ತಾರೆ ಇದರಿಂದ ದೇವರಿಗೆ ಜ್ವರ- ನೆಗಡಿ ಬರುವುದು ಆಗ 15 ದಿನ ದೇವರ ವಿಗ್ರಹ ರಹಸ್ಯ ಸ್ಥಾನದಲ್ಲಿರಿಸಿ ಜ್ವರ- ನೆಗಡಿ ನಿವಾರಣೆ ಪದಾರ್ಥ - ಗಿಡಮೂಲಿಕೆ ನೈವೇದ್ಯ ಮಾಡುವ ಪರಂಪರೆ ಇಲ್ಲಿಯದು ಈ ಸಂದಭ೯ದಲ್ಲಿ ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ.
ಚಾರ್ ದಾಮ್ ಯಾತ್ರೆ ರಾಮೇಶ್ವರ, ಬದ್ರಿನಾಥ, ದ್ವಾರಕ ಮತ್ತು ಪುರಿ ಜಗನ್ನಾಥ ಸೇರಿದೆ ಆದ್ದರಿಂದ ಇಲ್ಲಿಗೆ ಬರುವ ಭಕ್ತಾದಿಗಳು ಲಕ್ಷ - ಲಕ್ಷ, ಈ ವರ್ಷದ ರಥಯಾತ್ರೆ 145 ನೇ ರಥ ಯಾತ್ರೆ, ಇಲ್ಲಿನ ಭದ್ರತೆಗೆ ಈ ವರ್ಷ ಒರಿಸ್ಸಾ ಸಕಾ೯ರ ನಿಯೋಜಿಸಿದ ಭದ್ರತಾ ಸಿಬ್ಬಂದಿ ಸಂಖ್ಯೆ 25 ಸಾವಿರಕ್ಕೂ ಹೆಚ್ಚು.
ಹೀಗೆ ಪುರಿ ಜಗನ್ನಾಥ ಮಂದಿರದ ವಿಗ್ರಹಗಳ ಮಾದರಿ (ಕಟ್ಟಿಗೆಯದ್ದು) ನನಗೆ ನೀಡಿದ್ದು ಕಛೇರಿಯಲ್ಲಿಡುವುದು ಮರೆತದ್ದು 145 ನೇ ಪುರಿ ಜಗನ್ನಾಥ ರಥಯಾತ್ರೆಯ 8ನೇ ದಿನ ದೇವರುಚಿಕ್ಕಮ್ಮನ ಮನೆಯಿಂದ ವಾಪಾಸು ಬರುವ ದಿನ ನನ್ನ ಕಛೇರಿಗೆ ಬಂದಿದ್ದು ನನಗೊಂದು ಶುಭ ಶಕುನವಾಗಿದೆ.
ಶುಭ ಹಾರೈಸಿ ವಿಗ್ರಹ ನೀಡಿದ ಸರೋಜ್ ಕುಮಾರ್ ಸುಬುದ್ದಿ ಮತ್ತು ದೂರದಿಂದ ನನಗೆ ತಲುಪಿಸಿದ ಅವರ ಆಪ್ತ ಸದಾನಂದ ಜೇನಾರ ಕುಟು೦ಬಕ್ಕೆ ಕೃತಜ್ಞತೆ ಹಾರೈಸುತ್ತೇನೆ.
Comments
Post a Comment