Blog number 915. ಸ್ಥಳಿಯ ಮತ್ತು ಆಯಾ ಊರಿನ ಸಮೀಪದ ಪ್ರವಾಸಿ ತಾಣಗಳ ಮಾಹಿತಿ ಕೈಪಿಡಿ ಆಯಾ ಊರುಗಳ ಉಪಹಾರ ಮತ್ತು ವಸತಿ ಗೃಹಗಳ ಮಾಲಿಕರು ತಮ್ಮಲ್ಲಿಗೆ ಬರುವ ಪ್ರವಾಸಿಗಳಿಗೆ ನೀಡಿ ಪ್ರವಾಸೋದ್ಯಮ ಅಭಿವೃದ್ದಿಗೆ ಕೈ ಜೋಡಿಸಬಹುದು.
#ನಮ್ಮ_ಲಾಡ್ಜ್_ಕೇಂದ್ರವಾಗಿಸಿ_ಸಮೀಪದ_ಪ್ರವಾಸಿತಾಣಗಳ_ಕೈಪಿಡಿ.
#ಸಮೀಪದ_50_ಕೀಮಿ_ಒಳಗಿನ_50ರಿಂದ_100ಕಿಮಿ_ಮತ್ತು_100ಕಿಮಿ_ನಂತರದ_ಪ್ರವಾಸಿಕೇಂದ್ರ_ಗುರುತಿಸಿದೆ.
#ಸ್ಥಳಿಯ_ಲಾಡ್ಜ್_ರೆಸ್‌ಟೋರೆಂಟಲ್ಲಿ_ಇದು_ಪ್ರವಾಸಿಗಳಿಗೆ_ಉಚಿತವಾಗಿ_ಸುಲಭವಾಗಿ_ಸಿಗುವಂತಾಗಬೇಕು.
ನಮ್ಮ ನಮ್ಮ ಊರ ಸಮೀಪದಲ್ಲಿ ಏನಿದೆ ಎಂಬುದು ನಮಗೆ ಗೊತ್ತಿರುತ್ತದೆ ಆದರೆ ದೂರದಿಂದ ಪ್ರವಾಸ ಬಂದವರಿಗೆ ಇದು ಗೊತ್ತಿರುವುದಿಲ್ಲ ಆದರೆ ಅವರಿಗೆ ನಾವು ಸುಲಭವಾಗಿ ಈ ಮಾಹಿತಿ ನೀಡುವ ಕೈಪಿಡಿ ಅಚ್ಚುಹಾಕಿಸಿ ಆಸಕ್ತರಿಗೆ ಸಿಗುವಂತೆ ಮಾಡುವ ಕೆಲಸ ಆಯಾ ಊರಿನ ಲಾಡ್ಜ್ ಮತ್ತು ರೆಸ್ಟೋರೆಂಟ್ ಗಳು ಮಾಡಬೇಕು ಯಾಕೆಂದರೆ ಪ್ರವಾಸಿಗಳು ತಮ್ಮ ವಸತಿ ಮತ್ತು ಆಹಾರಕ್ಕೆ ಈ ಕೇಂದ್ರಗಳನ್ನೆ ಅವಲಂಬಿಸುತ್ತಾರೆ.
ನಮ್ಮ ಲಾಡ್ಜ್ #ಹೊಂಬುಜ_ರೆಸಿಡೆನ್ಸಿ ಮತ್ತು ಹೊಸ ಬ್ಲಾಕ್ #ಹೊಂಬುಜ_ಗಾರ್ಡನೀಯ, ಸಸ್ಯ ಹಾರಿ #ಮಲ್ಲಿಕಾ_ವೆಜ್ ರೆಸ್ಟೋರೆಂಟ್,#ಚಂಪಕಾ_ಪ್ಯಾರಾಡೈಸ್ ನಾನ್ ವೆಜ್ ಹೋಟೆಲ್,#ಕೃಷ್ಣ_ಸರಸ_ಕನ್ವೆನ್ಷನ್_ಹಾಲ್ ಮತ್ತು #ವಿಕ್ಟೋರಿಯಾ_ಕಾಟೇಜ್,ಶಿರೋದಾರ_ಚಿಕಿತ್ಸಾ_ಕೇಂದ್ರಗಳು ಶಿವಮೊಗ್ಗದಿಂದ ಜೋಗ್ ಫಾಲ್ಸ್ ಮಾರ್ಗದಲ್ಲಿ 50 ಕಿ.ಮಿ.ದೂರದ ಆನಂದಪುರಂನ ಪ್ರಾರಂಭದಲ್ಲಿ ಸಿಗುವ #ಯಡೇಹಳ್ಳಿ_ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ 206 ನಲ್ಲಿ ಎಡ ಬಾಗದಲ್ಲಿ ವಿಶಾಲವಾದ ಪಾರ್ಕಿಂಗ್, ಆರೋಗ್ಯಕರ ಸ್ವಚ್ಚತೆಯನ್ನು 24X7 ಕಾಪಾಡಿರುವ ಶೌಚಾಲಯ ವ್ಯವಸ್ಥೆ (ಮಹಿಳೆಯರಿಗೆ ಪ್ರತ್ಯೇಕವಾಗಿದೆ) ಇರುವ ರೆಸ್ಟೋರೆಂಟ್ ಗಳು, AC & Non AC ಸುಸಜ್ಜಿತ ರೂಂ ಗಳ ಲಾಡ್ಜ್ ಇದೆ.
ಇಲ್ಲಿಂದ 50 ಕಿ.ಮಿ. ಜೋಗ ಜಲಪಾತವಿದೆ ಅನೇಕ ಪ್ರವಾಸಿ ತಾಣಗಳ ಕೈಪಿಡಿ ತಯಾರಿಸಿದ್ದೇವೆ ಇದರಲ್ಲಿ ಮೂರು ಭಾಗಗಳಿವೆ, 50 ಕಿ.ಮಿ. ಒಳಗಿನ ಸಮೀಪದ ಪ್ರವಾಸಿ ತಾಣ, 50 ಕಿ.ಮಿ ನಂತರ 100 ಕಿ.ಮಿ. ಒಳಗಿನ ಪ್ರವಾಸಿ ಕೇಂದ್ರಗಳು ಮತ್ತು 100 ಕಿ.ಮಿ. ನಂತರದ ತಾಣಗಳ ಮಾಹಿತಿ ಇದರಲ್ಲಿದೆ.
ಅವರದೇ ವಾಹನಗಳಲ್ಲಿ ಈ ಸ್ಥಳಗಳಿಗೆ ಹೋಗಿ ಬರಬಹುದು ಅಥವ ನಮ್ಮ ಟ್ರಾವೆಲರ್ ಡೆಸ್ಕ್ ನಲ್ಲಿ ಎಲ್ಲಾ ರೀತಿಯ ವಾಹನ ಬಾಡಿಗೆಗೆ ದೊರೆಯುತ್ತದೆ ಅದನ್ನು ಬಳಸಿಕೊಳ್ಳಬಹುದು.
Comments
Post a Comment