Blog number 926. ಶಿವಮೊಗ್ಗದ ಮಾಜಿ ವಿದಾನ ಪರಿಷತ್ ಸದಸ್ಯರಾದ ಆರ್.ಪ್ರಸನ್ನ ಕುಮಾರ್ ಮತ್ತು ಇವರ ತಂದೆ ಹಿರಿಯ ಕಾಂಗ್ರೇಸ್ ಮುಖಂಡರಾಗಿದ್ದ ಟಿ.ರಾಮಪ್ಪನವರು ಇಬ್ಬರೂ ಶಿವಮೊಗ್ಗದ ಮುನ್ಸಿಪಾಲಿಟಿ ಅಧ್ಯಕ್ಷರಾಗಿದ್ದ ರಾಜಕಾರಣದ ದಾಖಲೆ.
#ತಮ್ಮ_ಪುತ್ರನ_ವಿವಾಹ_ಆಹ್ವಾನಪತ್ರಿಕೆ_ನೀಡಲು_ಬಂದಿದ್ದರು.
#ಇವರ_ತಂದೆ_ಟಿ_ರಾಮಪ್ಪನವರು_ಬದರಿನಾರಾಯಣಯ್ಯಂಗಾರರ_ಚುನಾವಣೆಗಳನ್ನು_ಮಾಡಿದವರು
#ಶಿವಮೊಗ್ಗ_ಜಿಲ್ಲಾ_ವಿದ್ಯಾರ್ಥಿಕಾಂಗ್ರೇಸ್_ಯುವಕಾಂಗ್ರೇಸ್_ಜಿಲ್ಲಾಕಾಂಗ್ರೇಸ್_ಮುನ್ಸಿಪಲ್_ಕೌನ್ಸಿಲರ್
#ಶಿವಮೊಗ_ಭದ್ರಾವತಿ_ಕಾಪೋ೯ರೇಷನ್_ಕಾಪೋ೯ರೇಟರ್_ವಿದಾನಪರಿಷತ್_ಸದಸ್ಯರೂ_ಆದವರು
#ತಂದೆ_ಮಗ_ಇಬ್ಬರೂ_ಶಿವಮೊಗ್ಗ_ಮುನ್ಸಿಪಲ್_ಅಧ್ಯಕ್ಷರಾಗಿದ್ದು_ದಾಖಲೆ
ಆರ್. ಪ್ರಸನ್ನಕುಮಾರ್ ಶಿವಮೊಗ್ಗದ ಪ್ರತಿಷ್ಠಿತ ಕುಟುಂಬ ಟಿ.ರಾಮಪ್ಪರವರ ಪುತ್ರ, ಇವರ ಸಹೋದರ ಐಪಿಎಸ್ ಮಾಡಿ ಬೆಂಗಳೂರಲ್ಲಿ ಡಿಐಜಿ ಆಗಿದ್ದಾರೆ.
ಕಾಂಗ್ರೇಸ್ ಪಕ್ಷದ ನಿಷ್ಟಾವಂತ ಕುಟುಂಬ ಇವರದ್ದು, ಇವರ ತಂದೆ 1967ಮತ್ತು 1972ರಲ್ಲಿ ಆನಂದಪುರಂನ ಬದರಿನಾರಾಯಣ ಅಯ್ಯಂಗಾರ್ ಅವರನ್ನು ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದಿಂದ ಆಯ್ಕೆ ಮಾಡುವಲ್ಲಿ ಇವರೆಲ್ಲರ ಸಹಾಯ ಮತ್ತು ಸಹಕಾರ ಇತ್ತು.
ಟಿ.ರಾಮಪ್ಪನವರು ಶಿವಮೊಗ್ಗದ ಗೋಪಿ ವೃತ್ತದ ಸಮೀಪದ ಸಹ್ಯಾದ್ರಿ ಪೆಟ್ರೋಲ್ ಬಂಕ್ ಮಾಲಿಕರು, ಟಿಂಬರ್ ಗುತ್ತಿಗೆದಾರರಾಗಿದ್ದರು.
ಶಿವಮೊಗ್ಗದ ಮುನ್ಸಿಪಲ್ ಅಧ್ಯಕ್ಷರಾಗಿದ್ದರು, ರಾಜ್ಯದ ಹಿರಿಯ ಕಾಂಗ್ರೇಸ್ ನಾಯಕರಾಗಿದ್ದ ಮಂತ್ರಿಗಳಾಗಿದ್ದ ಬಸಲಿಂಗಪ್ಪರ ಖಾಸಾ ಖಾಸಾ ಮಿತ್ರರು ಇವರಿಬ್ಬರು ಸೇರಿ ಶಿವಮೊಗ್ಗದಲ್ಲಿ ಸ್ಥಾಪಿಸಿದ ಡಾ.ಅಂಬೇಡ್ಕರ್ ಮಿಷನ್ ವಿದ್ಯಾ ಸಂಸ್ಥೆ ಪ್ರಸಿದ್ಧ ವಿದ್ಯಾ ಸಂಸ್ಥೆ ಆಗಿದೆ.
ಆ ಕಾಲದಲ್ಲಿ ಬದರಿನಾರಾಯಣ ಅಯ್ಯಂಗಾರರಿಗೆ ಶಿವಮೊಗ್ಗದ ಮುಂದಾಳುಗಳಾದ ಆನಪ್ಪ,ಕೆಂಜಿಗಪ್ಪ, ಎಸ್.ವಿ.ತಿಮ್ಮಯ್ಯ ಮತ್ತು ಟಿ.ರಾಮಪ್ಪರ ಸಿಂಡಿಕೇಟ್ ಬದರಿನಾರಾಯಣರ ಸತತ ಗೆಲುವಿಗೆ ಕಾರಣವಾಗಿತ್ತು.
ಆರ್. ಪ್ರಸನ್ನ ಕುಮಾರ್ ರವರು ಬಿಕಾಂ ಪದವಿದರರು, ಕಾನೂನು ಪದವಿ ವ್ಯಾಸಂಗ ಮಧ್ಯದಲ್ಲೇ ಬಿಡುತ್ತಾರೆ, ಶಿವಮೊಗ್ಗ ಜಿಲ್ಲಾ ವಿದ್ಯಾರ್ಥಿ ಕಾಂಗ್ರೇಸ್, ಯುವ ಕಾಂಗ್ರೇಸ್ ಸಂಘಟನೆಯಲ್ಲಿ ಮುಂಚೂಣಿಯಾಗಿ ಗುರುತಿಸಿಕೊಳ್ಳುತ್ತಾರೆ.
ನಂತರ ಶಿವಮೊಗ್ಗ ಮುನ್ಸಿಪಲ್ ಕೌನ್ಸಿಲರ್ ಆಗುತ್ತಾರೆ, ಶಿವಮೊಗ್ಗ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗುತ್ತಾರೆ ಆಗ ಬಂಗಾರಪ್ಪನವರು ಶಿವಮೊಗ್ಗ ಮುನ್ಸಿಪಾಲಿಟಿ ರದ್ದು ಮಾಡಿ ಶಿವಮೊಗ್ಗ - ಭದ್ರಾವತಿ ಜಂಟಿ ನಗರಸಭೆ ಮಾಡಿ ಮಲ್ಲಿಕಾರ್ಜುನ್ ರಾವ್ ರನ್ನು ಮೇಯರ್ ಮಾಡಿದಾಗ ಆರ್. ಪ್ರಸನ್ನ ಕುಮಾರ್ ಕಾರ್ಪೋರೇಟರ್ ಆಗುತ್ತಾರೆ ಆಗ ಮಲ್ಲಿಕಾರ್ಜುನ್ ರಾವ್ ಗೆ ಬಲಗೈ ಆಗಿದ್ದವರು ಈ ಪ್ರಸನ್ನ ಕುಮಾರ್ ಆಗ ನಡೆದ ಲೋಕ ಸಭಾ ಚುನಾವಣೆಯಲ್ಲಿ ಮಲ್ಲಿಕಾಜು೯ನ್ ರಾವ್ ಸ್ಪರ್ದೆಗೆ ಟಿಕೇಟ್ ಗಾಗಿ ಇವರೆಲ್ಲ ಒಂದಾಗಿ ಪ್ರಯತ್ನಿಸುತ್ತಾರೆ ಆದರೆ ಕೊನೆಗಳಿಗೆಯಲ್ಲಿ ಬಂಗಾರಪ್ಪ ತಮ್ಮ ಪತ್ನಿಯ ಸಹೋದರಿ ಪತಿ (ಷಡಕ) ಕೆ.ಜಿ. ಶಿವಪ್ಪರಿಗೆ ಟಿಕೇಟ್ ಕೊಟ್ಟು ಗೆಲ್ಲಿಸುತ್ತಾರೆ.
ನಂತರ ಇನ್ನೊಮ್ಮೆ ಶಿವಮೊಗ್ಗ ಮುನ್ಸಿಪಾಲಿಟಿಗೆ ಸ್ಪರ್ದಿಸಿ ಗೆದ್ದು ಅಧ್ಯಕ್ಷರಾಗುತ್ತಾರೆ ಪ್ರಸನ್ನ ಕುಮಾರ್, ತಂದೆ ಮತ್ತು ಮಗ ಇಬ್ಬರೂ ಶಿವಮೊಗ್ಗದ ಮುನ್ಸಿಪಾಲಿಟಿ ಅದ್ಯಕ್ಷರಾಗಿರುವ ಮುರಿಯಲಾಗದ ದಾಖಲೆ ಇವರ ಹೆಸರಲ್ಲಿದೆ.
ನಂತರ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿ ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಪಕ್ಷದ ನೂತನ ಕಛೇರಿ ಕಟ್ಟಡ ನಿರ್ಮಾಣ ಮಾಡಿದ್ದಾರೆ.
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ಶಿವಮೊಗ್ಗ ಜಿಲ್ಲೆಯ ಸ್ಥಳಿಯ ಸಂಘ ಸಂಸ್ಥೆಗಳಿಂದ ವಿದಾನ ಪರಿಷತ್ ಸದಸ್ಯರಾಗಿ ಆಯ್ಕೆ ಆಗಿದ್ದರು ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯ ಅಲೆಯಲ್ಲಿ ಮಾಜಿ ಮಂತ್ರಿ ಡಿ.ಹೆಚ್.ಶಂಕರ್ ಮೂರ್ತಿಯವರ ಪುತ್ರ ಅರುಣ್ ಇವರ ಎದರು ಜಯಗಳಿಸಿದರು.
ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೇಸ್ ಸ್ಥಾನಿಕ ಚುನಾವಣೆಯ ಡಿಸ್ಟ್ರಿಕ್ ರಿಟರ್ನಿಂಗ್ ಆಫೀಸರ್ ಆಗಿ ಜವಾಬ್ದಾರಿ ವಹಿಸಿದ್ದಾರೆ.
ತಮ್ಮ ದ್ವಿತಿಯ ಪುತ್ರ ಸೂರಜ್ ವಿವಾಹ ಆಹ್ವಾನ ಪತ್ರಿಕೆ ನೀಡಲು ಇವರ ಜಿಗಣಿ ದೋಸ್ತ್ ಶಿವಮೊಗ್ಗ ಜಿಲ್ಲಾ ಪಂಚಾಯತ್ ನ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಜೊತೆ ಬಂದಿದ್ದರು, ಇವರಿಬ್ಬರೂ ನನ್ನ ಪೋಸ್ಟ್ ನಿರಂತರವಾಗಿ ನೋಡುತ್ತಾರೆ ಹಾಗಾಗಿ ಅನೇಕ ವಿಚಾರಗಳ ಮಾತಾಡಿದೆವು.
ಇವರು 1967ಮತ್ತು 1972ರ ಬದರಿನಾರಾಯಣರ ಚುನಾವಣೆ ನೋಡಿದ, ಕೆಲಸ ಮಾಡಿದ ನೆನಪುಗಳ ಪುನರ್ ನೆನಪಿಸಿಕೊಂಡರು, ನನ್ನ ಮುಂದಿನ ಪುಸ್ತಕ #ಆನಂದಪುರಂ_ಇತಿಹಾಸ ಬಗ್ಗೆ ತುಂಬಾ ಆಸಕ್ತಿ ವ್ಯಕ್ತಪಡಿಸಿದರು.
Comments
Post a Comment