Skip to main content

Posts

Showing posts with the label North Karnataka people favourite sweet MADALI

ಉತ್ತರ ಕನಾ೯ಟಕದ ಸಿಹಿ ತಿಂಡಿ ಮಾದಲಿ ಮುಖ್ಯಮಂತ್ರಿಗಳಿದ್ದ ಜೆ.ಹೆಚ್. ಪಟೇಲರಿಗೆ ನಿತ್ಯ ಬೇಕಿತ್ತಂತೆ, ಮಾದಲಿ ಮಾಡುವ ಎರೆಡು ವಿಧಾನಗಳು ಇಲ್ಲಿವೆ ನೋಡಿ.

#ಉತ್ತರ_ಕನ್ನಡದ_ಸರಳ_ರೆಸಿಪಿಯ_ಉತ್ಕೃಷ್ಟ_ಸಿಹಿ #ಮಾದಲಿ   ಮಲೆನಾಡಿನಲ್ಲಿ ಇದು ಪ್ರಚಲಿತವಲ್ಲದ ಸಿಹಿ ತಿಂಡಿ ಶಿವಮೊಗ್ಗ ಜಿಲ್ಲೆಯ ನ್ಯಾಮತಿ ನಂತರ ಇದು ಹೆಚ್ಚು ಪರಿಚಿತ ಆದರೆ ಇದರ ಹೆಸರು ಕೇಳಿದ್ದು ಬಿಟ್ಟರೆ ನನಗೆ ಇದು ನನಗೆ ಸಿಕ್ಕಿರಲಿಲ್ಲ.  ಇತ್ತೀಚಿಗೆ ಇದರ ವಿಚಾರ ಮಾತಾಡುವಾಗ ಹೊಸನಗರ ತಾಲ್ಲೂಕಿನ ಲಾರಿ ಮಾಲಿಕರ ಸಂಘದ ಉಪಾಧ್ಯಕ್ಷರಾದ ಪಾಪುಗೌಡರು "ಹೌದು ಇದು ಉತ್ತರ ಕನ್ನಡ ಜಿಲ್ಲೆಯ ಸಿಹಿ ಈಗೀಗ ಮಲೆನಾಡಿನಲ್ಲಿ ಕೂಡ ಮಾಡುತ್ತಾರೆ " ಅಂದಿದ್ದವರು ಮೊನ್ನೆ ಒಂದು ಡಬ್ಬ ಮಾದಲಿ ಕಳಿಸಿದ್ದಾರೆ.  ಇದನ್ನು ಕಾಸಿದ ತುಪ್ಪದಲ್ಲಿ ಮಿಶ್ರ ಮಾಡಿ ತಿಂದರೆ ಒ0ದು ರುಚಿ, ಹಾಲಿನ ಜೊತೆ ತಿಂದರೆ ಇನ್ನೊಂದು ರುಚಿ ಹಾಗೆ ಹಾಲು ತುಪ್ಪ ಸೇರಿಸಿದರೆ ವಿಶೇಷ ರುಚಿಯ ಸಿಹಿ ತಿಂಡಿ ಆಗುತ್ತದೆ.   ಇದರ ರೆಸಿಪಿ ಸರಳ 250 ಗ್ರಾಂ ಗೋದಿ ತರಿ ತರಿಯಾಗಿ ಹಿಟ್ಟು ಮಾಡಿಕೊಂಡು ತುಪ್ಪದಲ್ಲಿ ಹುರಿಯುತ್ತಾ ಇದಕ್ಕೆ 1 ಟೇಬಲ್ ಸ್ಪೂನ್ ಕಡಲೆ ಹಿಟ್ಟು, 1 ಟೇಬಲ್ ಸ್ಪೂನ್ ಗಸಗಸೆ, ಅದ೯ ಕಪ್ ಬೆಲ್ಲದ ಪುಡಿ, 2 ಟೇಬಲ್ ಸ್ಪೂನ್ ಕೊಬ್ಬರಿ ಪುಡಿ, 2 ಟೇಬಲ್ ಸ್ಪೂನ್ ಬೆಳಗಡಲೆ, 2 ಏಲಕ್ಕಿ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಸೇರಿಸಿ ಹುರಿದರೆ ಉತ್ತರ ಕನ್ನಡದ ಸಿಹಿ ತಿಂಡಿ ಮಾದಲಿ ತಯಾರು.   ಇದನ್ನು ಸುರಕ್ಷಿತವಾಗಿ ಡಬ್ಬಿಯಲ್ಲಿಟ್ಟರೆ ಎರೆಡು ತಿಂಗಳಾದರೂ ಹಾಳಾಗುವುದಿ...