ಬಿ_ಕೃಷ್ಣಪ್ಪ_ದಲಿತ_ಸಂಘರ್ಷ_ಸಮಿತಿ_ಸಂಸ್ಥಾಪಕರು. 9- ಜೂನ್ 1938 ಪ್ರೋಪೆಸರ್ ಬಸಪ್ಪ ಕೃಷ್ಣಪ್ಪರ ಜನ್ಮದಿನ ಇವತ್ತು ಅವರ 88ನೇ ಹುಟ್ಟು ಹಬ್ಬ. ಇವರು ಭದ್ರಾವತಿಯ ಸಿಲ್ವರ್ ಜುಬಿಲಿ ಕಾಲೇಜಿನಲ್ಲಿ (ಈಗಿನ ಸರ್ ಎಂ.ವಿ. ಕಲೆ ಮತ್ತು ವಾಣಿಜ್ಯ ಕಾಲೇಜು) ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕರ್ನಾಟಕದಲ್ಲಿ ನಡೆದ #ಬೂಸಾ ಚಳವಳಿಯ ನಂತರ ದಲಿತರಲ್ಲಿ ಜಾಗೃತಿ ಉಂಟಾಯಿತು. ಈ ಹಿನ್ನೆಲೆಯಲ್ಲಿ 1974ರಲ್ಲಿ ಬಿ. ಕೃಷ್ಣಪ್ಪ, #ದೇವನೂರುಮಹಾದೇವ, #ಸಿದ್ದಲಿಂಗಯ್ಯ ಮುಂತಾದ ಪ್ರಮುಖ ಪ್ರಗತಿಪರ ಚಿಂತಕರೊಂದಿಗೆ ಸೇರಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್) ಯನ್ನು ಸ್ಥಾಪಿಸಿದರು. ಕೃಷ್ಣಪ್ಪನವರು ಈ ಸಂಘಟನೆಯ ರಾಜ್ಯ ಸಂಚಾಲಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ತಳಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಿದರು. ಇವರು ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆ ಮತ್ತು ಮಾರ್ಕ್ಸ್‌ವಾದಿ ತತ್ವಗಳಿಂದ ಆಳವಾಗಿ ಪ್ರಭಾವಿತರಾಗಿದ್ದರು. ಜಾತಿ ಪದ್ಧತಿಯ ನಿರ್ಮೂಲನೆ, ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಪ್ರತಿಭಟನೆ, ಭೂ ರಹಿತ ದಲಿತರಿಗೆ ಭೂಮಿ ಕೊಡಿಸುವುದು ಮತ್ತು ಶಿಕ್ಷಣದ ಹಕ್ಕುಗಳಿಗಾಗಿ ರಾಜ್ಯಾದ್ಯಂತ ಹಗಲಿರುಳು ಶ್ರಮಿಸಿದರು. ಇವರ ಹೋರಾಟ ಅದು ಕೇವಲ ನಗರ ಕೇಂದ್ರಿತವಾಗಿರದೆ, ಕರ್ನಾಟಕದ ಹಳ್ಳಿ ಹಳ್ಳಿಗಳಿಗೂ ತಲುಪಿ ಶೋಷ...