#ಹುಲಿ_ವೇಷ #ಹುಲಿ_ನರ್ತನ #ಹುಲಿ_ವೇಷದ_ಮೂಲ_ಎಲ್ಲಿ ? #ದಸರಾ_ಕೃಷ್ಣಜನ್ಮಾಷ್ಟಮಿ_ಗಣೇಶಚತುರ್ಥಿ_ಓಣಂಗಳಲ್ಲಿ_ಹುಲಿವೇಷ #ದುರ್ಗಾದೇವಿಯ_ವಾಹನ_ಹುಲಿ #ಮನುಷ್ಯ_ಹುಲಿಯಾಗಿ_ಬದಲಾಗಿ_ದೇವರ_ಸೇವೆಯ_ಹುಲಿವೇಷ, #ಕರಾವಳಿಯ_ಹುಲಿವೇಷ_ಕೇರಳದ_ಪುಲಿಕಲಿ #hulivesh #pulinalike #bhagnach #durgadevi #dussara #tiger ದಸರಾ ಮಹೋತ್ಸವದಲ್ಲಿ ಹುಲಿ ವೇಷ ಹೆಚ್ಚು ಪ್ರಸಿದ್ಧಿ ಪಡೆದಿದೆ ಇದಕ್ಕೆ ಕಾರಣ ದುಗಾ೯ ದೇವಿ ವಾಹನ ಹುಲಿ ಕೂಡ ಆಗಿರುವುದು. ಕರಾವಳಿಯ ಹುಲಿ ವೇಷ, ಕೇರಳದ ಪುಲಿ ನಲಿಕೆ, ಒಡಿಷಾದ ಬಾಗ್ ನಾಚ್, ನಾಗಪುರದ ಮಾನವೀ ವಾಗ್, ತಮಿಳುನಾಡಿನ ಪುಲಿಯಟ್ಟಮ್ ಗಳು ಮನುಷ್ಯ ಹುಲಿಯಾಗಿ ಬದಲಾಗಿ ದೇವಿಯ ಸೇವೆ ಮಾಡುವುದು ಆಗಿದೆ. ನಮ್ಮ ಆನಂದಪುರಂನಲ್ಲಿ ಪ್ರತಿ ದಸರಾದಲ್ಲಿ ಹುಲಿ ವೇಷ ಹಾಕುತ್ತಿದ್ದವರು ಸ್ಕೂಲ್ ಜಗನಾಥಣ್ಣ ಅದೂ ಆಯಿಲ್ ಪೇಯಿಂಟ್ ನಲ್ಲಿ ಹುಲಿಯಾಗಿ ಕುಣಿಯುತ್ತಿದ್ದರು ಜೊತೆಗೆ ಕುಪ್ಪಣ್ಣನ ಹಲಿಗೆಯ ನಕ್ಕ-ಚಕ್ಕ ಆಕರ್ಷಣೆ ಊರಿಗೆಲ್ಲ ಮನೋರಂಜನೆ ಆಗಿರುತ್ತಿತ್ತು. ಈ ಹುಲಿ ವೇಷ ಏಕೆ? ಅದರ ಮೂಲ ಎಲ್ಲಿ? ಎಂಬ ಪ್ರಶ್ನೆಗಳಿಗೆ ಉತ್ತರ ಕೂಡ ಆಸಕ್ತಿದಾಯಕವಾಗಿದೆ. ಕರಾವಳಿಯಲ್ಲಿ ನವರಾತ್ರಿಯಲ್ಲಿ ಮನುಷ್ಯ ಹುಲಿಯಾಗಿ ಬದಲಾಗಿ ದೇವಿ ಸೇವೆ ಮಾಡುವುದೇ ಹುಲಿ ವೇಷ ಮತ್ತು ದುರ್ಗಾ ದೇವಿಯ ವಾಹನ ಹುಲಿ ಎಂಬುದು ಇಲ್ಲಿ ಗಮನಾರ್ಹ ವಿಷಯವಾಗಿದೆ. 200 ವರ್ಷದ ಹಿಂದೆ ಕೇರಳದ ಮಹಾರ...