2015 ರ ಬಾರಾಪಂತ್ ಯಾತ್ರೆಯಲ್ಲಿನ ಪಾತ್ರಾದೇವತೆಯ ವಿಶೇಷ ಪೂಜಾ ಪ್ರಸಾದ ಮುಂದಿನ 12 ವರ್ಷದ ವರೆಗೆ ಸಂರಕ್ಷಿಸಿಡಲು ನನಗೆ ನೀಡಿದ ಸಂತರು, ಅವರು ಅಕಸ್ಮಿಕವಾಗಿ ನಮ್ಮಲ್ಲಿಗೆ ಬರಲು ಕಾರಣ ಒಂದು ಪವಾಡವೇ?
ನಾಸಿಕ್ ಕುಂಭಮೇಳ ಸಂಪನ್ನವಾದ ಮರುದಿನ (2015 ರಲ್ಲಿ) ನಾಸಿಕ್ ನಿಂದ ಪಶ್ಚಿಮ ಘಟ್ಟ ತಪ್ಪಲಲ್ಲೇ ನೂರಾರು (2015 ರಲ್ಲಿ ಸುಮಾರು 600) ಸಂತರು ನಡೆದು ಬಂದು ಮಂಗಳೂರಿನ ಕದ್ರಿ ಮಂಜುನಾಥ ಸ್ವಾಮಿ ದೇವಾಲಯ ತಲುಪುವ ಬಾರಾಪಂತ್ ಯಾತ್ರೆ ಬಗ್ಗೆ ಈಗೆಲ್ಲ ಕನಾ೯ಟಕ ರಾಜ್ಯದಲ್ಲಿ ಹೆಚ್ಚಿನ ಮಾಹಿತಿ ಇದೆ. ಬಾರಾಪಂತ್ಯ ಯಾತ್ರೆ ಸಮಾರೋಪಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಗೋರಕ್ ಪುರದ ಮಹಾಂತರಾದ ಜೋಗಿ ಆದಿತ್ಯನಾಥರು ಕೂಡ ಭಾಗವಹಿಸಿದ್ದರು. ಈ ಯಾತ್ರೆ ಮುಗಿದ ನಂತರ ಭಾಗವಹಿಸಿದ ಅನೇಕ ಸಂತರು ಮಂಗಳೂರಿ೦ದ ವಾಪಾಸ್ ಹೋಗುತ್ತಾರೆ. ಈ ರೀತಿ ಒಂದು ತಂಡ ಮಂಗಳೂರಿಂದ ತಾವು ನಡೆದು ಬಂದ ದಾರಿಯಲ್ಲೇ ಹಾವೇರಿ ಜಿಲ್ಲೆಯ ಲೋಕಿ ಮಠಕ್ಕೆ ಹೋಗಿ ಅಲ್ಲಿಂದ ರೈಲಿನಲ್ಲಿ ಅವರ ಮೂಲ ಸ್ಥಳಗಳಿಗೆ ಹೋಗುವ ಉದ್ದೇಶದಿಂದ ಭಕ್ತರು ವ್ಯವಸ್ಥೆ ಮಾಡಿದ 3 ಕಾರುಗಳಲ್ಲಿ ಹೊರಟಿದ್ದರು, ದಾರಿ ತಪ್ಪಿ ನನ್ನ ಮಲ್ಲಿಕಾ ವೆಜ್ ರೆಸ್ಟಾರಂಟ್ ತಲುಪಿದ್ದರು. ಹೋಟೆಲ್ ನವರಿಗೆ ಕುಚಿ೯ ತಂದು ಹೊರಗೆ ಹಾಕು ನಾವು ಹೋಟೆಲ್ ಒಳಗೆ ಬರುವುದಿಲ್ಲ ಅಂತ ಅದೇಶ ಮಾಡಿದಾಗ ಸಿಬ್ಬಂದಿಗಳು ಗಾಭರಿ ಆಗಿದ್ದರು ಆಗ ನನ್ನ ಅಣ್ಣನ ಮಗ ನನ್ನ ಜೊತೆ ಬಾರಾಪಂತ್ ಯಾತ್ರೆ ಹೋಗುವಾಗ ನೋಡಿದ್ದರಿಂದ ಮತ್ತು ಹೊಸನಗರ ತಾಲ್ಲೂಕಿನ ಆಲಗೇರಿ ಮಂಡ್ರಿಯಲ್ಲಿ ನಡೆದ ಸತ್ಸಂಗ ಪೂಜೆಯಲ್ಲಿ ಭಾಗವಹಿಸಿದ್ದರಿಂದ ತಕ್ಷಣ ಅವರಿಗೆ ಹೋಟೆಲ್ ಹ...