Skip to main content

Posts

Showing posts with the label Jigalemane Ganapathi bhat writes on me

Blog number 1911. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವರದಳ್ಳಿ ಶ್ರೀಧರಾಶ್ರಮದ ಸಮೀಪದ ಜಿಗಳೆ ಮನೆ ಗಣಪತಿ ಭಟ್ಟರು ನನ್ನ ಬಗ್ಗೆ ಬರೆದ ಲೇಖನ.

ಇಲ್ಲಿ ಕೆಳಗೆ ಚಿತ್ರದ ರೂಪದಲ್ಲಿ ಹಾಕಿದ ಲೇಖನ ಶ್ರೀ ಅರುಣ ಪ್ರಸಾದ್ ಅವರದ್ದು. ಅರುಣ ಪ್ರಸಾದ್ ಅವರು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು,ರಾಮಚಂದ್ರಾಪುರ ಮೂಲಮಠಕ್ಕೆ ಹತ್ತಿರ ಇರುವ ಅನಂತಪುರದವರು.ಇವರ ಅರ್ಧಾಂಗಿ ಹವ್ಯಕರು. ಹೊಸ ನೆಂಟಸ್ತಾನ ದೀಕ್ಷಿತರೊಬ್ಬರೊಂದಿಗೆ ಆಗಿದೆ.ಬಾಲ್ಯದಲ್ಲಿಯೇ ಬ್ರಹ್ಮಚರ್ಯ ವೇ ಜೀವನ ವೀರ್ಯ ನಾಶವೇ ಮೃತ್ಯು ಎಂಬಂತಹ ಪುಸ್ತಕಗಳನ್ನು ಓದಿ ಬ್ರಾಹ್ಮಣ್ಯವನ್ನು ತಡಕಾಡಿದವರು.ಬ್ರಾಹ್ಮಣರು ಬ್ರಾಹ್ಮಣ್ಯ ಕಾಪಾಡಿಕೊಳ್ಳ ಬೇಕೆಂದು ಬಯಸುವವರು.ತಾತ್ವಿಕ ವಾದ ಬ್ರಾಹ್ಮಣ್ಯವನ್ನು ಗೌರವಿಸುವವರು.ಬ್ರಾಹ್ಮಣ್ಯ ದ ಆಚರಣೆ ಇಲ್ಲದೆ ಬ್ರಾಹ್ಮಣರ ದೊಡ್ಡಸ್ತಿಕೆ ತೋರಿಸುವುದನ್ನು ವಿರೋಧಿಸಲು ಹಿಂದೆಗೆಯದವರು.ಬ್ರಾಹ್ಮಣ್ಯದ ಆಚರಣೆ ಇಲ್ಲದೆ ಕೇವಲ ಹುಟ್ಟಿನಿಂದ ಬ್ರಾಹ್ಮಣರು ಎಂದುಕೊಂಡು ತಮ್ಮದು ಮೇಲ್ವರ್ಗ ಎಂಬ ಗರ್ವವನ್ನು ಒಪ್ಪದವರು.ಬ್ರಾಹ್ಮಣ್ಯ ಆಚರಿಸಿ ಗೌರವ ಪಡೆಯಿರಿ ಎಂಬುದು ಅವರ ವಾದ.ಯಾವ ಆದರ್ಶವನ್ನು ಪೋಷಿಸಿಕೊಳ್ಳದೆ ಕುಡಿದು ತಿಂದು ಮಾಡುವಂತಹದೆನೆಲ್ಲಾ ಮಾಡಿ ದೊಡ್ಡ ವಿಭೂತಿ, ಮಡಿ ಉಟ್ಟು ಬ್ರಾಹ್ಮಣಿಕೆಯ ದೌಲು ಹಾರಿಸುವುದು ಇವರಿಗೆ ಹಿಡಿಸುವುದಿಲ್ಲ.ಹಣಕ್ಕಿಂತ ಧರ್ಮಕ್ಕೆ ಹೆಚ್ಚು ಒತ್ತು ಕೊಟ್ಟು ಭಾಳ್ವೆ ಮಾಡುವ ಬ್ರಾಹ್ಮಣರ ಬಗ್ಗೆ ಇವರಿಗಿರುವ ಗೌರವವನ್ನು ನಾನಂತೂ ಕಂಡಿದ್ದೇನೆ. ಮುಂಚೆ ರಾಜಕೀಯ ದಲ್ಲಿ ಇದ್ದು ಕೆಲವು ಚೌಕಟ್ಟು ಗಳಿಗೆ ಬಂಧಿಯಾಗಿದ್ದರು.ಈಗ ಯಾವ ಮುಲಾಜು ಇಲ್ಲದೆ ಅಭಿಪ್...