Blog number 1688. ಲಿಂಗಾಯಿತ ದಳವಾಯಿ ಅಕ್ಕಮ್ಮನಿಗೆ ನ್ಯಾಯ ಕೊಡಿಸಿದ ದೀವರ ಮಂಡಾನಿ ಯುವಕ ಅದಕ್ಕೆ ಪಂಚಾಯಿತಿದಾರರ ನ್ಯಾಯ ಪಂಚಾಯಿತಿ ತೀರ್ಪು ನ್ಯಾಯವೆ?... ದುರಂತ ಕಥೆ.
#ಸುದೀಂದ್ರಭಂಡಾರ್ಕರ್_ಸಶೇಷ_ಐತಿಹಾಸಿಕ_ಕಾದಂಬರಿಯಲ್ಲಿ. #ದಳವಾಯಿ_ವಂಶದ_ಅಕ್ಕಮ್ಮ_ಮಾಸ್ತಿಯಾದ_ನಿಜಕಥೆ. #ದೀವರಮಂಡಾನಿ_ಯುವಕನನ್ನ_ನೇಣಿಗೇರಿಸಿ_ಲಿಂಗಾಯಿತ_ಅಕ್ಕಮ್ಮನ_ಸತಿ_ಮಾಡಿದ_ಪ೦ಚಾಯಿತಿ. #ಅವಳನ್ನು_ಅಕ್ಕಮಹಾದೇವಿಗೆ_ಹೋಲಿಕೆ_ಮಾಡಿ_ಗುಡಿ_ಕಟ್ಟಿದ್ದಾರೆ. #ಕೆಳದಿಸಂಸ್ಥಾನದ_ಪ್ರಥಮ_ಕವಿ_ತುರಂಗಬಾರತ_18ಪರ್ವ_ರಚಿಸಿದ_ಲಕ್ಷ್ಮೀಷ್_ನಿಟ್ಟೂರಿನವರು. #ಭೀಮನಕೋಣೆಯ_ಲಕ್ಷ್ಮೀನಾರಾಯಣ_ದೇವಾಲಯದ_ಅರ್ಚಕರಾಗಿರುತ್ತಾರೆ. #ಹೆಗ್ಗೋಡಿನ_ರಸ್ತೆಗೆ_ಕವಿ_ಲಕ್ಷ್ಮೀಷ್_ನಾಮಕರಣ_ಮಾಡಿದ್ದಾರೆ. ಅಕ್ಕಮ್ಮ.....ಹಿಂದೆ ಅಳಿದು ಹೋದ ದಳವಾಯಿ ಲಿಂಗಪ್ಪನ ವಂಶದವಳು. ಟಿಪ್ಪು ಅಂತ್ಯವಾಗಿ ಮೈಸೂರಿನವರ ಆಡಳಿತ ಮುಗಿದ ಬಿದನೂರು ಸಾಮ್ರಾಜ್ಯದಲ್ಲಿ ಯಾರು ಬಲಿಷ್ಟರೋ ಆ ಜಮೀ ನ್ದಾರನದೇ ಸುಬೇದಾರಿಕೆ. ಆ ಗ್ರಾಮ ಬಲಿಷ್ಟ ದೀವರು - ಶೈವ ದಳವಾಯಿಗಳ ಪ್ರದೇಶ ಅಲ್ಲಿಯವರೆಗೆ ಅನ್ಯೋನ್ಯವಾಗಿದ್ದರು. ಇಲ್ಲಿದ್ದರು ದಳವಾಯಿ ವಂಶದ ಸಹೋದರರು... ಅಣ್ಣ ಶಿವಪ್ಪ ಗೌಡ ತಮ್ಮ ವೀರಭದ್ರಪ್ಪ ಗೌಡ, ಶಿವಪ್ಪ ಗೌಡ ಸಾದು, ಸಾತ್ವಿಕ.ಪತ್ನಿ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿನ ಸಂಸಾರ. ತಮ್ಮ ವೀರಭದ್ರಗೌಡ ಇದಕ್ಕೆ ತದ್ವಿರುದ್ದ. ಕ್ರೂರಿ ಇಂತಹ ಕಾಲದಲ್ಲೇ ಅಣ್ಣ ಶಿವಪ್ಪ ಗೌಡ ತೀರಿಕೊಳ್ಳುತ್ತಾರೆ, ಶಿವಪ್ಪ ಗೌಡನ ಪತ್ನಿ, ಮಗ ಮತ್ತು ಪುತ್ರಿ ದುಷ್ಟ ವೀರಭದ್ರಪ್ಪನ ಅಡಿಯಲ್ಲಿ ಬಾಳಬೇಕಾಗುತ್ತದೆ. ಅಣ್ಣನ ಸಣ್ಣ ಬಾಲಕನನ್ನು...