Skip to main content

Posts

Showing posts with the label 102 Birthday of S.R.Rao.His born place Anandapuram (2-July-1922)

Blog number 2232. ಆನಂದಪುರಂನಲ್ಲಿ ಜನಿಸಿದ ದ್ವಾರಕಾ ಸಂಶೋಧಿಸಿದ S.R. ರಾವ್ ಅವರ 102 ನೇ ಜನ್ಮೋತ್ಸವ (2-ಜುಲ್ಟೆ-1922)

#ದ್ವಾರಕೆ_ಸಂಶೋಧಿಸಿದ_S_R_ರಾವ್_102ನೇ_ಜನ್ಮ_ಮಹೋತ್ಸವ    #ಡಾಕ್ಟರ್_ಶಿಕಾರಿಪುರ_ರಂಗನಾಥರಾವ್_ಹುಟ್ಟಿದ್ದು_ಆನಂದಪುರಂನಲ್ಲಿ.  #ಶ್ರೀಕೃಷ್ಣನ_ಮುಳುಗಿದ_ದ್ವಾರಕಾ_ನಗರಿ #ಇಂಡಸ್_ನಾಗರಿಕತೆಯ_ಹರಪ್ಪ_ಮಹೆಂಜೊದಾರ್_ಉತ್ಕನನ #ಇಂಡಸ್_ಕಾಲದ_ಬಂದರು_ಲೋಥಲ್_ಹೀಗೆ_ಅನೇಕ_ಸಂಶೋದನೆ_ಉತ್ಕನದ_ನೇತೃತ್ವ_ಇವರದ್ದು. #ಭಾರತದ_ಮಹಾಭಾರತದ_ಶ್ರೀಕೃಷ್ಣ_ಕಾಲ್ಪನಿಕ_ಅಲ್ಲ_ಸತ್ಯ_ಎಂದು_ಸಾಬೀತು_ಮಾಡಿದ_ಇವರ_ಸಂಶೋದನೆ.       ಇವರ ತಂದೆ ಕೃಷ್ಣ ಪ್ರಸಾದರು ಆನಂದಪುರದಲ್ಲಿ ಬ್ರಿಟಿಷರ ಆಡಳಿತ ಕಾಲದಲ್ಲಿ ಶೇಖ್ದಾರರು,ಇವರು ಶಿಕಾರಿಪುರ ಮೂಲದ ಮಾದ್ವ ಬ್ರಾಹ್ಮಣರು,ಆನಂದಪುರಂ ನಲ್ಲಿ ಉದ್ಯೋಗಕ್ಕೆ ಬಂದಾಗ ಆನಂದಪುರದ ರಂಗನಾಥ ಸ್ವಾಮಿ ದೇವಾಲಯದ ಅಗ್ರಹಾರದ ವೇದನಾನಾರಾಯಣ ಭಟ್ಟರ ಕುಟುಂಬಕ್ಕೆ (ರಂಗನಾಥ ಭಟ್ಟರ ತಂದೆ) ಸೇರಿದ ಮನೆಯಲ್ಲಿ ವಾಸವಾಗಿರುತ್ತಾರೆ, ಈ ಮನೆ ಎದುರೇ ಮಾಧ್ವ ಬ್ರಾಹಣರಾದ ಶಿಕ್ಷಕರಾಗಿದ್ದ ಶೇಷಾಚಾರ್ ( ಪ್ರಾಣೇಶ್ ಆಚಾರ್ ತಂದೆ) ಮನೆ, ಈಗ S.R.ರಾವ್ ಜನಿಸಿದ ಮನೆ ಜಾಗದಲ್ಲಿ ರಂಗನಾಥ ಭಟ್ಟರ  ಸಹೋದರ ಸುಂದರೇಶ್ ಅವರ ಮನೆ ಇದೆ.     ಒಂದು ವಿಶೇಷ ಘಟನೆ ಇಲ್ಲಿ ನಮೂದಿಸಬೇಕು, ಎಸ್.ಆರ್ . ರಾವ್ ಅವರ ತಾಯಿ ಹೊಟ್ಟೆಯಲ್ಲಿದ್ದಾಗ ನಡೆದದ್ದು.... ತಾಯಿಗೆ ಹೆರಿಗೆ ದಿನ ಸಮೀಪಿಸುವಾಗ ಅವರ ಸಂಪ್ರದಾಯದಂತೆ ನೀರು ಎರೆಸಿಕೊಳ್ಳಲು ತಯಾರಾಗಿ ತಮ್ಮ ಆಭರಣಗಳನ್ನು ಪೆಟ್ಟಿಗೆಯೊಂದರಲ್ಲಿ ಭದ್...